AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಹಲವು ಸ್ಟಾರ್‌ ಆಟಗಾರರಿಗೆ ಕೊಕ್‌, 10 ತಂಡಗಳಿಂದ ಹೊರ ಹೋದವರು, ಇದ್ದವರ ವಿವರ ಇಲ್ಲಿದೆ

ಮುಂಬರುವ ಬಹುನಿರೀಕ್ಷಿತ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್​ 2027) ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ 10 ಫ್ರಾಂಚೈಸಿಗಳು, ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಬೇಡವಾದವರನ್ನು ಟೀಂನಿಂದ ಬಿಡುಗಡೆ ಮಾಡಿವೆ. ಹಾಗಾದ್ರೆ, ಆರ್​​ಸಿಬಿ, ಚೆನ್ನೈ, ಮುಂಬೈ, ಹೈದರಾಬಾದ್, ಕೊಲ್ಕತ್ತಾ, ರಾಜಸ್ಥಾನ, ದೆಹಲಿ, ಎಲ್​​ಎಸ್​​ಜಿ, ಪಂಜಾಬ್ ಹಾಗೂ ಗುಜರಾತ್ ತಂಡದಿಂದ ಯಾರೆಲ್ಲಾ ಬಿಡುಗಡೆಯಾಗಿದ್ದಾರೆ? ಯಾರೆಲ್ಲ ಉಳಿದುಕೊಂಡಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

IPL 2027: ಹಲವು ಸ್ಟಾರ್‌ ಆಟಗಾರರಿಗೆ ಕೊಕ್‌, 10 ತಂಡಗಳಿಂದ ಹೊರ ಹೋದವರು, ಇದ್ದವರ ವಿವರ ಇಲ್ಲಿದೆ
IPL 2027 Image Credit source: IPL
ರಮೇಶ್ ಬಿ. ಜವಳಗೇರಾ
|

Updated on:Nov 17, 2026 | 9:49 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಸಿದ್ಧತೆಗಳು ಶುರುವಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2027ರ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಷನ್ ಹಾಗೂ ರಿಲೀಸ್ ಪಟ್ಟಿಯನ್ನು ಪ್ರಕಟಿಸಿವೆ. ಎಲ್ಲಾ ತಂಡಗಳು ರಿಟೈನ್ ಹಾಗೂ ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಇಂದು (ನವೆಂಬರ್ 17) ಕೊನೆ ದಿನವಾಗಿದ್ದು, ಹೀಗಾಗಿ 10 ಫ್ರಾಂಚೈಸಿಗಳು, ತಮಗೆ ಬೇಕಾದ ಪ್ಲೇಯರ್ಸ್​​​​ಗಳನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಕೆಲವು ಆಟಗಾರರನ್ನು ಟೀಂನಿಂದ ಬಿಡುಗಡೆ ಮಾಡಿವೆ. ಅದರಲ್ಲೂ ಮುಖ್ಯವಾಗಿ ಆರ್​​ಸಿಬಿ ಆಲ್‌ರೌಂಡರ್‌ ಜೇಕಬ್ ಬೆಥೆಲ್, ಮಂಗೇಶ್ ಸೇರಿದಂತೆ ಐವರನ್ನು ರಿಲೀಸ್ ಮಾಡಿದೆ. ಇನ್ನು ಮುಂಬೈ ಘಟಾನುಘಟಿ ಆಟಗಾರರನ್ನು ಬಿಡುಗಡೆ ಮಾಡಿದೆ. ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಹಾರ್ದಿಕ್‌ ಪಾಂಡ್ಯ (ಟ್ರೇಡ್‌) ಸೇರಿದಂತೆ ಹಲವರನ್ನ ಕೈಬಿಟ್ಟಿದೆ.

ಈ ಹಿಂದೆ ನವೆಂಬರ್ 15ರಂದು ಆಟಗಾರರ ರಿಟೆನ್ಷನ್ ಪಟ್ಟಿ ಪ್ರಕಟಿಸಲು ಕೊನೆ ದಿನವಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹೆಚ್ಚುವರಿಯಾಗಿ 48 ಗಂಟೆಗಳ ಕಾಲಾವಕಾಶ ನೀಡಿತ್ತು. ಪ್ರತಿ ತಂಡ 25 ಆಟಗಾರರ ಗರಿಷ್ಠ ಮಿತಿಯೊಳಗೆ ಎಷ್ಟು ಆಟಗಾರರನ್ನು ಬೇಕಾದರೂ ಉಳಿಸಿಕೊಳ್ಳಬಹುದು.

