IPL 2027: 6 ಆಟಗಾರರನ್ನು ರಿಲೀಸ್ ಮಾಡಿದ ಆರ್‌ಸಿಬಿ, ಉಳಿದುಕೊಂಡವರ ಪಟ್ಟಿ ಹೀಗಿದೆ
ಮುಂದಿನ ವರ್ಷದ ಅಂದರೆ 2027ರಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ (ಐಪಿಎಲ್ 2027) ಸಾಕಷ್ಟು ಬದಲಾವಣೆಯಾಗಲಿವೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ಐಪಿಎಎಲ್ ತಂಡಗಳು, ಐಪಿಎಲ್ 2027ರ ರಿಟೇನ್ ಮಾಡಿಕೊಂಡ ಮತ್ತು ರಿಲೀಸ್ ಮಾಡಿದ ಆಟಗಾರರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಹಾಗಾದ್ರೆ, ಆರ್‌ಸಿಬಿ ಯಾವೆಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದೆ? ಯಾರನ್ನೆಲ್ಲಾ ರಿಟೈನ್ ಮಾಡಿಕೊಂಡಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ತಾನು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ ಆವೃತ್ತಿಗಾಗಿ ತನ್ನ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಆರ್‌ಸಿಬಿ, ಇಂಗ್ಲೆಂಡ್ ಬ್ಯಾಟರ್ ಜೇಕಬ್ ಬೆಥೆಲ್ ಸೇರಿದಂತೆ ಐವರು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆರ್‌ಸಿಬಿ, ಮುಂಬರುವ ಆವೃತ್ತಿಯಲ್ಲೂ ತನ್ನ ಬಲಿಷ್ಠ ತಂಡವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಅದರಲ್ಲೂ ಕಳೆದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಖರೀದಿಸಿದ್ದ ಮಂಗೇಶ್ ಯಾದವ್ ಅವರನ್ನು ಬಿಡುಗಡೆ ಮಾಡಿರುವುದು ಗಮನಾರ್ಹವಾಗಿದೆ.
ಬೆಥೆಲ್, ಮಂಗೇಶ್ ಯಾದವ್ ಸೇರಿ ಐವರು ರಿಲೀಸ್
2027ರ ಐಪಿಎಲ್ (IPL) ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂಗ್ಲೆಂಡ್ ಬ್ಯಾಟರ್ ಜೇಕಬ್ ಬೆಥೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. 2026ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಹೆಚ್ಚಿನ ಆದ್ಯತೆ ನೀಡುವ ನಿರ್ಧಾರದಿಂದಾಗಿ ಬೆಥೆಲ್ ಎಲ್ಲರ ಗಮನ ಸೆಳೆದಿದ್ದರು. ಎರಡು ಬಾರಿಯ ಹಾಲಿ ಚಾಂಪಿಯನ್ ತಂಡವಾದ ಆರ್‌ಸಿಬಿ, ಕಳೆದ ಹರಾಜಿನಲ್ಲಿ 5.2 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಖರೀದಿಸಿದ್ದ ಅನ್‌ಕ್ಯಾಪ್ಡ್ ವೇಗದ ಬೌಲರ್ ಮಂಗೇಶ್ ಯಾದವ್ ಅವರನ್ನೂ ಸಹ ಕೈಬಿಟ್ಟಿದೆ. ಇದರೊಂದಿಗೆ, ಈ ವರ್ಷದ ಆರಂಭದಲ್ಲಿ ಭಾರತದೊಂದಿಗೆ ಅಂಡರ್-19 (U19) ವಿಶ್ವಕಪ್ ಗೆದ್ದಿದ್ದ ಎಡಗೈ ಆಟಗಾರ ವಿಹಾನ್ ಮಲ್ಹೋತ್ರಾ ಅವರನ್ನೂ ಸಹ ತಂಡದಿಂದ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: IPL 2027: ಐಪಿಎಲ್ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ!
ಯುವ ವೇಗಿ ಮಂಗೇಶ್ ಯಾದವ್ ಅವರನ್ನು ಬಿಡುಗಡೆ ಮಾಡಿರುವುದು ಆರ್‌ಸಿಬಿಯ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಕಳೆದ ಹರಾಜಿನಲ್ಲಿ ಬರೋಬ್ಬರಿ 5.2 ಕೋಟಿ ರು ನೀಡಿ ಅವರನ್ನು ತಂಡಕ್ಕೆ ಖರೀದಿಸಲಾಗಿತ್ತು. ಅನ್‌ಕ್ಯಾಪ್ಡ್ ಆಟಗಾರನಾಗಿದ್ದ ಮಂಗೇಶ್ ಮೇಲೆ ಆರ್‌ಸಿಬಿ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಇದೀಗ ಅವರನ್ನು ತಂಡದಿಂದ ರಿಲೀಸ್ ಮಾಡಿದ್ದು, 2027ರ ಐಪಿಎಲ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನಹರಿಸಿದೆ.
ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳು ತಂಡದಲ್ಲಿ ಮುಂದುವರಿಯಲಿದ್ದಾರೆ. ನಾಯಕ ರಜತ್ ಪಾಟಿದಾರ್ ಅವರ ನಾಯಕತ್ವ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅನುಭವವನ್ನು ತಂಡವು ಹೆಚ್ಚಾಗಿ ನೆಚ್ಚಿಕೊಂಡಿದೆ. ಫಿಲ್ ಸಾಲ್ಟ್, ಜಿತೇಶ್ ಶರ್ಮಾ ಮತ್ತು ಟಿಮ್ ಡೇವಿಡ್ ಅವರಂತಹ ಆಟಗಾರರು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದರೆ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಬೌಲಿಂಗ್ ವಿಭಾಗಕ್ಕೆ ಅನುಭವವನ್ನು ನೀಡಲಿದ್ದಾರೆ.
ಆರ್‌ಸಿಬಿಯಿಂದ ಬಿಡುಗಡೆಗೊಂಡವರು
- ಮಂಗೇಶ್ ಯಾದವ್: 5.2 ಕೋಟಿ ರೂ.
- ಜೇಕಬ್ ಬೆಥೆಲ್: 2.6 ಕೋಟಿ ರೂ.
- ರಿಚರ್ಡ್ ಗ್ಲೀಸನ್: 1.6 ಕೋಟಿ ರೂ.
- ಸಾತ್ವಿಕ್ ದೇಸ್ವಾಲ್: 30 ಲಕ್ಷ ರೂ.
- ವಿಹಾನ್ ಮಲ್ಹೋತ್ರಾ: 30 ಲಕ್ಷ ರೂ.
Not every player gets to be part of a legendary back-2️⃣-back winning squad…. you made it happen, and you made every one of us in Bengaluru & the entire 12th Man Army around the world proud. 🥹❤️
To the ones injured, we hope you get well soon, and to the rest, we wish you all the very best. ✨🙌
Thank you for everything, and for always being one of us. You’ll always be a part of our history. 🫶
#PlayBold #ನಮ್ಮRCB
— Royal Challengers Bengaluru (@RCBTweets) November 17, 2026
ಆಟಗಾರರ ರಿಲೀಸ್ ಬಳಿಕ ಆರ್‌ಸಿಬಿ ತಂಡ ಹೀಗಿದೆ
ರಜತ್ ಪಾಟೀದರ್ (ನಾಯಕ), ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಜಾಶ್ ಹೇಝಲ್‌ವುಡ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್,ಫಿಲ್ ಸಾಲ್ಟ್, ರೊಮ್ಯಾರಿಯೊ ಶೆಫರ್ಡ್, ನುವಾನ್ ತುಷಾರ, ವೆಂಕಟೇಶ್ ಅಯ್ಯರ್, ಜೇಕಬ್ ಡಫಿ, ಜೋರ್ಡನ್ ಕಾಕ್ಸ್, ರಸಿಖ್ ದಾರ್ ಸಲಾಮ್, ಸುಯಾಶ್ ಶರ್ಮಾ, ವಿಕ್ಕಿ ಒಸ್ತ್ವಾಲ್, ಅಭಿನಂದನ್ ಸಿಂಗ್, ಕಾನಿಷ್ಕ್ ಚೌವ್ಹಾಣ್, ಯಶ್ ದಯಾಳ್.
𝐖𝐀𝐍𝐓𝐄𝐃 𝐋𝐄𝐕𝐄𝐋: 𝑴𝑨𝑿𝑰𝑴𝑼𝑴 ⭐️ 𝐑𝐄𝐀𝐒𝐎𝐍: 𝑷𝑳𝑨𝒀𝑰𝑵𝑮 𝑩𝑶𝑳𝑫 ⭐️
RCB SEASON XIX: Dropping summer ‘27. 😎🔥
#PlayBold #ನಮ್ಮRCB https://t.co/q8ql7Vdi1x
— Royal Challengers Bengaluru (@RCBTweets) November 17, 2026
ಮುಂಬರುವ ಐಪಿಎಲ್ ಆವೃತ್ತಿಗೆ ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ. ಐವರು ಆಟಗಾರರನ್ನು ಬಿಡುಗಡೆ ಮಾಡಿರುವುದರಿಂದ ಹರಾಜಿನಲ್ಲಿ ತಂಡಕ್ಕೆ ಅಗತ್ಯವಿರುವ ಸ್ಥಾನಗಳನ್ನು ತುಂಬಿಕೊಳ್ಳಲು ಅವಕಾಶ ಸಿಕ್ಕಿದ್ದು, ಮಿನಿ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿ ಮಾಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.




