ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಭಾರತ ಮತ್ತು  ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಮೂರು ಮ್ಯಾಚ್​ಗಳ ಈ ಸರಣಿ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಗೆದ್ದರೆ, ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿತ್ತು. ಇದೀಗ ಉಭಯ ತಂಡಗಳು 5 ಪಂದ್ಯಗಳ ಟಿ20 ಸರಣಿಗಾಗಿ ಸಜ್ಜಾಗುತ್ತಿದೆ.

ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
Team India
Image Credit source: BCCI

Updated on: Oct 04, 2026 | 12:00 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಮುಕ್ತಾಯಗೊಂಡಿದೆ. ಮೂರು ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಇದೀಗ ಉಭಯ ತಂಡಗಳು ಟಿ20 ಸರಣಿಗಾಗಿ ಸಜ್ಜಾಗಬೇಕಿದೆ. ಅಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯು ಅಕ್ಟೋಬರ್ 6 ರಿಂದ ಶುರುವಾಗಲಿದೆ.

5 ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಲಕ್ನೋದಲ್ಲಿ ನಡೆದರೆ, ದ್ವಿತೀಯ ಪಂದ್ಯ ರಾಂಚಿಯಲ್ಲಿ ಜರುಗಲಿದೆ. ಇನ್ನು ಮೂರನೇ ಟಿ20 ಪಂದ್ಯಕ್ಕೆ ಇಂದೋರ್ ಆತಿಥ್ಯವಹಿಸಲಿದ್ದು, ನಾಲ್ಕನೇ ಪಂದ್ಯ ಹೈದರಾಬಾದ್​ನಲ್ಲಿ ನಡೆಯಲಿದೆ. ಹಾಗೆಯೇ ಐದನೇ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿದೆ. ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ ವೇಳಾಪಟ್ಟಿ:

ದಿನಾಂಕ ಪಂದ್ಯ ಸಮಯ (IST) ನಡೆಯುವ ಸ್ಥಳ
ಅಕ್ಟೋಬರ್ 6, 2026 1ನೇ ಟಿ20 ಪಂದ್ಯ ಸಂಜೆ 7:00 ಲಕ್ನೋ
ಅಕ್ಟೋಬರ್ 9, 2026 2ನೇ ಟಿ20 ಪಂದ್ಯ ಸಂಜೆ 7:00 ರಾಂಚಿ
ಅಕ್ಟೋಬರ್ 11, 2026 3ನೇ ಟಿ20 ಪಂದ್ಯ ಸಂಜೆ 7:00 ಇಂದೋರ್
ಅಕ್ಟೋಬರ್ 14, 2026 4ನೇ ಟಿ20 ಪಂದ್ಯ ಸಂಜೆ 7:00 ಹೈದರಾಬಾದ್
ಅಕ್ಟೋಬರ್ 17, 2026 5ನೇ ಟಿ20 ಪಂದ್ಯ ಸಂಜೆ 7:00 ಬೆಂಗಳೂರು

ಉಭಯ ತಂಡಗಳು:

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ನಾಯಕ), ಶಿವಂ ದುಬೆ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಇದನ್ನೂ ಓದಿ: ವೈಭವ್‌ನನ್ನು ಅಣಕಿಸಿದ ಸೈಮ್‌ಗೆ ಪಾಕ್ ಮಾಜಿ ಆಟಗಾರನಿಂದಲೇ ಸರಿಯಾದ ಶಾಸ್ತಿ!

ವೆಸ್ಟ್ ಇಂಡೀಸ್ ಟಿ20 ತಂಡ: ಶಾಯ್ ಹೋಪ್ (ಕ್ಯಾಪ್ಟನ್), ಜ್ಯುವೆಲ್ ಆಂಡ್ರ್ಯೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಗುಡಾಕೇಶ್ ಮೋಟಿ, ಕೀಮೋ ಪೌಲ್, ಕಮಿಲ್ ಪೂರನ್, ರೋವ್‌ಮನ್ ಪೊವೆಲ್, ಶೆರ್ಫೇನ್ ರದರ್‌ಫೋರ್ಡ್, ಕ್ವೆಂಟಿನ್ ಸ್ಯಾಂಪ್ಸನ್, ರೊಮಾರಿಯೋ ಶೆಫರ್ಡ್, ಶಮರ್ ಸ್ಪ್ರಿಂಗರ್.

ಈ ಎರಡು ಸರಣಿಯ ಬಳಿಕ ಭಾರತ ತಂಡವು ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಕಿವೀಸ್ ನಾಡಿನಲ್ಲಿ ನಡೆಯಲಿರುವ ಈ ಸುದೀರ್ಘ ಸರಣಿಯಲ್ಲಿ ಭಾರತ ತಂಡವು  2 ಟೆಸ್ಟ್, 5 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us