IND vs ZIM 5th T20 Highlights : 5ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಸುಲಭ ಜಯ

ಪೃಥ್ವಿಶಂಕರ
|

Updated on:Jul 14, 2024 | 8:03 PM

India vs Zimbabwe 5th T20I Highlights in Kannada: ಹರಾರೆಯಲ್ಲಿ ನಡೆದ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. 168 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 125 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.

IND vs ZIM 5th T20 Highlights : 5ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಸುಲಭ ಜಯ
ಭಾರತ- ಜಿಂಬಾಬ್ವೆ

ಹರಾರೆಯಲ್ಲಿ ನಡೆದ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. 168 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 125 ರನ್‌ಗಳಿಗೆ ಆಲೌಟ್ ಆಯಿತು. ಮೇಯರ್ಸ್ ಜಿಂಬಾಬ್ವೆ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 34 ರನ್‌ಗಳ ಇನಿಂಗ್ಸ್‌ ಆಡಿದರು. ಭಾರತದ ಪರ ಮುಖೇಶ್ ಕುಮಾರ್ 4 ಹಾಗೂ ಶಿವಂ ದುಬೆ 2 ವಿಕೆಟ್ ಪಡೆದರು. ಇದಕ್ಕೂ ಮುನ್ನ ಭಾರತ 6 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 58 ರನ್ ಬಾರಿಸಿದರು. ಜಿಂಬಾಬ್ವೆ ಪರ ಮುಜರಬಾನಿ 19 ರನ್ ನೀಡಿ 2 ವಿಕೆಟ್ ಪಡೆದರು.

LIVE NEWS & UPDATES

The liveblog has ended.
  • 14 Jul 2024 08:01 PM (IST)

    IND vs ZIM Live Score: ಭಾರತಕ್ಕೆ ಜಯ

    ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ 42 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. 168 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 125 ರನ್‌ಗಳಿಗೆ ಸೀಮಿತವಾಯಿತು.

  • 14 Jul 2024 07:53 PM (IST)

    IND vs ZIM Live Score: ಗೆಲುವಿಗೆ 1 ವಿಕೆಟ್ ಬೇಕು

    ಜಿಂಬಾಬ್ವೆ 9ನೇ ವಿಕೆಟ್ ಕಳೆದುಕೊಂಡಿದೆ. ಇದೀಗ ಟೀಂ ಇಂಡಿಯಾ ಗೆಲುವಿಗೆ ಕೇವಲ 1 ವಿಕೆಟ್ ಅಂತರದಲ್ಲಿದೆ.

  • 14 Jul 2024 07:52 PM (IST)

    IND vs ZIM Live Score: ದೇಶಪಾಂಡೆಗೆ ವಿಕೆಟ್

    ತುಷಾರ್ ದೇಶಪಾಂಡೆ ಜಿಂಬಾಬ್ವೆಗೆ 8ನೇ ಹೊಡೆತ ನೀಡಿದ್ದಾರೆ. ಅವರು ಬ್ರಾಂಡನ್ ಮಾವುಟಾ ಅವರನ್ನು ವಜಾಗೊಳಿಸಿದ್ದಾರೆ.

  • 14 Jul 2024 07:52 PM (IST)

    IND vs ZIM Live Score: 100 ರನ್ ಪೂರ್ಣ

    168 ರನ್ ಬೆನ್ನಟ್ಟಿದ ಜಿಂಬಾಬ್ವೆ 100 ರನ್ ಗಳಿಸಿದೆ. ಈಗ ಗೆಲ್ಲಲು 22 ಎಸೆತಗಳಲ್ಲಿ 68 ರನ್ ಗಳಿಸಬೇಕು ಆದರೆ ಕೈಯಲ್ಲಿ 3 ವಿಕೆಟ್ ಮಾತ್ರ ಉಳಿದಿದೆ.

  • 14 Jul 2024 07:52 PM (IST)

    IND vs ZIM Live Score: 7ನೇ ವಿಕೆಟ್

    ಜಿಂಬಾಬ್ವೆಗೆ ಟೀಂ ಇಂಡಿಯಾ ಏಳನೇ ಹೊಡೆತ ನೀಡಿದೆ. ಇದರೊಂದಿಗೆ ಭಾರತ ತಂಡ ಗೆಲುವಿನತ್ತ ಸಾಗಿದೆ. ಈಗ ಜಿಂಬಾಬ್ವೆ ಕೇವಲ 4 ಓವರ್‌ಗಳಲ್ಲಿ 69 ರನ್ ಗಳಿಸಬೇಕಾಗಿದೆ.

