ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರು ಸೋಲು ಕಂಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ತಂಡ ಭಾರತಕ್ಕೆ ಕೇವಲ 117 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು 17 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಭಾರತ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಟೀಂ ಇಂಡಿಯಾ ಪರ ಸಾಯಿ ಸುದರ್ಶನ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿದರು. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ 0-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕೆ 117 ರನ್ ಟಾರ್ಗೆಟ್ ನೀಡಿತು. ಇದಕ್ಕೆ ಉತ್ತರವಾಗಿ ಭಾರತ 2 ವಿಕೆಟ್ ನಷ್ಟದಲ್ಲಿ ಈ ಗುರಿಯನ್ನು ಸಾಧಿಸಿತು. ಟೀಂ ಇಂಡಿಯಾ ಪರ ಸಾಯಿ ಸುದರ್ಶನ್ ಅಜೇಯ 55 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 52 ರನ್ ಗಳಿಸಿ ಇನ್ನಿಂಗ್ಸ್ ಆಡಿದರು.
ಶ್ರೇಯಸ್ ಅಯ್ಯರ್ 45 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದರು.
ಸಾಯಿ ಸುದರ್ಶನ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ್ದಾರೆ. ಅವರು 41 ಎಸೆತಗಳಲ್ಲಿ 50 ರನ್‌ಗಳ ಗಡಿ ಮುಟ್ಟಿದ್ದಾರೆ.
ಟೀಂ ಇಂಡಿಯಾ 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ಸಾಯಿ ಸುದರ್ಶನ್ 45 ರನ್ ಮತ್ತು ಶ್ರೇಯಸ್ ಅಯ್ಯರ್ 42 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
9ನೇ ಓವರ್‌ನಲ್ಲಿ ಭಾರತ ತಂಡದ ಸ್ಕೋರ್ 50 ದಾಟಿದೆ. ಶ್ರೇಯಸ್ ಅಯ್ಯರ್ ಮತ್ತು ಸಾಯಿ ಸುದರ್ಶನ್ ಕ್ರೀಸ್‌ನಲ್ಲಿ ನಿಂತಿದ್ದಾರೆ. ಭಾರತಕ್ಕೆ 117 ರನ್‌ಗಳ ಗುರಿ ಇದೆ.
ಟೀಂ ಇಂಡಿಯಾ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಸದ್ಯ ಸಾಯಿ ಸುದರ್ಶನ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.
ಟೀಂ ಇಂಡಿಯಾ 23 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ 5 ರನ್ ಗಳಿಸಿ ಔಟಾದರು.
ಜೋಹಾನ್ಸ್ ಬರ್ಗ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬೌಲರ್ ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿ, ಆತಿಥೇಯ ತಂಡದ ಇನ್ನಿಂಗ್ಸ್ ಅನ್ನು ಕೇವಲ 116ಕ್ಕೆ ಇಳಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 5, ಅವೇಶ್ ಖಾನ್ 4 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.
ಆಂಡಿಲೆ ಫೆಲುಕ್ವಾಯೊ 33 ರನ್ ಗಳಿಸಿ ಅರ್ಷದೀಪ್ ಸಿಂಗ್ ಬಲಿಯಾದರು. 101 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾ ತನ್ನ 9ನೇ ವಿಕೆಟ್ ಕಳೆದುಕೊಂಡಿತು, ಇದರೊಂದಿಗೆ ಅರ್ಷದೀಪ್ ತನ್ನ ಏಕದಿನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದಿದ್ದಾರೆ.
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 73 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡ 25 ಓವರ್‌ಗಳ ಆಟದ ಅಂತ್ಯಕ್ಕೆ 101 ರನ್ ಗಳಿಸಿದೆ. ಆಂಡಿಲೆ ಫೆಲುಕ್ವಾಯೊ 33 ಮತ್ತು ನಾಂದ್ರೆ ಬರ್ಗರ್ 5 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ. ನಾಂದ್ರೆ ಬರ್ಗರ್ ಮತ್ತು ಆಂಡಿಲೆ ಫೆಹ್ಲುಕ್ವಾಯೊ ಸದ್ಯ ಕ್ರೀಸ್‌ನಲ್ಲಿದ್ದಾರೆ.
