ಬಹುನಿರೀಕ್ಷಿತ ಏಷ್ಯಾಕಪ್ ಶುರುವಾಗಿದೆ. 6 ತಂಡಗಳ ನಡುವಣ ಈ ಕ್ರಿಕೆಟ್ ಕದನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಗಾಗಿವೆ. ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 4 ರಂದು ಭಾರತ ತಂಡ ನೇಪಾಳ ವಿರುದ್ಧ ತನ್ನ 2ನೇ ಪಂದ್ಯವಾಡಲಿದೆ.
ಟೀಮ್ ಇಂಡಿಯಾದ ಈ ಎರಡು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಅಂದರೆ ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಟೀಮ್ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಏಷ್ಯಾಕಪ್ನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ.
ಇಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ. ಆದರೆ ಇಂಟ್ರೆಸ್ಟಿಂಗ್ ವಿಷಯ ಎಂದರೆ ಪಾಕ್ ಆತಿಥ್ಯವಹಿಸಲಿರುವ 4 ಪಂದ್ಯಗಳಲ್ಲಿ ಸೂಪರ್-4 ಹಂತದ ಮೊದಲ ಪಂದ್ಯ ಕೂಡ ಸೇರಿದೆ.
ಈ ಬಾರಿಯ ಏಷ್ಯಾಕಪ್ನಲ್ಲಿ 6 ತಂಡಗಳು 2 ಗುಂಪುಗಳಲ್ಲಿ ಕಣಕ್ಕಿಳಿಯುತ್ತಿದೆ. ಇಲ್ಲಿ ಎ ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳಿವೆ. ಹಾಗೆಯೇ ಬಿ ಗ್ರೂಪ್ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳಿವೆ.
ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ನ ಇತರೆ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಅಂದರೆ ಭಾರತ ತಂಡದ ಎದುರಾಳಿ ಪಾಕಿಸ್ತಾನ್ ಹಾಗೂ ನೇಪಾಳ.
ಇನ್ನು ಮೊದಲ ಸುತ್ತಿನ ಪಾಯಿಂಟ್ಸ್ ಟೇಬಲ್ನಲ್ಲಿ ಪ್ರತಿ ಗ್ರೂಪ್ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೂಪರ್-4 ಹಂತಕ್ಕೇರಲಿದೆ. ಇಲ್ಲಿ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ A1 ಹಾಗೂ 2ನೇ ಸ್ಥಾನ ಅಲಂಕರಿಸುವ A2 ಆಗಿ ಗುರುತಿಸಿಕೊಳ್ಳಲಿದೆ. ಒಂದು ವೇಳೆ ಭಾರತ ತಂಡವು ಗ್ರೂಪ್ ಎ ನಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ ಎಂಬುದೇ ಈಗ ಪ್ರಶ್ನೆ.
ಏಕೆಂದರೆ ಗ್ರೂಪ್ ಎ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ ಪಾಕಿಸ್ತಾನದಲ್ಲಿ ತನ್ನ ಮೊದಲ ಸೂಪರ್- ಪಂದ್ಯವಾಡಬೇಕಿದೆ. ಅಂದರೆ ಭಾರತ ತಂಡವು A1 ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯಾ?
ಈ ಪ್ರಶ್ನೆಗೆ ಉತ್ತರ ಇಲ್ಲ. ಭಾರತ ತಂಡವು A1 ಆಗಿ ಹೊರಹೊಮ್ಮಿದ್ದರೂ ಲಾಹೋರ್‌ನಲ್ಲಿ ನಡೆಯಲಿರುವ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಬದಲಾಗಿ A2 ಸ್ಥಾನದೊಂದಿಗೆ ಟೂರ್ನಿಯಲ್ಲಿ ಮುಂದುವರೆಯಲಿದೆ.
ಅಂದರೆ ಮೊದಲ ಸ್ಥಾನವನ್ನು ತ್ಯಾಗ ಮಾಡಿ ಭಾರತ A2 ಸ್ಥಾನದೊಂದಿಗೆ ಶ್ರೀಲಂಕಾದಲ್ಲೇ ಸೂಪರ್-4 ಪಂದ್ಯಗಳನ್ನಾಡಲಿದೆ. ಈ ಮೂಲಕ ಲಾಹೋರ್‌ನಲ್ಲಿ ಪಂದ್ಯವಾಡುವುದನ್ನು ತಪ್ಪಿಸಿಕೊಳ್ಳಲಿದೆ.
ಇದನ್ನು ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಮೊದಲ ಸುತ್ತಿನಲ್ಲಿ ಅಗ್ರಸ್ಥಾನ ಅಲಂಕರಿಸಿದರೂ, ದ್ವಿತೀಯ ಸ್ಥಾನ ಅಲಂಕರಿಸಿದರೂ ಸೂಪರ್-4 ಹಂತದಲ್ಲಿ ಅದು ಪರಿಗಣನೆಗೆ ಬರುವುದಿಲ್ಲ. ಬದಲಾಗಿ ದ್ವಿತೀಯ ಸುತ್ತಿನಲ್ಲಿ ಪ್ರತಿ ತಂಡಗಳು ಉಳಿದ ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಬೇಕಿದೆ. ಹೀಗಾಗಿ ಇಲ್ಲಿ ಮೊದಲ ಸುತ್ತಿನ ಪಾಯಿಂಟ್ಸ್ ಟೇಬಲ್ನ ಲೆಕ್ಕಾಚಾರ ಬರುವುದಿಲ್ಲ. ಅದರಂತೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ ತನ್ನೆಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲೇ ಆಡಲಿದೆ.
ಏಷ್ಯಾಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 4:15 pm, Wed, 30 August 23