India vs South Africa 3rd T20: ಇಂದೋರ್ನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 49 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ರಿಲೀ ರೊಸೊ 7 ಸಿಕ್ಸ್ ಒಳಗೊಂಡಂತೆ 48 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತು.
228 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್ ಬಾರಿಸಿ ಅಬ್ಬರಿಸಿದರು. ಆದರೆ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಸೌತ್ ಆಫ್ರಿಕಾ ತಂಡವು ಅಂತಿಮವಾಗಿ 18.3 ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು 170 ರನ್ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಗೆಲುವಿನೊಂದಿಗೆ ಸರಣಿಯನ್ನು ಅಂತ್ಯಗೊಳಿಸಿತು.
ಈ ಸೋಲಿನ ಹೊರತಾಗಿಯೂ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ನಾಯಕ ರೋಹಿತ್ ಶರ್ಮಾ ಸರಣಿ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ
ಭಾರತ ಪೂರ್ಣ ತಂಡ: ರೋಹಿತ್ ಶರ್ಮಾ (ನಾಯಕ) , ರಿಷಬ್ ಪಂತ್ ( ವಿಕೆಟ್ ಕೀಪರ್ ) , ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಹರ್ಷಲ್ ಪಟೇಲ್ , ದೀಪಕ್ ಚಾಹರ್ , ಅರ್ಷದೀಪ್ ಸಿಂಗ್ , ಉಮೇಶ್ ಯಾದವ್ , ಮೊಹಮ್ಮದ್ ಸಿರಾಜ್, ಶಹಬಾಝ್ ಅಹ್ಮದ್, ಯುಜ್ವೇಂದ್ರ ಚಹಾಲ್.
ದಕ್ಷಿಣ ಆಫ್ರಿಕಾ ಪೂರ್ಣ ತಂಡ: ತೆಂಬಾ ಬವುಮಾ (ನಾಯಕ) , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ರಿಲೀ ರೊಸ್ಸೌ , ಐಡೆನ್ ಮಾರ್ಕ್ರಾಮ್ , ಡೇವಿಡ್ ಮಿಲ್ಲರ್ , ಟ್ರಿಸ್ಟಾನ್ ಸ್ಟಬ್ಸ್ , ವೇಯ್ನ್ ಪಾರ್ನೆಲ್ , ಕೇಶವ್ ಮಹಾರಾಜ್ , ಕಗಿಸೊ ರಬಾಡಾ , ಅನ್ರಿಕ್ ನೋಕಿಯಾ , ಲುಂಗಿ ಎನ್‌ಗಿಡಿ , ತಬ್ರೇಝ್ ಶಂಸಿ, ರೀಜಾ ಹೆಂಡ್ರಿಕ್ಸ್, ಡ್ವೇನ್ ಪ್ರಿಟೊರಿಯಸ್, ಹೆನ್ರಿಚ್ ಕ್ಲಾಸೆನ್.
3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ.
12 ಎಸೆತಗಳಲ್ಲಿ 53 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸಿರಾಜ್-ಉಮೇಶ್ ಯಾದವ್ ಬ್ಯಾಟಿಂಗ್
ರಬಾಡ ಎಸೆತದಲ್ಲಿ ಪಾಯಿಂಟ್ ಮೂಲಕ ಫೋರ್ ಬಾರಿಸಿದ ಮೊಹಮ್ಮದ್ ಸಿರಾಜ್
ಕ್ರೀಸ್ನಲ್ಲಿ ಸಿರಾಜ್-ಉಮೇಶ್ ಯಾದವ್ ಬ್ಯಾಟಿಂಗ್
ಡ್ವೇನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ..ಕ್ಯಾಚ್…ದೀಪಕ್ ಚಹರ್ (31) ಔಟ್
24 ಎಸೆತಗಳಲ್ಲಿ 66 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಉಮೇಶ್ ಯಾದವ್ – ದೀಪಕ್ ಚಹರ್ ಬ್ಯಾಟಿಂಗ್
ಎನ್‌ಗಿಡಿ ಫ್ರೀ ಹಿಟ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ದೀಪಕ್ ಚಹರ್
ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದೀಪಕ್ ಚಹರ್
ರಬಾಡ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ದೀಪಕ್ ಚಹರ್
ಕೇಶವ್ ಮಹರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಅಶ್ವಿನ್ (2)
