AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ಸಿಕ್ಸ್, 4 ಫೋರ್​ನೊಂದಿಗೆ ಸ್ಪೋಟಕ ಶತಕ ಸಿಡಿಸಿದ ದಿನೇಶ್: ಆದರೂ ಗೆದ್ದ ನಮೀಬಿಯಾ

Namibia vs Uganda: ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಹಾಗೂ ಜಾನ್ ಫ್ರೈಲಿಂಕ್ ಅಬ್ಬರಿಸಿದರು. 3ನೇ ವಿಕೆಟ್​ಗೆ 98 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

13 ಸಿಕ್ಸ್, 4 ಫೋರ್​ನೊಂದಿಗೆ ಸ್ಪೋಟಕ ಶತಕ ಸಿಡಿಸಿದ ದಿನೇಶ್: ಆದರೂ ಗೆದ್ದ ನಮೀಬಿಯಾ
Dinesh Nakrani-Namibia
TV9 Web
| Edited By: |

Updated on: Jul 09, 2023 | 3:48 PM

Share

Namibia vs Uganda: ವಿಂಡ್​ಹೋಕ್​ನ ಯುನೈಟೆಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಉಗಾಂಡ (Uganda) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನಮೀಬಿಯಾ (Namibia) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉಗಾಂಡ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಉಗಾಂಡ ತಂಡಕ್ಕೆ ರೊನಾಲ್ಡ್ ಲುತಾಯಾ (25) ಹಾಗೂ ರಾಬಿನ್ಸನ್ ಒಬುಯಾ (27) ಉತ್ತಮ ಆರಂಭ ಒದಗಿಸಿದ್ದರು.

ಆದರೆ ಆ ಬಳಿಕ ದಿಢೀರ್ ಕುಸಿತಕ್ಕೊಳಗಾದ ಉಗಾಂಡಗೆ ದಿನೇಶ್ ನಕ್ರಾಣಿ ಆಸರೆಯಾದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ದಿನೇಶ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 45 ಎಸೆತಗಳನ್ನು ಎದುರಿಸಿದ ದಿನೇಶ್ ನಕ್ರಾಣಿ 13 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 110 ರನ್​ ಸಿಡಿಸಿದರು.

ದಿನೇಶ್ ನಕ್ರಾಣಿ ಅವರ ಈ ಸಿಡಿಬ್ಬರದ ಶತಕದ ನೆರವಿನಿಂದ ಉಗಾಂಡ ತಂಡವು 6 ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿತು. 204 ರನ್​ಗಳ ಕಠಿಣ ಗುರಿ ಪಡೆದ ನಮೀಬಿಯಾ ತಂಡವು 16 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಹಾಗೂ ಜಾನ್ ಫ್ರೈಲಿಂಕ್ ಅಬ್ಬರಿಸಿದರು. 3ನೇ ವಿಕೆಟ್​ಗೆ 98 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಈ ಹಂತದಲ್ಲಿ 40 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 80 ರನ್ ಬಾರಿಸಿದ ಗೆರ್ಹಾರ್ಡ್ ಎರಾಸ್ಮಸ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಜಾನ್ ಫ್ರೈಲಿಂಕ್ ಉಗಾಂಡ ಬೌಲರ್​ಗಳ ಬೆಂಡೆತ್ತಿದರು. ಅಲ್ಲದೆ 48 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 93 ರನ್​ ಬಾರಿಸುವ ಮೂಲಕ 19.5 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ನಮೀಬಿಯಾ ತಂಡವು 5 ವಿಕೆಟ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ನಮೀಬಿಯಾ ಪ್ಲೇಯಿಂಗ್ 11: ಮೈಕೆಲ್ ವ್ಯಾನ್ ಲಿಂಗೆನ್ , ನಿಕೋಲಾಸ್ ಡೇವಿನ್ , ಗೆರ್ಹಾರ್ಡ್ ಎರಾಸ್ಮಸ್ (ನಾಯಕ) , ಜೆಜೆ ಸ್ಮಿಟ್ , ಜಾನ್ ಫ್ರಿಲಿಂಕ್ , ಝೇನ್ ಗ್ರೀನ್ (ವಿಕೆಟ್ ಕೀಪರ್) , ಗೆರ್ಹಾರ್ಡ್ ಜಾನ್ಸ್ ವ್ಯಾನ್ ರೆನ್ಸ್ಬರ್ಗ್ , ರೂಬೆನ್ ಟ್ರಂಪೆಲ್ಮನ್ , ಪಿಕ್ಕಿ ಯಾ ಫ್ರಾನ್ಸ್ , ಬೆನ್ ಶಿಕೊಂಗೊ , ಜ್ಯಾಕ್ ಬ್ರುಸೆಲ್.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!

ಉಗಾಂಡ ಪ್ಲೇಯಿಂಗ್ 11: ರಾಬಿನ್ಸನ್ ಒಬುಯಾ , ರೊನಾಲ್ಡ್ ಲುತಾಯಾ , ಕೆನ್ನೆತ್ ವೈಸ್ವಾ , ಅಲ್ಪೇಶ್ ರಾಮ್ಜಾನಿ , ದಿನೇಶ್ ನಕ್ರಾಣಿ , ಬ್ರಿಯಾನ್ ಮಸಾಬ (ನಾಯಕ) , ಸೈರಸ್ ಕಾಕುರು (ವಿಕೆಟ್ ಕೀಪರ್) , ಪಿಯುಸ್ ಒಲೋಕಾ , ಫ್ರಾಂಕ್ ನ್ಸುಬುಗಾ , ಬಿಲಾಲ್ ಹಸನ್ , ಜೋಸೆಫ್ ಬಾಗುಮಾ.

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