  • 14 Jul 2024 07:51 PM (IST)

    IND vs ZIM Live Score: ಆರನೇ ವಿಕೆಟ್

    ಜಿಂಬಾಬ್ವೆಯ ಆರನೇ ವಿಕೆಟ್ ಕೂಡ ಪತನಗೊಂಡಿದೆ. ಶಿವಂ ದುಬೆ ಜೊನಾಥನ್ ಕ್ಯಾಂಪ್‌ಬೆಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಈ ಪಂದ್ಯದಲ್ಲಿ ದುಬೆ 2 ವಿಕೆಟ್ ಪಡೆದರು.

  • 14 Jul 2024 07:35 PM (IST)

    IND vs ZIM Live Score: ರಾಝಾ ರನ್ ಔಟ್

    ಟೀಂ ಇಂಡಿಯಾ ಜಿಂಬಾಬ್ವೆಯ ಐದನೇ ವಿಕೆಟ್ ಕೂಡ ಉರುಳಿಸಿದೆ. ನಾಯಕ ಸಿಕಂದರ್ ರಾಝಾ ರನ್ ಔಟ್ ಆದರು. ಇದರೊಂದಿಗೆ ಜಿಂಬಾಬ್ವೆ ಇನ್ನಿಂಗ್ಸ್ ತತ್ತರಿಸಿದೆ. ಈಗ ಗೆಲುವಿಗೆ 33 ಎಸೆತಗಳಲ್ಲಿ 78 ರನ್‌ಗಳ ಅಗತ್ಯವಿದೆ.

  • 14 Jul 2024 07:26 PM (IST)

    IND vs ZIM Live Score: ನಾಲ್ಕನೇ ವಿಕೆಟ್

    ಟೀಂ ಇಂಡಿಯಾ ಜಿಂಬಾಬ್ವೆಯ ನಾಲ್ಕನೇ ವಿಕೆಟ್ ಉರುಳಿಸಿದೆ. ಶಿವಂ ದುಬೆ, ಡಿಯೋನ್ ಮೈಯರ್ಸ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಈಗ ಜಿಂಬಾಬ್ವೆಗೆ 82 ರನ್‌ಗಳ ಅಗತ್ಯವಿದೆ.

  • 14 Jul 2024 07:23 PM (IST)

    IND vs ZIM Live Score: 10 ಓವರ್‌ಗಳಲ್ಲಿ 99 ರನ್‌

    168 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 10 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 69 ರನ್‌ ಗಳಿಸಿದೆ. ಈಗ ಅವರು 60 ಎಸೆತಗಳಲ್ಲಿ 99 ರನ್ ಗಳಿಸಬೇಕಿದೆ.

  • 14 Jul 2024 07:11 PM (IST)

    IND vs ZIM Live Score: ಮೂರನೇ ವಿಕೆಟ್ ಪತನ

    ಜಿಂಬಾಬ್ವೆ ಮೂರನೇ ವಿಕೆಟ್ ಕಳೆದುಕೊಂಡಿತು. ಟಿ ಮರುಮಣಿ 27 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ 9ನೇ ಓವರ್​ನಲ್ಲಿ ಮರುಮಣಿ ವಿಕೆಟ್ ಪಡೆದರು.

  • 14 Jul 2024 07:10 PM (IST)

    IND vs ZIM Live Score: 50 ರನ್ ಪೂರ್ಣ

    ಪವರ್‌ಪ್ಲೇಯ ಮೊದಲ 6 ಓವರ್‌ಗಳಲ್ಲಿ ಜಿಂಬಾಬ್ವೆ ತಂಡ 2 ವಿಕೆಟ್ ಕಳೆದುಕೊಂಡಿತ್ತು. ಆದರೆ, ಇದಾದ ಬಳಿಕ ಬ್ಯಾಟ್ಸ್​ಮನ್​ಗಳು ಇನ್ನಿಂಗ್ಸ್​ ಮೇಲೆ ಹಿಡಿತ ಸಾಧಿಸಿ 7 ಓವರ್​ಗಳಲ್ಲಿ 52 ರನ್ ಬಾರಿಸಿದರು.