ಇದನ್ನೂ ಓದಿ: IPL 2027: 5 ಆಟಗಾರರನ್ನು ರಿಲೀಸ್‌ ಮಾಡಿದ ಆರ್‌ಸಿಬಿ, ಉಳಿದುಕೊಂಡವರ ಪಟ್ಟಿ ಹೀಗಿದೆ

ಡಿಸೆಂಬರ್ 16ರಂದು ಮಿನಿ ಹರಾಜು

ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ತಂಡಕ್ಕೂ 157 ಕೋಟಿ ರೂ.ಗಳ ವೇತನ ಮಿತಿ ನಿಗದಿಪಡಿಸಲಾಗಿದೆ. ಮುಂಬರುವ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಉದ್ದೇಶದಿಂದ ಎಲ್ಲಾ 10 ಫ್ರಾಂಚೈಸಿಗಳು, ಹಲವು ಪ್ಲೇಯರ್ ಗಳನ್ನು ತಂಡದಿಂದ ಬಿಡುಗಡೆಗೊಳಿಸಿವೆ. ಇದರೊಂದಿಗೆ ಫ್ರಾಂಚೈಸಿಗಳು ಮುಂಬರುವ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ.

ಐಪಿಎಲ್‌ 2027ರ ಋತುವಿಗಾಗಿ ಪ್ರತಿ ಫ್ರಾಂಚೈಸಿಗೆ ಒಟ್ಟು 157 ಕೋಟಿ ರೂ.ಗಳ ವೇತನ ಮಿತಿ ನಿಗದಿಪಡಿಸಲಾಗಿದೆ. ಉಳಿಸಿಕೊಳ್ಳಲಾದ ಆಟಗಾರರು ಮತ್ತು ಈಗಾಗಲೇ ಪೂರ್ಣಗೊಂಡಿರುವ ಟ್ರೇಡ್‌ಗಳಿಗಾಗಿ ಖರ್ಚಾದ ಮೊತ್ತವನ್ನು ಈ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಉಳಿದ ಹಣವನ್ನು ಡಿಸೆಂಬರ್‌ 16ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಬಳಸಬಹುದು. ಹೆಚ್ಚು ಹಣ ಉಳಿಸಿಕೊಂಡಿರುವ ತಂಡಗಳು ತಮ್ಮ ತಂಡದ ಅಗತ್ಯಗಳಿಗೆ ಅನುಗುಣವಾಗಿ ಪ್ರಮುಖ ಆಟಗಾರರನ್ನು ಖರೀದಿಸಲು ಹೆಚ್ಚಿನ ಅವಕಾಶ ಹೊಂದಿರುತ್ತವೆ. ಇನ್ನು ತಂಡದ ಹಳೆಯ ಆಟಗಾರರನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ಆಟಗಾರರನ್ನು ಖರೀದಿಸಲು ಸಾಕಷ್ಟು ಹಣ ಉಳಿಸಿಕೊಳ್ಳುವ ನಡುವೆಯೂ ಫ್ರಾಂಚೈಸಿಗಳು ಸಮತೋಲನ ಕಾಯ್ದುಕೊಳ್ಳಬೇಕಿದೆ.

ಟ್ರೇಡ್‌ನಲ್ಲಿ ಮಹತ್ವದ ಬದಲಾವಣೆ

ರಿಟೆನ್ಷನ್ ಪ್ರಕ್ರಿಯೆಗೂ ಮುನ್ನವೇ ಆಟಗಾರರ ಟ್ರೇಡ್‌ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಪಂಜಾಬ್ ಕಿಂಗ್ಸ್ ತಂಡ, ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಅರ್ಷದೀಪ್ ಸಿಂಗ್ ಅವರನ್ನು ಬಿಟ್ಟುಕೊಟ್ಟಿದೆ. ಇನ್ನು ದೆಹಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವೆ ಕೂಡ ಆಟಗಾರರ ವಿನಿಮಯ ನಡೆದಿದೆ. ರಿಷಭ್ ಪಂತ್ ತಮ್ಮ ಹಿಂದಿನ ತಂಡಕ್ಕೆ ಮರಳಿದ್ದು, ಕುಲ್ದೀಪ್ ಯಾದವ್ ಮತ್ತೊಂದು ತಂಡದತ್ತ ತೆರಳಿದ್ದಾರೆ.

