IND vs ZIM: 8 ಗಂಟೆಗೆ ಅಲ್ಲ; ಭಾರತ- ಜಿಂಬಾಬ್ವೆ ನಡುವಿನ ಟಿ20 ಪಂದ್ಯಗಳು ಎಷ್ಟು ಗಂಟೆಗೆ ಆರಂಭ?

|

Updated on: Jul 01, 2024 | 10:45 PM

IND vs ZIM: ಭಾರತ ಮತ್ತು ಜಿಂಬಾಬ್ವೆ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಜಿಂಬಾಬ್ವೆ ಪ್ರವಾಸಕ್ಕೆ ಈಗಾಗಲೇ ಟೀಂ ಇಂಡಿಯಾ ಪ್ರಕಟವಾಗಿದ್ದು, ತಂಡದ ನಾಯಕತ್ವವನ್ನು ಶುಭ್​ಮನ್ ಗಿಲ್​ಗೆ ಹಸ್ತಾಂತರಿಸಲಾಗಿದೆ. ಇತ್ತ ಜಿಂಬಾಬ್ವೆ ಕೂಡ 17 ಸದಸ್ಯರ ತಂಡವನ್ನು ಇಂದು ಪ್ರಕಟಿಸಿದೆ.

IND vs ZIM: 8 ಗಂಟೆಗೆ ಅಲ್ಲ; ಭಾರತ- ಜಿಂಬಾಬ್ವೆ ನಡುವಿನ ಟಿ20 ಪಂದ್ಯಗಳು ಎಷ್ಟು ಗಂಟೆಗೆ ಆರಂಭ?
ಭಾರತ- ಜಿಂಬಾಬ್ವೆ
Follow us on

ಟೀಂ ಇಂಡಿಯಾ ಚಾಂಪಿಯನ್ ಆಗುವ ಮೂಲಕ 9ನೇ ಆವೃತ್ತಿಯ ಟಿ20 ವಿಶ್ವಕಪ್ ಅಂತ್ಯಗೊಂಡಿದೆ. ಇದೀಗ ವಿಶ್ವ ಚಾಂಪಿಯನ್ ಟೀಂ ಇಂಡಿಯಾ ತನ್ನ ಮುಂದಿನ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಮಾಡಲಿದೆ. ಭಾರತ ಮತ್ತು ಜಿಂಬಾಬ್ವೆ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಜಿಂಬಾಬ್ವೆ ಪ್ರವಾಸಕ್ಕೆ ಈಗಾಗಲೇ ಟೀಂ ಇಂಡಿಯಾ ಪ್ರಕಟವಾಗಿದ್ದು, ತಂಡದ ನಾಯಕತ್ವವನ್ನು ಶುಭ್​ಮನ್ ಗಿಲ್​ಗೆ ಹಸ್ತಾಂತರಿಸಲಾಗಿದೆ. ಇತ್ತ ಜಿಂಬಾಬ್ವೆ ಕೂಡ 17 ಸದಸ್ಯರ ತಂಡವನ್ನು ಇಂದು ಪ್ರಕಟಿಸಿದೆ.

ಜಿಂಬಾಬ್ವೆ ವಿರುದ್ಧದ ಈ ಟಿ20 ಸರಣಿಯಲ್ಲಿ ಭಾರತದ ಅನೇಕ ಹಿರಿಯ ಆಟಗಾರರು ಆಡುತ್ತಿಲ್ಲ ಅಥವಾ ತಂಡಕ್ಕೆ ಆಯ್ಕೆ ಮಾಡಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಗಾಗಲೇ ಟಿ20 ಮಾದರಿಯಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಯುವ ಪಡೆಯನ್ನು ಕಟ್ಟಿರುವ ಬಿಸಿಸಿಐ, ಜಿಂಬಾಬ್ವೆಗೆ ತಂಡವನ್ನು ಕಳುಹಿಸುತ್ತಿದೆ. ಇನ್ನು ಸರಣಿಯ ಪಂದ್ಯಗಳು ಯಾವಾಗ? ಎಷ್ಟು ಗಂಟೆಗೆ? ಎಲ್ಲಿ ನಡೆಯಲ್ಲಿವೆ ಎಂಬುದರ ಮಾಹಿತಿ ಇಲ್ಲಿದೆ.

