Asia Cup 2022: ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ದ ಪಾಕಿಸ್ತಾನ್ (India vs Pakistan) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್ನಲ್ಲಿ 7 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಏಷ್ಯಾಕಪ್ನಲ್ಲಿ ಇದುವರೆಗೆ ಭಾರತ-ಪಾಕಿಸ್ತಾನ್ 16 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಟೀಮ್ ಇಂಡಿಯಾ 9 ಪಂದ್ಯಗಳಲ್ಲಿ ಪಾಕ್ ತಂಡಕ್ಕೆ ಸೋಲುಣಿಸಿದೆ. ಇನ್ನು ಪಾಕಿಸ್ತಾನ್ ಗೆದ್ದಿದ್ದು ಕೇವಲ 6 ಪಂದ್ಯಗಳಲ್ಲಿ ಮಾತ್ರ. ಹಾಗೆಯೇ 1997 ರಲ್ಲಿ ಒಂದು ಪಂದ್ಯವು ರದ್ದಾಗಿತ್ತು.
ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ
ಟೀಮ್ ಇಂಡಿಯಾ ಪ್ಲೇಯಿಂಗ್ XI: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಪಾಕಿಸ್ತಾನ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶದಾಬ್ ಖಾನ್, ಆಸಿಫ್ ಅಲಿ, ಫಖರ್ ಝಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಝ್ವಾನ್ (ವಿಕೆಟ್‌ಕೀಪರ್), ಹಸನ್ ಅಲಿ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾದಿರ್.
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
ಕೊನೆಯ ಓವರ್ನಲ್ಲಿ ರೋಚಕ ಜಯ ಸಾಧಿಸಿದ ಪಾಕ್
ಅರ್ಷದೀಪ್ ಸಿಂಗ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಆಸೀಫ್ ಅಲಿ (16)
ಅರ್ಷದೀಪ್ ಸಿಂಗ್ ಎಸೆದ ಫುಲ್ ಟಾಸ್ ಎಸೆತಕ್ಕೆ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಆಸೀಫ್
ಕೊನೆಯ ಓವರ್ನಲ್ಲಿ 7 ರನ್ಗಳ ಅವಶ್ಯಕತೆ
ಭುವಿ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಆಸೀಫ್ ಅಲಿ
ಭುವಿ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ಖುಷ್ದಿಲ್ ಶಾ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಆಸೀಫ್
ಪಾಕಿಸ್ತಾನಕ್ಕೆ ಗೆಲ್ಲಲು 26 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಆಸೀಫ್-ಖುಷ್ದಿಲ್ ಬ್ಯಾಟಿಂಗ್
ಅಸೀಫ್ ಅಲಿಯ ಸುಲಭ ಕ್ಯಾಚ್ ಡ್ರಾಪ್ ಮಾಡಿದ ಅರ್ಷದೀಪ್ ಸಿಂಗ್
18 ಎಸೆತಗಳಲ್ಲಿ 34 ರನ್ಗಳ ಅವಶ್ಯಕತೆ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದ ರಿಜ್ವಾನ್ (71)
ಟೀಮ್ ಇಂಡಿಯಾಗೆ ಬಿಗ್ ವಿಕೆಟ್…ಕುತೂಹಲಘಟ್ಟದತ್ತ ಪಂದ್ಯ
ಪಾಂಡ್ಯ ಎಸೆತದಲ್ಲಿ ಆನ್ ಸೈಡ್ನತ್ತ ಭರ್ಜರಿ ಫೋರ್ ಬಾರಿಸಿದ ರಿಜ್ವಾನ್
24 ಎಸೆತಗಳಲ್ಲಿ 43 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ರಿಜ್ವಾನ್-ಖುಷ್ದಿಲ್ ಶಾ ಬ್ಯಾಟಿಂಗ್
ಭುವಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ..ಬೌಂಡರಿ ಲೈನ್ನಲ್ಲಿ ಹೂಡಾ ಹಿಡಿದ ಉತ್ತಮ ಕ್ಯಾಚ್ಗೆ ನವಾಜ್ (40) ಔಟ್
ಚಹಾಲ್ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಫೋರ್ ಬಾರಿಸಿದ ರಿಜ್ವಾನ್
ಈ ಓವರ್ನಲ್ಲಿ 3 ಫೋರ್ ಬಾರಿಸಿದ ಪಾಕ್ ಬ್ಯಾಟ್ಸ್ಮನ್ಗಳು
ಚಹಾಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಬಾರಿಸಿದ ನವಾಜ್
ಪಾಂಡ್ಯ ಬೌನ್ಸರ್…ನವಾಜ್ ಬ್ಯಾಟ್ ಎಡ್ಜ್…ಕೀಪರ್ ತಲೆಯ ಮೇಲಿಂದ ಚೆಂಡು ಬೌಂಡರಿಗೆ…ಫೋರ್
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ನವಾಜ್
ಅರ್ಷದೀಪ್ ಸಿಂಗ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ನವಾಜ್
37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಿಜ್ವಾನ್
ಬಿಷ್ಣೋಯ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ನವಾಜ್
ಚಹಾಲ್ ಎಸೆದ ಫುಲ್ ಟಾಸ್ ಎಸೆತಕ್ಕೆ ಭರ್ಜರಿ ಸಿಕ್ಸ್ ಸಿಡಿಸಿದ ರಿಜ್ವಾನ್
ಕ್ರೀಸ್ನಲ್ಲಿ ರಿಜ್ವಾನ್-ನವಾಜ್ ಬ್ಯಾಟಿಂಗ್
ಪಾಕ್ಗೆ ಗೆಲ್ಲಲು 60 ಎಸೆತಗಳಲ್ಲಿ 106 ರನ್ಗಳ ಅವಶ್ಯಕತೆ
ಪಾಂಡ್ಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮೊಹಮ್ಮದ್ ನವಾಜ್
ಚಹಾಲ್ ಎಸೆತದಲ್ಲಿ ಥರ್ಡ್ ಮ್ಯಾನ್ ಫೀಲ್ಡರ್ನತ್ತ ಬೌಂಡರಿ ಬಾರಿಸಿದ ನವಾಜ್
ಚಹಾಲ್ ಎಸೆತದಲ್ಲಿ ಫಖರ್ ಝಮಾನ್ ಭರ್ಜರಿ ಶಾಟ್…ಬೌಂಡರಿ ಲೈನ್ನಲ್ಲಿ ಕ್ಯಾಚ್ ಹಿಡಿದ ಕೊಹ್ಲಿ..ಔಟ್
ಚಹಾಲ್ ಎಸೆತದಲ್ಲಿ ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಫಖರ್ ಝಮಾನ್
ಕ್ರೀಸ್ನಲ್ಲಿ ಫಖರ್ ಝಮಾನ್-ರಿಜ್ವಾನ್ ಬ್ಯಾಟಿಂಗ್
ಚಹಾಲ್ ಎಸೆತದಲ್ಲಿ ಲಾಂಗ್ ಆಫ್ನತ್ತ ಬೌಂಡರಿ ಬಾರಿಸಿದ ರಿಜ್ವಾನ್
ಕ್ರೀಸ್ನಲ್ಲಿ ಫಖರ್ ಝಮಾನ್-ರಿಜ್ವಾನ್ ಬ್ಯಾಟಿಂಗ್
ಅರ್ಷದೀಪ್ ಎಸೆತಕ್ಕೆ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಜ್ವಾನ್
ಪಾಂಡ್ಯ ಎಸೆದ 5ನೇ ಓವರ್ನಲ್ಲಿ 14 ರನ್ ಕಲೆಹಾಕಿದ ಫಖರ್-ರಿಜ್ವಾನ್
ಒಂದೇ ಓವರ್ನಲ್ಲಿ 3 ಫೋರ್
ಪಾಂಡ್ಯ ಎಸೆತದಲ್ಲಿ ಸ್ಕ್ವೇರ್ ಲೆಗ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರಿಜ್ವಾನ್
ರವಿ ಬಿಷ್ಣೋಯ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಬಾಬರ್ ಆಜಂ (14)
ಭುವಿ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಬಾಬರ್ ಆಜಂ
ಕ್ರೀಸ್ನಲ್ಲಿ ಬಾಬರ್-ರಿಜ್ವಾನ್ ಬ್ಯಾಟಿಂಗ್
ಭುವನೇಶ್ವರ್ ಕುಮಾರ್ ಅವರ ಮೊದಲ ಓವರ್ನಲ್ಲಿ 2 ಫೋರ್ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದ ಪಾಕಿಸ್ತಾನ್
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿದೆ. ಈ ಮೂಲಕ ಪಾಕಿಸ್ತಾನ್ ತಂಡಕ್ಕೆ 182 ರನ್ಗಳ ಟಾರ್ಗೆಟ್ ನೀಡಿದೆ.