  • 14 Jul 2024 06:53 PM (IST)

    IND vs ZIM Live Score: ಮುಖೇಶ್ ಎಡವಟ್ಟು

    ಜಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಕೇಶ್ ಕುಮಾರ್ 5ನೇ ಓವರ್​ನಲ್ಲಿ ದೊಡ್ಡ ಪ್ರಮಾದ ಎಸಗಿದ್ದರು. ಈ ಓವರ್‌ನ ಮೂರನೇ ಎಸೆತದಲ್ಲಿ ಅದ್ಭುತ ಚೆಂಡನ್ನು ಎಸೆದ ಅವರು ಆರಂಭಿಕ ಆಟಗಾರ ಟಿ ಮರುಮಣಿಯನ್ನು ಬೌಲ್ಡ್ ಮಾಡಿದರು, ಆದರೆ ಅದು ನೋ ಬಾಲ್ ಆಗಿತ್ತು. ಇದರೊಂದಿಗೆ ಮೂರನೇ ವಿಕೆಟ್ ಪಡೆಯುವ ಅವಕಾಶ ಕಳೆದುಕೊಂಡರು.

  • 14 Jul 2024 06:52 PM (IST)

    IND vs ZIM Live Score: ನಿಧಾನಗತಿಯ ಆರಂಭ

    168 ರನ್‌ಗಳನ್ನು ಬೆನ್ನಟ್ಟಿದ ಜಿಂಬಾಬ್ವೆ ನಿಧಾನ ಆರಂಭ ಪಡೆದುಕೊಂಡಿದೆ. 4 ಓವರ್‌ಗಳ ನಂತರ ತಂಡ 2 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಲಷ್ಟೇ ಶಕ್ತವಾಯಿತು.

  • 14 Jul 2024 06:41 PM (IST)

    IND vs ZIM Live Score: ಎರಡನೇ ವಿಕೆಟ್

    ಮುಖೇಶ್ ಕುಮಾರ್ ಜಿಂಬಾಬ್ವೆಗೆ ಎರಡನೇ ಹೊಡೆತ ನೀಡಿದ್ದಾರೆ. ಬ್ರಿಯಾನ್ ಬೆನೆಟ್ 10 ರನ್ ಗಳಿಸಿ ಔಟಾದರು. 3 ಓವರ್‌ಗಳಲ್ಲಿ ಜಿಂಬಾಬ್ವೆ 2 ವಿಕೆಟ್ ನಷ್ಟದಲ್ಲಿ 19 ರನ್ ಗಳಿಸಿದೆ.

  • 14 Jul 2024 06:30 PM (IST)

    IND vs ZIM Live Score: ಮೊದಲ ವಿಕೆಟ್ ಪತನ

    ಜಿಂಬಾಬ್ವೆ ತಂಡ 168 ರನ್‌ಗಳ ಗುರಿಯನ್ನು ಬೆನ್ನಟ್ಟಲು ಹೊರಟಿದೆ. ಮುಖೇಶ್ ಕುಮಾರ್ ಮೊದಲ ಓವರ್​ನಲ್ಲೇ ಶಾಕ್ ನೀಡಿದ್ದು ವೆಸ್ಲಿ ಮಾಧೆವೆರೆ ಖಾತೆ ತೆರೆಯದೆ ಔಟಾಗಿದ್ದಾರೆ.

  • 14 Jul 2024 06:10 PM (IST)

    IND vs ZIM Live Score: 168 ರನ್‌ಗಳ ಗುರಿ

    ಟೀಂ ಇಂಡಿಯಾ ಇನ್ನಿಂಗ್ಸ್ ಅಂತ್ಯಗೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಜಿಂಬಾಬ್ವೆಗೆ 168 ರನ್ ಗಳ ಗುರಿ ನೀಡಿದೆ. ತಂಡದ ಪರ ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 58 ರನ್, ರಿಯಾನ್ ಪರಾಗ್ 24 ಎಸೆತಗಳಲ್ಲಿ 22 ರನ್ ಹಾಗೂ ಶಿವಂ ದುಬೆ 12 ಎಸೆತಗಳಲ್ಲಿ 26 ರನ್ ಗಳಿಸಿ ಮಹತ್ವದ ಕಾಣಿಕೆ ನೀಡಿದರು.