ಟೀಂ ಇಂಡಿಯಾ 8ನೇ ವಿಕೆಟ್ ಉರುಳಿಸಿದೆ. ಕೇಶವ್ ಮಹಾರಾಜ್ 4 ರನ್ ಗಳಿಸಿ ಆವೇಶ್ ಖಾನ್‌ಗೆ ಬಲಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ದೊಡ್ಡ ಹೊಡೆತ ಅನುಭವಿಸಿದೆ. ಕೇವಲ 60 ರನ್‌ಗಳಿಗೆ ತಂಡ ಪ್ರಮುಖ 7 ವಿಕೆಟ್ ಕಳೆದುಕೊಂಡಿದೆ. ಡೇವಿಡ್ ಮಿಲ್ಲರ್ ಅವೇಶ್ ಖಾನ್‌ಗೆ ಬಲಿಯಾಗಿದ್ದಾರೆ.
ಅವೇಶ್ ಖಾನ್ ಮತ್ತೊಂದು ವಿಕೆಟ್ ಉರುಳಿಸಿದ್ದಾರೆ. ವಿಯಾನ್ ಮುಲ್ಡರ್ ಮೊದಲ ಎಸೆತದಲ್ಲಿಯೇ ಅವೇಶ್ ಖಾನ್‌ಗೆ ಬಲಿಯಾದರು.
ದಕ್ಷಿಣ ಆಫ್ರಿಕಾ 54 ರನ್‌ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿತು. ನಾಯಕ ಏಡೆನ್ ಮಾರ್ಕ್ರಾಮ್ 12 ರನ್ ಗಳಿಸಿ ಅವೇಶ್ ಖಾನ್‌ಗೆ ಬಲಿಯಾದರು.
ದಕ್ಷಿಣ ಆಫ್ರಿಕಾದ ನಾಲ್ಕನೇ ವಿಕೆಟ್ ಸಹ ಅರ್ಷದೀಪ್ ಸಿಂಗ್ಗೆ ಬಲಿಯಾಗಿದೆ. ಹೆನ್ರಿಚ್ ಕ್ಲಾಸೆನ್ 6 ರನ್ ಗಳಿಸಿ ಔಟಾದರು. ಅರ್ಷದೀಪ್ ಸಿಂಗ್ 5 ಓವರ್‌ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ 42 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ಅರ್ಷದೀಪ್ ಸಿಂಗ್ ಟೋನಿ ಡಿ ಜಾರ್ಜಿ ವಿಕೆಟ್ ಪಡೆದರು. ಟೋನಿ ಡಿ ಜಾರ್ಜಿ 28 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ. ಸದ್ಯ ಕ್ರೀಸ್‌ನಲ್ಲಿ ಟೋನಿ ಡಿ ಜಾರ್ಜಿ ಮತ್ತು ಏಡೆನ್ ಮಾರ್ಕ್‌ರಾಮ್ ಇದ್ದಾರೆ.
ಅರ್ಷದೀಪ್ ಸಿಂಗ್ ದಕ್ಷಿಣ ಆಫ್ರಿಕಾಕ್ಕೆ ಎರಡನೇ ಹೊಡೆತ ನೀಡಿದ್ದಾರೆ. ರೀಜಾ ಹೆಂಡ್ರಿಕ್ಸ್ ನಂತರ, ರಾಸ್ಸಿ ವ್ಯಾನ್ ಡೆರ್ ದುಸೆನ್ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಇಬ್ಬರೂ ಆಟಗಾರರು ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ.
ದಕ್ಷಿಣ ಆಫ್ರಿಕಾ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ರೀಜಾ ಹೆಂಡ್ರಿಕ್ಸ್ ಯಾವುದೇ ರನ್ ಗಳಿಸದೆ ಅರ್ಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಆಫ್ರಿಕಾ ತಂಡದ ಬ್ಯಾಟಿಂಗ್ ಆರಂಭವಾಗಿದೆ. ತಂಡದ ಪರ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮುಖೇಶ್ ಕುಮಾರ್ ಮೊದಲ ಓವರ್ ಬೌಲ್ ಮಾಡಿ 1 ರನ್ ನೀಡಿದರು.
ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ.
ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್‌ರಾಮ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲು ಬೌಲಿಂಗ್ ಮಾಡುತ್ತಿದೆ.
Published On - 1:11 pm, Sun, 17 December 23