10 ತಂಡಗಳಿಂದ ಬಿಡುಗಡೆಗೊಂಡ ಆಟಗಾರರ ಪಟ್ಟಿ

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಮಂಗೇಶ್ ಯಾದವ್: 5.2 ಕೋಟಿ, ಜೇಕಬ್ ಬೆಥೆಲ್: 2.6 ಕೋಟಿ, ರಿಚರ್ಡ್ ಗ್ಲೀಸನ್: 1.6 ಕೋಟಿ, ಸಾತ್ವಿಕ್ ದೇಸ್ವಾಲ್: 30 ಲಕ್ಷ ರು, ವಿಹಾನ್ ಮಲ್ಹೋತ್ರಾ: 30 ಲಕ್ಷ ರೂ.ಆಟಗಾರರ ರಿಲೀಸ್‌ ಬಳಿಕ ಆರ್‌ಸಿಬಿ ತಂಡ: ರಜತ್‌ ಪಾಟೀದರ್‌ (ನಾಯಕ), ವಿರಾಟ್‌ ಕೊಹ್ಲಿ, ಜಿತೇಶ್‌ ಶರ್ಮಾ, ಭುವನೇಶ್ವರ್‌ ಕುಮಾರ್‌, ಕೃಣಾಲ್‌ ಪಾಂಡ್ಯ, ಜಾಶ್‌ ಹೇಝಲ್‌ವುಡ್‌, ಟಿಮ್‌ ಡೇವಿಡ್‌, ದೇವದತ್‌ ಪಡಿಕ್ಕಲ್‌,ಫಿಲ್‌ ಸಾಲ್ಟ್‌, ರೊಮ್ಯಾರಿಯೊ ಶೆಫರ್ಡ್‌, ನುವಾನ್‌ ತುಷಾರ, ವೆಂಕಟೇಶ್‌ ಅಯ್ಯರ್‌, ಜೇಕಬ್‌ ಡಫಿ, ಜೋರ್ಡನ್‌ ಕಾಕ್ಸ್‌, ರಸಿಖ್‌ ದಾರ್‌ ಸಲಾಮ್‌, ಸುಯಾಶ್‌ ಶರ್ಮಾ, ವಿಕ್ಕಿ ಒಸ್ತ್ವಾಲ್‌, ಅಭಿನಂದನ್‌ ಸಿಂಗ್‌, ಕಾನಿಷ್ಕ್‌ ಚೌವ್ಹಾಣ್‌, ಯಶ್‌ ದಯಾಳ್‌.
  • ಗುಜರಾತ್ ಟೈಟನ್ಸ್ (GT): ಇಶಾಂತ್ ಶರ್ಮಾ, ಮಾರ್ಕ್ ವುಡ್, ಕುಲ್ವಂತ್ ಖೆಜ್ರೋಲಿಯಾ, ಶಾರುಖ್ ಖಾನ್, ಕಾನರ್ ಎಸ್ಟರ್‌ಹುಯಿಜೆನ್.
  • ಸನ್‌ರೈಸರ್ಸ್ ಹೈದರಾಬಾದ್ (SRH): ಟ್ರಾವಿಸ್ ಹೆಡ್, ಕಮಿಂದು ಮೆಂಡಿಸ್, ಜಯದೇವ್ ಉನದ್ಕಟ್‌, ದಿಲ್ಷಾನ್ ಮಧುಶಂಕ, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಶಿವಂ ಮಾವಿ, ಜೆರಾಲ್ಡ್ ಕೋಯೆಡ್ಜಿ, ಡೇವಿಡ್ ಪೇನ್
  • ರಾಜಸ್ಥಾನ್ ರಾಯಲ್ಸ್ (RR): ಆಡಮ್ ಮಿಲ್ನೆ (2.4 ಕೋಟಿ ರು.), ಕ್ವೆನಾ ಎಂಫಾಕಾ (1.5 ಕೋಟಿ ರು.), ತುಷಾರ್ ದೇಶಪಾಂಡೆ ( 6.5 ಕೋಟಿ ರು), ಕುಲ್ದೀಪ್ ಸೇನ್ (75 ಲಕ್ಷ ರು.), ಯುಧ್ವೀರ್ ಸಿಂಗ್ (35 ಲಕ್ಷ ರು.), ವಿಗ್ನೇಶ್ ಪುತ್ತೂರ್ ( 30 ಲಕ್ಷ ರು.), ರವಿ ಸಿಂಗ್, ಶಿಮ್ರಾನ್ ಹೆಟ್ಮಾಯರ್.ಪ್ಲೇಯರ್ಸ್ ರಿಲೀಸ್ ಬಳಿಕ ಟೀಂ: ಯಶಸ್ವಿ ಜೈಸ್ವಾಲ್,ವೈಭವ್ ಸೂರ್ಯವಂಶಿ,ರವೀಂದ್ರ ಜಡೇಜಾ,ರಿಯಾನ್ ಪರಾಗ್,ಸಂದೀಪ್ ಶರ್ಮಾ, ಶುಭಂ ದುಬೆ, ಜೋಫ್ರಾ ಆರ್ಚರ್, ಮೊಹಮ್ಮದ್ ಶಮಿ (ಟ್ರೇಡ್), ಅಮನ್ ರಾವ್ ಪೆರಾಲ, ಲ್ವಾನ್-ಡ್ರೆ ಪ್ರಿಟೋರಿಯಸ್, ಮಣಿಮಾರನ್ ಸಿದ್ಧಾರ್ಥ್ (ಟ್ರೇಡ್), ಬ್ರಿಜೇಶ್ ಶರ್ಮಾ, ದಸುನ್ ಶನಕ, ಧ್ರುವ್ ಜುರೆಲ್,ಡೊನೊವನ್ ಫೆರೇರಾ, ನಾಂಡ್ರೆ ಬರ್ಗರ್,ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ.
  • ಪಂಜಾಬ್ ಕಿಂಗ್ಸ್ (PBKS): ಲಾಕಿ ಫರ್ಗೂಸನ್, ಮಿಚೆಲ್ ಓವನ್, ನೆಹಾಲ್ ವಧೇರಾ, ಪಾಯಲಾ ಅವಿನಾಶ್, ಪ್ರವೀಣ್ ದುಬೆ ಮತ್ತು ವಿಶಾಲ್ ನಿಶಾದ್.
  • ಡೆಲ್ಲಿ ಕ್ಯಾಪಿಟಲ್ಸ್ (DC): ಮಿಚೆಲ್ ಸ್ಟಾರ್ಕ್, ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಪತುಮ್ ನಿಸ್ಸಾಂಕ, ಬೆನ್ ಡಕೆಟ್, ಕರುಣ್ ನಾಯರ್, ಸಾಹಿಲ್ ಪರಾಖ್, ದುಷ್ಮಂತ ಚಮೀರಾ, ಕೈಲ್ ಜೇಮಿಸನ್, ರೆಹಾನ್ ಅಹ್ಮದ್, ಅಮನ್ ಮಂಡಲ್.