  • 14 Jul 2024 06:09 PM (IST)

    IND vs ZIM Live Score: ಶಿವಂ ದುಬೆ ರನ್ ಔಟ್

    ಶಿವಂ ದುಬೆ 12 ಎಸೆತಗಳಲ್ಲಿ 26 ರನ್ ಗಳಿಸಿ ರನೌಟ್ ಆದರು. ಟೀಂ ಇಂಡಿಯಾ ಆರನೇ ವಿಕೆಟ್ ಕಳೆದುಕೊಂಡಿದೆ

  • 14 Jul 2024 06:00 PM (IST)

    IND vs ZIM Live Score: ಐದನೇ ವಿಕೆಟ್ ಪತನ

    ಸಂಜು ಸ್ಯಾಮ್ಸನ್ ಅರ್ಧಶತಕ ಗಳಿಸಿ ಔಟಾದರು. ಇದರೊಂದಿಗೆ ಭಾರತದ ಐದನೇ ವಿಕೆಟ್ ಪತನವಾಗಿದೆ. ಸ್ಯಾಮ್ಸನ್ 45 ಎಸೆತಗಳಲ್ಲಿ 58 ರನ್ ಗಳಿಸಿದರು. 18 ಓವರ್‌ಗಳಲ್ಲಿ ತಂಡ 137 ರನ್ ಗಳಿಸಿದೆ.

  • 14 Jul 2024 05:53 PM (IST)

    IND vs ZIM Live Score: ಸ್ಯಾಮ್ಸನ್ ಅರ್ಧಶತಕ

    ಜಿಂಬಾಬ್ವೆ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ ಸಿಡಿಸಿದ್ದಾರೆ. ಇದಕ್ಕಾಗಿ ಅವರು 39 ಎಸೆತಗಳನ್ನು ತೆಗೆದುಕೊಂಡರು. ಇದು ಅವರ ಟಿ20 ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಎರಡನೇ ಅರ್ಧಶತಕವಾಗಿದೆ.

  • 14 Jul 2024 05:43 PM (IST)

    IND vs ZIM Live Score: ಪರಾಗ್ ಔಟ್

    ರಿಯಾನ್ ಪರಾಗ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 15 ಓವರ್‌ಗಳ ನಂತರ ಭಾರತದ ಸ್ಕೋರ್ 113/4.

  • 14 Jul 2024 05:42 PM (IST)

    IND vs ZIM Live Score: 100 ರನ್ ಪೂರ್ಣ

    13ನೇ ಓವರ್‌ನಲ್ಲಿ ಭಾರತ 100 ರನ್ ಪೂರೈಸಿದೆ. ಆರಂಭದಲ್ಲಿ ಮೂರು ವಿಕೆಟ್‌ಗಳ ಪತನದ ನಂತರ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ 60 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದರು.

  • 14 Jul 2024 05:30 PM (IST)

    IND vs ZIM Live Score: ಸ್ಯಾಮ್ಸನ್ 300ನೇ ಸಿಕ್ಸರ್

    ಸಂಜು ಸ್ಯಾಮ್ಸನ್ 12ನೇ ಓವರ್​ನ ಮೂರನೇ ಎಸೆತದಲ್ಲಿ 110 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು. ಇದರೊಂದಿಗೆ ಟಿ20ಯಲ್ಲಿ 300 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ.

  • 14 Jul 2024 05:29 PM (IST)

    IND vs ZIM Live Score: ಸಂಜು- ರಿಯಾನ್ ಆಸರೆ

    ಪವರ್ ಪ್ಲೇನಲ್ಲಿಯೇ ಜಿಂಬಾಬ್ವೆ ಟೀಂ ಇಂಡಿಯಾದ ಮೂರು ವಿಕೆಟ್‌ಗಳನ್ನು ಉರುಳಿಸಿತ್ತು. ಇದರಿಂದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಸಂಜು ಸ್ಯಾಮ್ಸನ್ ಹಾಗೂ ರಯಾನ್ ಪರಾಗ್ ಇನ್ನಿಂಗ್ಸ್ ಕೈ ಹಿಡಿದಿದ್ದಾರೆ. ಭಾರತದ ಪರ ಸ್ಯಾಮ್ಸನ್ 21 ರನ್ ಹಾಗೂ ಪರಾಗ್ 17 ರನ್ ಗಳಿಸಿ ಆಡುತ್ತಿದ್ದಾರೆ. ಮತ್ತು ತಂಡ 11 ಓವರ್‌ಗಳಲ್ಲಿ 80 ರನ್ ಗಳಿಸಿತು.

