IND vs SA: ಆಫ್ರಿಕಾ ವಿರುದ್ಧ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸಿಗಲಿದೆ ಅವಕಾಶ? ಇಲ್ಲಿದೆ ಸಂಭಾವ್ಯ ತಂಡ

|

Updated on: Dec 24, 2023 | 10:47 PM

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಂಗಳವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ 11ನೇ ಸ್ಥಾನ ಏನಾಗಲಿದೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.

IND vs SA: ಆಫ್ರಿಕಾ ವಿರುದ್ಧ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸಿಗಲಿದೆ ಅವಕಾಶ? ಇಲ್ಲಿದೆ ಸಂಭಾವ್ಯ ತಂಡ
ಟೀಂ ಇಂಡಿಯಾ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಂಗಳವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ Super Sport Park, Centurion) ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ 11ರ ಬಳಗ ಏನಿರಲಿದೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಎರಡು ದಿನಗಳ ಹಿಂದೆ ವಿರಾಟ್ ಕೊಹ್ಲಿ (Virat Kohli) ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ದೇಶಕ್ಕೆ ಮರಳಿದ್ದಾರೆ ಎಂಬ ಸುದ್ದಿ ಇತ್ತು. ಈಗ ಭಾನುವಾರದಂದು ಅವರು ಯಾವುದೋ ಮಹತ್ವದ ಕೆಲಸಕ್ಕಾಗಿ ಲಂಡನ್‌ಗೆ ಹೋಗಿದ್ದಾರೆ ಎಂಬ ಮಾಹಿತಿ ಬಂದಿದೆ. ಇದೀಗ ವಿರಾಟ್ ವಾಪಸಾದ ಸುದ್ದಿಯಿಂದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾಗೆ (Rohit Sharma) ಮಾತ್ರ ಯಾವ ಆಡುವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯಬೇಕು ಎಂಬುದರ ಬಗ್ಗೆ ಟೆನ್ಷನ್ ಹೆಚ್ಚಾಗಿದೆ.

ಯಾರಿಗೆ ಗೇಟ್​ಪಾಸ್?

ವಿರಾಟ್ ಕೊಹ್ಲಿ ಆಗಮನದಿಂದ ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಗೊಂದಲ ಉಂಟಾಗಿದೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಕೊನೆಯ ಟೆಸ್ಟ್ ಸರಣಿಯ ಪ್ರಕಾರ, ಶುಭ್​ಮನ್ ಗಿಲ್ 3 ನೇ ಸ್ಥಾನದಲ್ಲಿ ಆಡಬಹುದು. ವಿರಾಟ್ ಕೊಹ್ಲಿ ಎಂದಿನಂತೆ 4 ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಖಚಿತ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಆಡಲಿರುವ ಕೆಎಲ್ ರಾಹುಲ್ 5ನೇ ಅಥವಾ 6ನೇ ಕ್ರಮಾಂಕದಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಶ್ರೇಯಸ್ ಅಯ್ಯರ್ ಆಡಿದರೆ 6 ಮಂದಿ ಬ್ಯಾಟ್ಸ್ ಮನ್​ಗಳು ತಂಡದಲ್ಲಿ ಅವಕಾಶ ಪಡೆದಂತ್ತಾಗುತ್ತದೆ. ಆ ನಂತರ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಆಡಿದರೆ ಮೂರು ವೇಗಿಗಳಿಗೆ ಮಾತ್ರ ಸ್ಥಳಾವಕಾಶ ಸಿಗಲಿದೆ.

IND vs SA: ಆಫ್ರಿಕಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಭಾರತದ ಮೂವರು ನಾಯಕರು ಇವರೇ..

ಶಾರ್ದೂಲ್ ಅಥವಾ ಪ್ರಸಿದ್ಧ್?

ಅಂತಹ ಪರಿಸ್ಥಿತಿಯಲ್ಲಿ, ಪ್ರಸಿದ್ಧ ಕೃಷ್ಣಗೆ ತಂಡದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ. ಏಕೆಂದರೆ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ಕೆಯಾಗಿರುವುದರಿಂದ ಖಂಡಿತವಾಗಿಯೂ ಅವರು ಆಡುವುದನ್ನು ಕಾಣಬಹುದು. ವೇಗದ ಬೌಲಿಂಗ್ ವಿಭಾಗದಲ್ಲಿ ಸಿರಾಜ್ ಮತ್ತು ಬುಮ್ರಾ ಆಡುವುದು ಖಚಿತ. ಮತ್ತೊಂದೆಡೆ, ಅಯ್ಯರ್‌ಗೆ ತಂಡದಲ್ಲಿ ಸ್ಥಾನ ಸಿಗದಿದ್ದರೆ ಆಗ ನಾಲ್ವರು ವೇಗಿಗಳು ಆಡುವುದನ್ನು ಕಾಣಬಹುದಾಗಿದೆ. ಅಥವಾ ತಂಡದಲ್ಲಿ ಒಬ್ಬ ಸ್ಪಿನ್ನರ್​ನನ್ನು ಆಡಿಸಲು ಚಿಂತಿಸಿದರೆ ರವೀಂದ್ರ ಜಡೇಜಾಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುವುದು ಖಚಿತ. ಹೀಗಾಗಿ ಅಶ್ವಿನ್ ಬೆಂಚ್ ಕಾಯುವ ಸಾಧ್ಯತೆಗಳು ಹೆಚ್ಚಿವೆ.

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Sun, 24 December 23