2 ರನ್ ಕದಿಯುವ ಯತ್ನದಲ್ಲಿ ರನೌಟ್ ಆದ ವಿರಾಟ್ ಕೊಹ್ಲಿ (60)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ಭುವನೇಶ್ವರ್ ಕುಮಾರ್ ಬ್ಯಾಟಿಂಗ್
ನಸೀಮ್ ಶಾ ಎಸೆತದಲ್ಲಿ ಹೂಡಾ ಭರ್ಜರಿ ಹಿಟ್…ಬೌಂಡರಿ ಲೈನ್ನಲ್ಲಿ ಕ್ಯಾಚ್…ದೀಪಕ್ ಹೂಡಾ (16) ಔಟ್
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ದೀಪಕ್ ಹೂಡಾ ಬ್ಯಾಟಿಂಗ್
ಕ್ರೀಸ್ನಲ್ಲಿ ದೀಪಕ್ ಹೂಡಾ-ವಿರಾಟ್ ಕೊಹ್ಲಿ ಬ್ಯಾಟಿಂಗ್
ಕ್ರೀಸ್ನಲ್ಲಿ ಕೊಹ್ಲಿ-ಹೂಡಾ ಬ್ಯಾಟಿಂಗ್
ಹಸ್ನೈನ್ ಎಸೆತದಲ್ಲಿ ಪಾಂಡ್ಯ ಔಟ್
ಫ್ರಂಟ್ ಫೀಲ್ಡರ್ ಖುಷ್ದಿಲ್ ಶಾ ಹಿಡಿದ ಉತ್ತಮ ಕ್ಯಾಚ್ನಿಂದ ಹೊರ ನಡೆದ ಪಾಂಡ್ಯ (0)
ಕ್ರೀಸ್ನಲ್ಲಿ ಕೊಹ್ಲಿ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
ಶಾದಾಬ್ ಖಾನ್ ಎಸೆತದಲ್ಲಿ ರಿವರ್ಸ್ ಸ್ವೀಪ್ಗೆ ಯತ್ನ…ಸುಲಭ ಕ್ಯಾಚ್ ನೀಡಿ ಹೊರನಡೆದ ರಿಷಭ್ ಪಂತ್ (14)
ನಸೀಮ್ ಶಾ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಂತ್
ನಸೀಮ್ ಶಾ ಎಸೆತದಲ್ಲಿ ಡೀಪ್ ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ
ಕ್ರೀಸ್ನಲ್ಲಿ ಪಂತ್ – ಕೊಹ್ಲಿ ಬ್ಯಾಟಿಂಗ್
ಹಸ್ನೈನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ
ಕ್ರೀಸ್ನಲ್ಲಿ ಕೊಹ್ಲಿ-ಪಂತ್ ಬ್ಯಾಟಿಂಗ್
ನವಾಜ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಸೂರ್ಯಕುಮಾರ್ ಯಾದವ್ (13) ಔಟ್
ಶಾದಾಬ್ ಎಸೆತದಲ್ಲಿ ಕೊಹ್ಲಿ ಕಟ್ ಶಾಟ್…ಥರ್ಡ್ ಮ್ಯಾನ್ನತ್ತ ಫೋರ್
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ನವಾಜ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
ಶಾದಾಬ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ
ಶಾದಾಬ್ ಎಸೆತದಲ್ಲಿ ಡೀಪ್ ಪಾಯಿಂಟ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
ಶಾದಾಬ್ ಖಾನ್ ಮೊದಲ ಎಸೆತದಲ್ಲೇ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ಕೆಎಲ್ ರಾಹುಲ್ (28)
ಕ್ರೀಸ್ನಲ್ಲಿ ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಬ್ಯಾಟಿಂಗ್
ಹ್ಯಾರಿಸ್ ರೌಫ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ (28)
ಕ್ರೀಸ್ನಲ್ಲಿ ಕೆಎಲ್ ರಾಹುಲ್-ರೋಹಿತ್ ಶರ್ಮಾ ಬ್ಯಾಟಿಂಗ್