    ರಿಟೈನ್ ಬಳಿಕ ತಂಡ: ಕೆ.ಎಲ್. ರಾಹುಲ್, ಪೃಥ್ವಿ ಶಾ, ರಿಷಭ್ ಪಂತ್ (ಟ್ರೇಡ್), ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ,ಆಕಿಬ್ ನಬಿ, ಅಕ್ಷರ್ ಪಟೇಲ್,ಡೇವಿಡ್ ಮಿಲ್ಲರ್, ಕೈಲ್ ಜೇಮಿಸನ್, ಲುಂಗಿ ಎನ್‌ಗಿಡಿ, ಮಾಧವ್ ತಿವಾರಿ, ಮುಖೇಶ್ ಕುಮಾರ್, ಸಮೀರ್ ರಿಜ್ವಿ, ತ್ರಿಪುರಾಣ ವಿಜಯ್, ವಿಪ್ರಜ್ ನಿಗಮ್, ಜೀಶನ್ ಅನ್ಸಾರಿ.

  • ಕೋಲ್ಕತಾ ನೈಟ್ ರೈಡರ್ಸ್ (KKR): ಅಜಿಂಕ್ಯ ರಹಾನೆ (ನಿವೃತ್ತಿ), ಆಕಾಶ್ ದೀಪ್, ಬ್ಲೆಸಿಂಗ್ ಮುಜರಾಬಾನಿ, ದಕ್ಷ್ ಕಮ್ರಾ, ಲವನಿತ್ ಸಿಸೋಡಿಯಾ, ಮಥೀಶ ಪತಿರಾಣಾ, ಮುಸ್ತಾಫಿಝುರ್ ರೆಹಮಾನ್, ನವದೀಪ್ ಸೈನಿ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ತೇಜಸ್ವಿ ಸಿಂಗ್, ಉಮ್ರಾನ್ ಮಲಿಕ್.

