Asia cup 2025: ಔಪಚಾರಿಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ

India vs Oman Asia Cup 2025: 2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಒಮಾನ್ ನಡುವಿನ ಅಂತಿಮ ಗುಂಪು ಪಂದ್ಯ ಅಬುಧಾಬಿಯಲ್ಲಿ ನಡೆಯುತ್ತಿದೆ. ಈಗಾಗಲೇ ಸೂಪರ್ ಫೋರ್‌ಗೆ ಅರ್ಹತೆ ಪಡೆದಿರುವ ಭಾರತ, ತನ್ನ ಗೆಲುವಿನ ಸರಣಿಯನ್ನು ಮುಂದುವರಿಸುವ ಗುರಿ ಹೊಂದಿದೆ. ಒಮಾನ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. ಭಾರತ ತನ್ನ ಆಡುವ XIಯಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ.

Asia cup 2025: ಔಪಚಾರಿಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ
India Vs Oman

Updated on: Sep 19, 2025 | 7:50 PM

2025 ರ ಏಷ್ಯಾಕಪ್‌ನ (Asia Cup 2025) ಅಂತಿಮ ಗುಂಪು ಪಂದ್ಯವು ಭಾರತ ಮತ್ತು ಒಮಾನ್ (India vs Oman) ನಡುವೆ ಅಬುಧಾಬಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಗುರಿಯನ್ನು ಭಾರತ ತಂಡ ಹೊಂದಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಈಗಾಗಲೇ ಸೂಪರ್ ಫೋರ್‌ಗೆ ಅರ್ಹತೆ ಪಡೆದಿದ್ದು, ಸೆಪ್ಟೆಂಬರ್ 21 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಇತ್ತ ಒಮಾನ್ ತಂಡ ಆಡಿರುವ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಕಾರಣ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದ್ದು, ಈ ಪಂದ್ಯ ಒಮಾನ್ ತಂಡಕ್ಕೆ ಕೇವಲ ಔಪಚಾರಿಕವಾಗಿದೆ. ಉಭಯ ತಂಡಗಳ ನಡುವಿನ ಈ ಪಂದ್ಯದ ಟಾಸ್ ಮುಗಿದಿದ್ದು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

ಟಾಸ್ ಗೆದ್ದ ಭಾರತ

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿರುವುದಾಗಿ ನಾಯಕ ಸೂರ್ಯಕುಮಾರ್ ಯಾದವ್ ಘೋಷಿಸಿದ್ದಾರೆ. ಅದರಂತೆ ವರುಣ್ ಚಕ್ರವರ್ತಿ ಬದಲಿಗೆ ಹರ್ಷಿತ್ ರಾಣಾ ಮತ್ತು ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇತ್ತ ಒಮಾನ್ ಕೂಡ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ.

ಉಭಯ ತಂಡಗಳು

ಟೀಂ ಇಂಡಿಯಾ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್.

ಒಮಾನ್ ಪ್ಲೇಯಿಂಗ್ XI: ಅಮೀರ್ ಕಲೀಂ, ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ (ವಿಕೆಟ್ ಕೀಪರ್), ಶಾ ಫೈಸಲ್, ಜಿಕಾರಿಯಾ ಇಸ್ಲಾಂ, ಆರ್ಯನ್ ಬಿಶ್ತ್, ಮೊಹಮ್ಮದ್ ನದೀಮ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ, ಜಿತೇನ್ ರಮಾನಂದಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Fri, 19 September 25