ಪಾರ್ನೆಲ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಅಕ್ಷರ್ ಪಟೇಲ್ (9)
ಪಾರ್ನೆಲ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಅಕ್ಷರ್ ಪಟೇಲ್
ಎನ್‌ಗಿಡಿ ಎಸೆತದಲ್ಲಿ ಭರ್ಜರಿ ಸಿಕ್ಸ್ಗೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್ ಆಗಿ ಹೊರನಡೆದ ಹರ್ಷಲ್ ಪಟೇಲ್ (17)
ಎನ್‌ಗಿಡಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹರ್ಷಲ್ ಪಟೇಲ್
ಎನ್‌ಗಿಡಿ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಹರ್ಷಲ್ ಪಟೇಲ್
ಕ್ರೀಸ್ನಲ್ಲಿ ಅಕ್ಷರ್-ಹರ್ಷಲ್ ಬ್ಯಾಟಿಂಗ್
ಡ್ವೇನ್ ಎಸೆತದಲ್ಲಿ ಭರ್ಜರಿ ಹಿಟ್ಗೆ ಯತ್ನ…ಬೌಂಡರಿ ಲೈನ್ನಿಂದ ಓಡಿ ಬಂದು ಡೈವಿಂಗ್ ಕ್ಯಾಚ್ ಹಿಡಿದ ಸ್ಟಬ್ಸ್..ಸೂರ್ಯಕುಮಾರ್ ಯಾದವ್ (8) ಔಟ್
ಡ್ವೇನ್ ಎಸೆತದಲ್ಲಿ ಫೈನ್ ಲೆಗ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
ಕೇಶವ್ ಮಹರಾಜ್ ಎಸೆತದಲ್ಲಿ ಸ್ವಿಚ್ ಹಿಟ್ಗೆ ಯತ್ನ…ದಿನೇಶ್ ಕಾರ್ತಿಕ್ (46) ಕ್ಲೀನ್ ಬೌಲ್ಡ್
ಕೇಶವ್ ಮಹರಾಜ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಡಿಕೆ
ಕ್ರೀಸ್ನಲ್ಲಿ ಡಿಕೆ-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ಪಾರ್ನೆಲ್ ಓವರ್ನಲ್ಲಿ 6, 4, 6 ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್
ಪಾರ್ನೆಲ್ ಎಸೆತದಲ್ಲಿ ಫೈನ್ ಲೆಗ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕೆ
ಎನ್‌ಗಿಡಿ ಎಸೆತದಲ್ಲಿ ರಿಷಭ್ ಪಂತ್ ಆಫ್ಸೈಡ್ನತ್ತ ಶಾಟ್…ಸ್ಟಬ್ಸ್ ಅತ್ಯುತ್ತಮ ಕ್ಯಾಚ್…ಪಂತ್ (27) ಔಟ್
ಲುಂಗಿ ಎನ್‌ಗಿಡಿ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಪಂತ್
ಎನ್‌ಗಿಡಿ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಷಭ್ ಪಂತ್
ಎನ್‌ಗಿಡಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ರಿಷಭ್ ಪಂತ್
ರಬಾಡ ಎಸೆತದಲ್ಲಿ ಸ್ಕ್ವೇರ್ ಮೂಲಕ ಭರ್ಜರಿ ಬೌಂಡರಿ ಬಾರಿಸಿದ ರಿಷಭ್ ಪಂತ್
ಪಾರ್ನೆಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಬೌಂಡರಿ ಬಾರಿಸಿ ಖಾತೆ ತೆರೆದ ಡಿಕೆ
ವೇಯ್ನ್ ಪಾರ್ನೆಲ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಶ್ರೇಯಸ್ ಅಯ್ಯರ್ (1)
ಕ್ರೀಸ್ನಲ್ಲಿ ರಿಷಭ್ ಪಂತ್-ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಕಗಿಸೊ ರಬಾಡ ಎಸೆತದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಎಡ್ಜ್ ಆಗಿ ಚೆಂಡು ವಿಕೆಟ್ಗೆ..ಬೌಲ್ಡ್
ಶೂನ್ಯಕ್ಕೆ ಔಟಾದ ಹಿಟ್ಮ್ಯಾನ್
ಕ್ಯಾಚ್ ಹಿಡಿದು ಬೌಂಡರಿ ಲೈನ್ ಮೆಟ್ಟಿದ ಸಿರಾಜ್…ಚಹರ್ ಎಸೆತದಲ್ಲಿ ಮಿಲ್ಲರ್ ಬ್ಯಾಟ್ನಿಂದ ಮತ್ತೊಂದು ಸಿಕ್ಸ್
ಚಹರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಿಲ್ಲರ್