    ರಿಲೀಸ್ ಬಳಿಕ ಕೆಕೆಆರ್ ತಂಡ: ಮನೀಶ್ ಪಾಂಡೆ, ಕ್ಯಾಮರೂನ್ ಗ್ರೀನ್,ರಿಂಕು ಸಿಂಗ್, ಫಿನ್ ಅಲೆನ್, ಹರ್ಷಿತ್ ರಾಣಾ, ಕಾರ್ತಿಕ್ ತ್ಯಾಗಿ,ಅಂಗ್‌ಕ್ರಿಶ್ ರಘುವಂಶಿ, ಅನುಕೂಲ್ ರಾಯ್,ಪ್ರಶಾಂತ್ ಸೋಲಂಕಿ,ರಮಣದೀಪ್ ಸಿಂಗ್,ರೋವ್ಮನ್ ಪೊವೆಲ್, ಸಾರ್ಥಕ್ ರಂಜನ್, ಸೌರಭ್ ದುಬೆ,ಸುನಿಲ್ ನರೈನ್, ಟಿಮ್ ಸೀಫರ್ಟ್,ವೈಭವ್ ಅರೋರಾ,ವರುಣ್ ಚಕ್ರವರ್ತಿ.

  • ಮುಂಬೈ ಇಂಡಿಯನ್ಸ್ (MI): ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಅಲ್ಲಾ ಗಜನ್ಫರ್, ಅಥರ್ವ ಅಂಕೋಲೆಕರ್, ಕೇಶವ್ ಮಹಾರಾಜ್, ಮೊಹಮ್ಮದ್ ಇಝಾರ್, ಡ್ಯಾನಿಶ್ ಮಾಲೆವಾರ್, ಮಯಾಂಕ್ ಮಾರ್ಕಂಡೆ, ಮಯಾಂಕ್ ರಾವತ್, ಮಹಿಪಾಲ್ ಲೊಮ್ರೋರ್, ರಾಬಿನ್ ಮಿಂಜ್, ರುಚಿತ್ ಅಹಿರ್, ಕ್ರಿಶ್ ಭಗತ್, ಹಾರ್ದಿಕ್‌ ಪಾಂಡ್ಯ (ಟ್ರೇಡ್‌).
  • ಚೆನ್ನೈ ಸೂಪರ್ ಕಿಂಗ್ಸ್ (CSK): ಮ್ಯಾಥ್ಯೂ ಶಾರ್ಟ್ (1.5 ಕೋಟಿ ರೂ.), ಮ್ಯಾಟ್ ಹೆನ್ರಿ (2 ಕೋಟಿ ರು.), ಝ್ಯಾಕ್ ಫೌಲ್ಕ್ಸ್ (75 ಲಕ್ಷ ರು.), ಪ್ರಶಾಂತ್ ವೀರ್ (14.2 ಕೋಟಿ ರು.), ಅಮನ್ ಖಾನ್ (40 ಲಕ್ಷ ರೂ.), ಕುಲ್ದೀಪ್ ಯಾದವ್ (30 ಲಕ್ಷ ರೂ.), ಆಕಾಶ್ ಮಧ್ವಾಲ್ (30 ಲಕ್ಷ ರೂ.), ಡಿಯಾನ್ ಫಾರೆಸ್ಟರ್ (30 ಲಕ್ಷ ರೂ.), ಮ್ಯಾಕ್ನೀಲ್ ನೊರೊನ್ಹಾ (75 ಲಕ್ಷ ರೂ.) ಮತ್ತು ಎಂಎಸ್ ಧೋನಿ (4 ಕೋಟಿ ರೂ.)
  • ಲಖನೌ ಸೂಪರ್ ಜಯಂಟ್ಸ್ (LSG): ಮ್ಯಾಥ್ಯೂ ಬ್ರೀಟ್ಜ್ಕೆ, ಎನ್ರಿಕ್‌ ನೊರ್ಕಿಯಾ, ಜಾರ್ಜ್ ಲಿಂಡೆ, ವಾನಿಂದು ಹಸರಂಗ, ನಮನ್ ತಿವಾರಿ, ಅರ್ಶಿನ್ ಕುಲಕರ್ಣಿ, ಅವೇಶ್ ಖಾನ್.

Published On - 9:39 pm, Tue, 17 November 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