ಸಂಜೆ 4.30ಕ್ಕೆ ಪಂದ್ಯ ಆರಂಭ

ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ ಟ20 ಸರಣಿಯು ಜುಲೈ 6 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯ ಜುಲೈ 14 ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 7 ರಂದು ಮತ್ತು ಮೂರನೇ ಪಂದ್ಯ ಜುಲೈ 10 ರಂದು ನಡೆಯಲಿದ್ದು, ಮೂರನೇ ಪಂದ್ಯ ಉಭಯ ದೇಶಗಳ ನಡುವೆ ಜುಲೈ 13 ರಂದು ನಡೆಯಲಿದೆ. ಉಭಯ ದೇಶಗಳ ನಡುವಿನ ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆಯಲ್ಲಿ ನಡೆಯಲಿವೆ.

ಭಾರತೀಯ ಕಾಲಮಾನದ ಪ್ರಕಾರ, ಎಲ್ಲಾ ಪಂದ್ಯಗಳು ಸಂಜೆ 4.30 ರಿಂದ ಪ್ರಾರಂಭವಾಗಲಿದ್ದು, ಈ ಪಂದ್ಯಗಳು ಜಿಂಬಾಬ್ವೆ ಕಾಲಮಾನದ ಪ್ರಕಾರ ಮಧ್ಯಾಹ್ನ 1 ರಿಂದ ಆರಂಭವಾಗಲಿವೆ. ಮೇಲೆ ಹೇಳಿದಂತೆ ಭಾರತ ವಿರುದ್ಧದ ಟಿ20 ಸರಣಿಗೆ ಜಿಂಬಾಬ್ವೆ ತನ್ನ ತಂಡವನ್ನು ಸಹ ಪ್ರಕಟಿಸಿದ್ದು, ಈ ತಂಡವು ಸಿಕಂದರ್ ರಜಾ ನಾಯಕತ್ವದಲ್ಲಿ ಭಾರತದ ವಿರುದ್ಧ ಮೈದಾನಕ್ಕಿಳಿಯಲಿದೆ.

ಭಾರತ vs ಜಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ

ಮೊದಲನೇ ಟಿ20- ಶನಿವಾರ, ಜುಲೈ 6, ಸಂಜೆ 4.30 (IST)

  • ಎರಡನೇ ಟಿ20 – ಭಾನುವಾರ, ಜುಲೈ 7, ಸಂಜೆ 4.30 (IST)
  • ಮೂರನೇ ಟಿ20- ಬುಧವಾರ, ಜುಲೈ 10, ಸಂಜೆ 4.30 (IST)
  • ನಾಲ್ಕನೇ ಟಿ20- ಶನಿವಾರ, ಜುಲೈ 13, ಸಂಜೆ 4.30 (IST)
  • ಐದನೇ ಟಿ20- ಭಾನುವಾರ, ಜುಲೈ 14, ಸಂಜೆ 4.30 (IST)

ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

ಜಿಂಬಾಬ್ವೆ ತಂಡ: ಸಿಕಂದರ್ ರಜಾ (ನಾಯಕ), ಫರಾಜ್ ಅಕ್ರಮ್, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್‌ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನ್ನೋಸೆಂಟ್ ಕಿಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮನಿ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ರಾಂಡನ್ ಮಾವುಟಾ, ಬ್ಲೆಸ್ಸಿಂಗ್ ಮುಜರಬಾನಿ, ಡಿಯೋನ್ ಮೈಯರ್ಸ್, ರಿಚಾರ್ ಎನ್‌ಕ್ವಿಯರ್ಸ್, ಮಿಲ್ಟನ್ ಶುಂಬಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