ರಿಲೇಶನ್ಶಿಪ್ನಲ್ಲಿದ್ದು ಇಲ್ಲಿ ಬಂದು ಗುಳುಗುಳು ಮಾಡ್ತೀಯಲ್ಲ; ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿಗಳು ಯಾವಾಗ ಹೇಗೆ ತಿರುಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಹಾಗೆಯೇ ಆಗಿದೆ. ಸ್ಪರ್ಧಿಗಳು ಪರಸ್ಪರ ಖಾಸಗಿ ವಿಷಯ ಬಿಚ್ಚಿಟ್ಟಿದ್ದಾರೆ. ಇದು ನೋಡಲು ತುಂಬಾನೇ ಕೆಟ್ಟದಾಗಿ ಕಾಣಿಸಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದಕ್ಕೆ ಇಲ್ಲಿದೆ ವಿವರ .
ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಹಾಗೂ ಗಾನವಿ ಒಟ್ಟಾಗಿ ಆಟ ಆಡಿದ್ದಾರೆ. ಈ ಮೂಲಕ ಸೌಂದರ್ಯಾ ಅವರನ್ನು ನಾಮಿನೇಟ್ ಮಾಡಲಾಗಿದೆ. ಇದಾದ ಬಳಿಕ ನಡೆದ ಜಗಳ ಚರ್ಚೆಗೆ ಕಾರಣ ಆಗಿದೆ. ಗಾನವಿ ಅವರು ಸೌಂದರ್ಯಾ ಅವರು ಕನ್ನಡ ಸರಿಯಾಗಿ ಮಾತನಾಡೋದಿಲ್ಲ ಎಂಬ ವಿಷಯಕ್ಕೆ ಬಂದರು. ‘ನೀನು ಮೊದಲು ನೆಟ್ಟಗೆ ಕನ್ನಡ ಮಾತನಾಡು. ದುಬೈಗೆ ಕಳಿಸಿಬಿಡ್ತೀನಿ’ ಎಂದೆಲ್ಲ ಗಾನವಿ ಆವಾಜ್ ಹಾಕಿದರು. ಆ ಬಳಿಕ ಸೌಂದರ್ಯಾ ಅವರು, ‘ನೀನು 8 ವರ್ಷಗಳಿಂದ ರಿಲೇಶನ್ಶಿಪ್ನಲ್ಲಿದ್ದು ಇಲ್ಲಿ ಬಂದು ಗುಳಗುಳು ಮಾಡ್ತೀಯಲ್ಲ’ ಎಂದು ಖಾಸಗಿ ವಿಷಯ ತೆಗೆದರು. ಈ ವಿಷಯ ಚರ್ಚೆಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

