ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ; ಮೂರು ಮಾದರಿಗೂ ಪ್ರತ್ಯೇಕ ತಂಡ

ಜಿಂಬಾಬ್ವೆ ವಿರುದ್ಧ ಕ್ಲೀನ್ ಸ್ವೀಪ್ ಗೆಲುವಿನ ನಂತರ, ಭಾರತ ಮಹಿಳಾ ತಂಡವು ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಡಲಿದೆ. ಈ ಪ್ರವಾಸದಲ್ಲಿ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಸ್ಮೃತಿ ಮಂಧಾನ ಎಲ್ಲಾ ಸ್ವರೂಪಗಳಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಬಲಿಷ್ಠ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ; ಮೂರು ಮಾದರಿಗೂ ಪ್ರತ್ಯೇಕ ತಂಡ
ಭಾರತ ಮಹಿಳಾ ತಂಡ

Updated on: Nov 09, 2026 | 5:21 PM

ಜಿಂಬಾಬ್ವೆ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಮಹಿಳಾ ತಂಡ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಿದ್ಧವಾಗಿ ನಿಂತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ ಮೂರು ಮಾದರಿಯ ಸರಣಿಗಳು ನಡೆಯಲಿವೆ. ಹೀಗಾಗಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಸಲುವಾಗಿ ಬಲಿಷ್ಠ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಈ ಮೂರು ಮಾದರಿಯ ಸರಣಿಗಳಲ್ಲೂ ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪ್ರವಾಸದಲ್ಲಿ ಭಾರತ ತಂಡ ಒಂದು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಟೆಸ್ಟ್ ತಂಡ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಪ್ರತಿಕಾ ರಾವಲ್, ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ (ಉಪನಾಯಕಿ), ಶ್ರೀ ಚರಣಿ, ಸ್ನೇಹ್ ರಾಣಾ, ಕ್ರಾಂತಿ ಗೌಡ್, ನಂದಿನಿ ಶರ್ಮಾ, ಜಿಂತಿಮಣಿ ಕಲಿತಾ, ಸಯಾಲಿ ಸತ್ಘರೆ.

Loading...

ಏಕದಿನ ತಂಡ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಪ್ರತಿಕಾ ರಾವಲ್, ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ (ಉಪನಾಯಕಿ), ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ನಂದಿನಿ ಶರ್ಮಾ, ಜಿಂತಿಮಣಿ ಕಲಿತಾ, ಸಯಾಲಿ ಸತ್ಘರೆ.

ಟಿ20 ತಂಡ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ನಿಕಿ ಪ್ರಸಾದ್, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಅನುಷ್ಕಾ ಶರ್ಮಾ, ದೀಪ್ತಿ ಶರ್ಮಾ, ಶ್ರೀ ಚರಣಿ, ಪ್ರೇಮಾ ರಾವತ್, ಅಮನ್‌ಜೋತ್ ಕೌರ್, ಕ್ರಾಂತಿ ಗೌಡ್, ನಂದಿನಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ.

ಪ್ರವಾಸದ ವೇಳಾಪಟ್ಟಿ

  • ಡಿಸೆಂಬರ್ 9, 2026 : ಏಕೈಕ ಟೆಸ್ಟ್ ಪಂದ್ಯ, ಗ್ಕೆಬರ್ಹಾ.
  • ಡಿಸೆಂಬರ್ 16, 2026: ಮೊದಲ ಏಕದಿನ ಪಂದ್ಯ, ಪಾರ್ಲ್.
  • ಡಿಸೆಂಬರ್ 19, 2026: ಎರಡನೇ ಏಕದಿನ ಪಂದ್ಯ, ಕೇಪ್‌ಟೌನ್.
  • ಡಿಸೆಂಬರ್ 22, 2026: ಮೂರನೇ ಏಕದಿನ ಪಂದ್ಯ, ಬ್ಲೂಮ್‌ಫಾಂಟೈನ್.
  • ಡಿಸೆಂಬರ್ 26, 2026: ಮೊದಲ ಟಿ20 ಪಂದ್ಯ, ಬೆನೋನಿ.
  • ಡಿಸೆಂಬರ್ 29, 2026: ಎರಡನೇ ಟಿ20 ಪಂದ್ಯ, ಪಾಚೆಫ್‌ಸ್ಟ್ರೂಮ್.
  • ಡಿಸೆಂಬರ್ 30, 2026: ಮೂರನೇ ಟಿ20 ಪಂದ್ಯ, ಪಾಚೆಫ್‌ಸ್ಟ್ರೂಮ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Mon, 9 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us