ಚಹರ್ ಹೈ ನೋಬಾಲ್…ಭರ್ಜರಿ ಸಿಕ್ಸ್ ಸಿಡಿಸಿದ ಮಿಲ್ಲರ್
ಚಹರ್ ಎಸೆತದಲ್ಲಿ ಸ್ಕೂಪ್ ಶಾಟ್ಗೆ ಯತ್ನ…ಅಶ್ವಿನ್ಗೆ ಕೈಗೆ ಚೆಂಡು…ಸ್ಟಬ್ಸ್ (23) ಔಟ್
48 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ರಿಲೀ ರೊಸೊ
ಕ್ರೀಸ್ನಲ್ಲಿ ರೊಸೊ-ಸ್ಟಬ್ಸ್ ಬ್ಯಾಟಿಂಗ್
ಸೌತ್ ಆಫ್ರಿಕಾ ಪರ ರೊಸೊ-ಸ್ಟಬ್ಸ್ ಭರ್ಜರಿ ಬ್ಯಾಟಿಂಗ್
ಕ್ರೀಸ್ನಲ್ಲಿ ಸ್ಟಬ್ಸ್-ರೊಸೊ ಬ್ಯಾಟಿಂಗ್
ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ರೊಸೊ
ಹರ್ಷಲ್ ಪಟೇಲ್ ಎಸೆತದಲ್ಲಿ ಹಿಂಬದಿಯತ್ತ ಸ್ಕೂಪ್ ಸಿಕ್ಸ್ ಸಿಡಿಸಿದ ರೊಸೊ
ಕ್ರೀಸ್ನಲ್ಲಿ ರೊಸೊ-ಸ್ಟಬ್ಸ್ ಬ್ಯಾಟಿಂಗ್
ಸಿರಾಜ್ ಎಸೆದ ನೋಬಾಲ್ಗೆ ಫ್ರಿಹಿಟ್…ಕೇವಲ 2 ರನ್ ಕಲೆಹಾಕಿದ ರೊಸೊ
ದೀಪಕ್ ಚಹರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರೊಸೊ
33 ಎಸೆತಗಳಲ್ಲಿ 71 ರನ್ ಬಾರಿಸಿರುವ ರೊಸೊ ಭರ್ಜರಿ ಬ್ಯಾಟಿಂಗ್
ಕ್ರೀಸ್ನಲ್ಲಿ ರೊಸೊ- ಸ್ಟಬ್ಸ್ ಬ್ಯಾಟಿಂಗ್
ಶೇಯಸ್ ಅಯ್ಯರ್ ಉತ್ತಮ ಫೀಲ್ಡಿಂಗ್…ಕ್ವಿಂಟನ್ ಡಿಕಾಕ್ (68) ರನೌಟ್
ಅರ್ಧಶತಕ ಬಾರಿಸಿದ ಕ್ವಿಂಟನ್ ಡಿಕಾಕ್
ರಿಲೀ ರೊಸೊ ಉತ್ತಮ ಬ್ಯಾಟಿಂಗ್
ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಡಿಕಾಕ್
ಕ್ರೀಸ್ನಲ್ಲಿ ರಿಲೀ ರೊಸೊ-ಡಿಕಾಕ್ ಬ್ಯಾಟಿಂಗ್
ಸಿರಾಜ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೊಸೊ
ಅಶ್ವಿನ್ ಎಸೆತಕ್ಕೆ ಭರ್ಜರಿ ಸಿಕ್ಸ್ ಸಿಡಿಸಿದ ರಿಲೀ ರೊಸೊ
ಕ್ರೀಸ್ನಲ್ಲಿ ರಿಲೀ ರೊಸೊ – ಡಿಕಾಕ್ ಬ್ಯಾಟಿಂಗ್
ಉಮೇಶ್ ಯಾದವ್ ಎಸೆತಕ್ಕೆ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ರಿಲೀ ರೊಸೊ
ಉಮೇಶ್ ಯಾದವ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ತೆಂಬಾ ಬವುಮಾ (3)
ಅಶ್ವಿನ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಬ್ಯಾಟ್ನಿಂದ ಹಿಂಬದಿಯತ್ತ ಫೋರ್
ಕ್ರೀಸ್ನಲ್ಲಿ ಬವುಮಾ ಹಾಗೂ ಡಿಕಾಕ್ ಬ್ಯಾಟಿಂಗ್
ದೀಪಕ್ ಚಹರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಸಿಕ್ಸ್ ಸಿಡಿಸಿದ ಡಿಕಾಕ್
ಸಿರಾಜ್ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಬೌಂಡರಿ ಬಾರಿಸಿದ ಡಿಕಾಕ್…ಫೋರ್
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್
ಕ್ರೀಸ್ನಲ್ಲಿ ಬವುಮಾ-ಡಿಕಾಕ್ ಬ್ಯಾಟಿಂಗ್
ಬೌಲಿಂಗ್ – ದೀಪಕ್ ಚಹರ್
ಆರಂಭಿಕರು- ಕ್ವಿಂಟನ್ ಡಿಕಾಕ್, ತೆಂಬಾ ಬವುಮಾ
Captain Rohit Sharma wins the toss and elects to bowl first in the final T20I.
Three changes for #TeamIndia in the Playing XI
Live – https://t.co/dpI1gl5uwA #INDvSA @mastercardindia pic.twitter.com/gq4Ybx4n6V
— BCCI (@BCCI) October 4, 2022
ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 6:32 pm, Tue, 4 October 22