IND vs ZIM: ಹರಾರೆ ಪಿಚ್ ಯಾರಿಗೆ ಸಹಕಾರಿ? ಈ ಮೈದಾನದಲ್ಲಿ ಟಿ20 ದಾಖಲೆ ಹೇಗಿದೆ?

|

Updated on: Jul 05, 2024 | 10:19 PM

IND vs ZIM, Harare Pitch Report: ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಪಿಚ್‌ನಲ್ಲಿ ಉತ್ತಮ ಬೌನ್ಸ್‌ನಿಂದ ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತದೆ. ಈ ಮೈದಾನದಲ್ಲಿ ಸಾಕಷ್ಟು ಬೌಂಡರಿ, ಸಿಕ್ಸರ್‌ಗಳು ಸಿಡಿಯಲು ಇದೇ ಕಾರಣ. ಆದರೆ, ಆಟ ಮುಂದುವರಿದಂತೆ ಪಿಚ್‌ನ ಸ್ಥಿತಿಯೂ ಬದಲಾಗುತ್ತದೆ.

IND vs ZIM: ಹರಾರೆ ಪಿಚ್ ಯಾರಿಗೆ ಸಹಕಾರಿ? ಈ ಮೈದಾನದಲ್ಲಿ ಟಿ20 ದಾಖಲೆ ಹೇಗಿದೆ?
ಹರಾರೆ ಪಿಚ್ ವರದಿ
Follow us on

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟಿ20 ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಡಲಿದೆ. ಭಾರತ ಮತ್ತು ಜಿಂಬಾಬ್ವೆ ನಡುವೆ ಐದು ಪಂದ್ಯಗಳ ಸರಣಿ ನಡೆಯಲಿದೆ. ಈ ಪ್ರವಾಸದಲ್ಲಿ ಶುಭ್​ಮನ್ ಗಿಲ್ ಅವರು ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದಲ್ಲದೆ ಹಲವು ಯುವ ಆಟಗಾರರು ಭಾರತ ತಂಡದ ಪರ ಮೊದಲ ಬಾರಿಗೆ ಮೈದಾನಕ್ಕಿಳಿಯಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದ ಹೊಸ ಯುಗ ಆರಂಭವಾಗಲಿದೆ. ಹೀಗಿರುವಾಗ ಈ ಪಂದ್ಯಕ್ಕೆ ಹರಾರೆ ಪಿಚ್ ಹೇಗಿರಲಿದೆ ಎಂಬುದನ್ನು ನೋಡೋಣ.

ಪಿಚ್ ವರದಿ

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಿಚ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಪಿಚ್‌ನಲ್ಲಿ ಉತ್ತಮ ಬೌನ್ಸ್‌ನಿಂದ ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತದೆ. ಈ ಮೈದಾನದಲ್ಲಿ ಸಾಕಷ್ಟು ಬೌಂಡರಿ, ಸಿಕ್ಸರ್‌ಗಳು ಸಿಡಿಯಲು ಇದೇ ಕಾರಣ. ಆದರೆ, ಆಟ ಮುಂದುವರಿದಂತೆ ಪಿಚ್‌ನ ಸ್ಥಿತಿಯೂ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸ್ಪಿನ್ ಬೌಲರ್‌ಗಳು ಇಲ್ಲಿ ಸಹಾಯ ಪಡೆಯಲು ಪ್ರಾರಂಭಿಸುತ್ತಾರೆ. ಆದರೆ ಇದು ಯಾವುದೇ ಗಮನಾರ್ಹ ಪರಿಣಾಮವನ್ನು ಬೀರುವುದಿಲ್ಲ. ಹೀಗಾಗಿ ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುವ ಈ ಪಂದ್ಯ ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆ ಇದೆ.

ಈ ಮೈದಾನದಲ್ಲಿ ಟಿ20 ದಾಖಲೆ ಹೇಗಿದೆ?

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಇದುವರೆಗೆ ಒಟ್ಟು 50 ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ. 29 ಪಂದ್ಯಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದರೆ, 20 ಬಾರಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮೈದಾನದಲ್ಲಿ ಟಾಸ್ ಗೆದ್ದ ತಂಡದ ಮೊದಲ ಪ್ರಯತ್ನ ಬ್ಯಾಟಿಂಗ್ ಮಾಡಿ ಎದುರಾಳಿ ತಂಡಕ್ಕೆ ದೊಡ್ಡ ಗುರಿ ನೀಡುವುದಾಗಿರಲಿದೆ.

ಉಭಯ ತಂಡಗಳು

ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ರವಿ ಬಿಷ್ಣೋಯ್, ಸಾಯಿ ಸುದರ್ಶನ್, ಜಿತೇಶ್ ಶರ್ಮಾ, ತುಷಾರ್ ದೇಶ್ ಶರ್ಮಾ, ಹರ್ಷಿತ್ ರಾಣಾ.

ಜಿಂಬಾಬ್ವೆ ತಂಡ: ಸಿಕಂದರ್ ರಜಾ (ನಾಯಕ), ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಬ್ರಿಯಾನ್ ಬೆನೆಟ್, ತಡಿವಾನಾಶೆ ಮರುಮಾನಿ, ಜೊನಾಥನ್ ಕ್ಯಾಂಪ್‌ಬೆಲ್, ಇನ್ನೋಸೆಂಟ್ ಕಿಯಾ, ವೆಸ್ಲಿ ಮಾಧೆವೆರೆ, ಲ್ಯೂಕ್ ಜೊಂಗ್ವೆ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ, ರಿಚರ್ಡ್ ನ್ಗರ್ವಾ, ದಂಡೈನ್ ಚತಾರಾ, ದಂಡೈಯನ್ ಚಟಾರ, ಫರಾಜ್ ಅಕ್ರಮ್, ಅಂತುಮ್ ನಖ್ವಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Fri, 5 July 24