  • 14 Jul 2024 05:08 PM (IST)

    IND vs ZIM Live Score: ಪವರ್ ಪ್ಲೇ ಅಂತ್ಯ

    ಮೊದಲ ಪವರ್‌ಪ್ಲೇ ಮುಗಿದಿದೆ. ಟೀಂ ಇಂಡಿಯಾ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 44 ರನ್ ಗಳಿಸಿದೆ.

  • 14 Jul 2024 05:08 PM (IST)

    IND vs ZIM Live Score: ಗಿಲ್ ಔಟ್

    ಐದನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಐದು ಓವರ್‌ಗಳಲ್ಲಿ 40 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳು ಪತನವಾಗಿವೆ. ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮಾ ನಂತರ ನಾಯಕ ಶುಭಮನ್ ಗಿಲ್ ಕೂಡ 13 ರನ್ ಗಳಿಸಿ ಔಟಾದರು.

  • 14 Jul 2024 04:56 PM (IST)

    IND vs ZIM Live Score: ಅಭಿಷೇಕ್ ಶರ್ಮಾ ಕೂಡ ಔಟ್

    ನಾಲ್ಕನೇ ಓವರ್‌ನಲ್ಲಿಯೇ ಜಿಂಬಾಬ್ವೆ ಭಾರತಕ್ಕೆ ಎರಡನೇ ಹೊಡೆತ ನೀಡಿದೆ. ಯಶಸ್ವಿ ಜೈಸ್ವಾಲ್ ನಂತರ ಅಭಿಷೇಕ್ ಶರ್ಮಾ ಕೂಡ 14 ರನ್ ಗಳಿಸಿ ಔಟಾದರು.

  • 14 Jul 2024 04:38 PM (IST)

    IND vs ZIM Live Score: ಮೊದಲ ವಿಕೆಟ್ ಪತನ

    13 ರನ್‌ಗಳ ಅಂತರದಲ್ಲಿ ಭಾರತಕ್ಕೆ ಮೊದಲ ಹೊಡೆತ ಬಿದ್ದಿದೆ. ಸಿಕಂದರ್ ರಜಾ ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಎರಡು ಸಿಕ್ಸರ್‌ಗಳ ನೆರವಿನಿಂದ 12 ರನ್ ಗಳಿಸಿ ಯಶಸ್ವಿ ಔಟಾದರು. ಅಭಿಷೇಕ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.ಒಂದು ಓವರ್ ನಂತರ ಭಾರತದ ಸ್ಕೋರ್ 15/1.

  • 14 Jul 2024 04:37 PM (IST)

    IND vs ZIM Live Score: ಭಾರತದ ಇನ್ನಿಂಗ್ಸ್ ಆರಂಭ

    ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ಸಿಕಂದರ್ ರಾಝಾ ಇನಿಂಗ್ಸ್‌ನ ಮೊದಲ ಓವರ್‌ ಬೌಲಿಂಗ್ ಮಾಡುತ್ತಿದ್ದಾರೆ.

  • 14 Jul 2024 04:17 PM (IST)

    IND vs ZIM Live Score: ಜಿಂಬಾಬ್ವೆ ತಂಡ

    ವೆಸ್ಲಿ ಮಾಧವೆರೆ, ತಡಿವಾನಾಶೆ ಮರುಮಣಿ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಸಿಕಂದರ್ ರಾಝಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಫರಾಜ್ ಅಕ್ರಂ, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಬ್ರಾಂಡನ್ ಮಾವುತಾ, ರಿಚರ್ಡ್ ನಾಗರವಾ, ಬ್ಲೆಸ್ಸಿಂಗ್ ಮುಜರಬಾನಿ.

  • 14 Jul 2024 04:15 PM (IST)

    IND vs ZIM Live Score: ಭಾರತ ತಂಡ

    ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ, ಮುಖೇಶ್ ಕುಮಾರ್.

  • 14 Jul 2024 04:03 PM (IST)

    IND vs ZIM Live Score: ಟಾಸ್ ಗೆದ್ದ ಜಿಂಬಾಬ್ವೆ

    ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

  • Published On - Jul 14,2024 4:02 PM

    Follow us