ನವಾಜ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಕೆಎಲ್ ರಾಹುಲ್
5ನೇ ಓವರ್ನಲ್ಲಿ ಅರ್ಧಶತಕ ಪೂರ್ಣಗೊಳಿಸಿದ ಟೀಮ್ ಇಂಡಿಯಾ
ರೌಫ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್
ಹ್ಯಾರಿಸ್ ರೌಫ್ ಮೊದಲ ಎಸೆತದಲ್ಲೇ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿ ವೆಲ್ಕಂ ಮಾಡಿದ ರೋಹಿತ್ ಶರ್ಮಾ
ನಸೀಮ್ ಶಾ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್…ಈ ಓವರ್ನಲ್ಲಿ 2 ಸಿಕ್ಸ್ ಸಿಡಿಸಿ ಅಬ್ಬರಿಸಿದ ಕನ್ನಡಿಗ
ನಸೀಮ್ ಶಾ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್
ಹಸ್ನೈನ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
ನಸೀಮ್ ಶಾ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
ನಸೀಮ್ ಶಾ ಎಸೆತದಲ್ಲಿ ಕವರ್ಸ್ನತ್ತ ರೋಹಿತ್ ಶರ್ಮಾ ಭರ್ಜರಿ ಹೊಡೆತ…ಒನ್ ಬೌನ್ಸ್…ಫೋರ್
ಸ್ಕ್ವೇರ್ ಕಟ್ ಮೂಲಕ 1 ರನ್ ಬಾರಿಸಿ ಟೀಮ್ ಇಂಡಿಯಾದ ರನ್ ಖಾತೆ ತೆರೆದ ಕೆಎಲ್ ರಾಹುಲ್
ಆರಂಭಿಕರು- ಕೆಎಲ್ ರಾಹುಲ್, ರೋಹಿತ್ ಶರ್ಮಾ
ಮೊದಲ ಓವರ್ ಬೌಲರ್- ನಸೀಮ್ ಶಾ
ರವೀಂದ್ರ ಜಡೇಜಾ ಬದಲಿಗೆ ದೀಪಕ್ ಹೂಡಾಗೆ ಸ್ಥಾನ
ಅವೇಶ್ ಖಾನ್ ಬದಲು ಕಣಕ್ಕಿಳಿದ ಅವೇಶ್ ಖಾನ್
ದಿನೇಶ್ ಕಾರ್ತಿಕ್ ಬದಲು ಕಂಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ
ಪಾಂಡ್ಯ ಹಾಂಗ್ ಕಾಂಗ್ ವಿರುದ್ದ ಆಡಿರಲಿಲ್ಲ.
ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ
Three changes for #TeamIndia going into this game.
Deepak Hooda, Hardik Pandya and Ravi Bishnoi come in the Playing XI.
Live – https://t.co/xhki2AW6ro #INDvPAK #AsiaCup202 pic.twitter.com/ZeimY92kpW
— BCCI (@BCCI) September 4, 2022
ಟೀಮ್ ಇಂಡಿಯಾ (ಪ್ಲೇಯಿಂಗ್ XI): ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಬೌಲಿಂಗ್ ಆಯ್ದುಕೊಂಡಿದ್ದಾರೆ.
Hello from the Dubai International Stadium for #TeamIndia's first Super Four clash against Pakistan ?#INDvPAK | #AsiaCup2022 pic.twitter.com/va2dA2jCnH
— BCCI (@BCCI) September 4, 2022
Published On - 6:20 pm, Sun, 4 September 22