Team India: ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Jul 09, 2023 | 4:45 PM

India Women vs Bangladesh Women: ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ 35 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 54 ರನ್​ ಬಾರಿಸಿದರು.

Team India: ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ
Team India
Follow us on

Bangladesh Women vs India Women: ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ಮಹಿಳಾ ತಂಡದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರು ಭರ್ಜರಿ ಜಯ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಟೀಮ್ ಇಂಡಿಯಾ (Team India) ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡಕ್ಕೆ ಶಥಿ ರಾಣಿ (21) ಹಾಗೂ ಶಮೀಮಾ (17) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೋಭನಾ 23 ರನ್​ಗಳ ಕಾಣಿಕೆ ನೀಡಿದರು.

ಆದರೆ ಟೀಮ್ ಇಂಡಿಯಾ ವನಿತೆಯರ ಕರಾರುವಾಕ್ ದಾಳಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ರನ್​ಗಳಿಸಲು ಪರದಾಡಿದರು. ಇದಾಗ್ಯೂ ಕೆಲ ಕ್ರಮಾಂಕದಲ್ಲಿ ಅಜೇಯ 28 ರನ್ ಬಾರಿಸಿ ಶೋನಾ ಅಕ್ತೆರ್ ತಂಡದ ಮೊತ್ತವನ್ನು 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ಕ್ಕೆ ತಂದು ನಿಲ್ಲಿಸಿದರು.

115 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (0) ವಿಫಲರಾದರು. ಇನ್ನು ಸ್ಮೃತಿ ಮಂಧಾನ 38 ರನ್ ಬಾರಿಸಿ ಮಿಂಚಿದರೆ, ಜೆಮಿಮಾ ರೊಡ್ರಿಗಸ್ 11 ರನ್​ಗಳಿಸಿ ಔಟಾದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕಿ ಹರ್ಮನ್​ಪ್ರೀತ್ ಕೌರ್ 35 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 54 ರನ್​ ಬಾರಿಸಿದರು. ಈ ಮೂಲಕ 16.2 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 118 ರನ್​ಗಳಿಸಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಬಾಂಗ್ಲಾದೇಶ್ ಪ್ಲೇಯಿಂಗ್ 11: ನಿಗರ್ ಸುಲ್ತಾನ (ನಾಯಕಿ) , ಸಲ್ಮಾ ಖಾತುನ್ , ಶಮೀಮಾ ಸುಲ್ತಾನಾ , ನಹಿದಾ ಅಕ್ತೆರ್ , ರಿತು ಮೋನಿ , ಶೋರ್ನಾ ಅಕ್ತೆರ್, ಮಾರುಫಾ ಅಕ್ತೆರ್ , ಸೋಭಾನಾ ಮೊಸ್ತರಿ , ಶಥಿ ರಾಣಿ , ಸುಲ್ತಾನಾ ಖಾತುನ್ , ರಬೇಯಾ ಖಾನ್.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!

ಟೀಮ್ ಇಂಡಿಯಾ ಪ್ಲೇಯಿಂಗ್ 11: ಶಫಾಲಿ ವರ್ಮಾ , ಸ್ಮೃತಿ ಮಂಧಾನ , ಜೆಮಿಮಾ ರೊಡ್ರಿಗಸ್ , ಹರ್ಲೀನ್ ಡಿಯೋಲ್ , ಹರ್ಮನ್​ಪ್ರೀತ್ ಕೌರ್ (ನಾಯಕಿ) , ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ಅಮಂಜೋತ್ ಕೌರ್ , ಬಾರೆಡ್ಡಿ ಅನುಷಾ , ಮಿನ್ನು ಮಣಿ.