ಭಾರತದ ಮಹಿಳಾ ಕ್ರಿಕೆಟ್ ತಂಡವು ತವರಿನ ಸರಣಿಗೆ ಸಜ್ಜಾಗುತ್ತಿದೆ. ಭಾರತ ಟಿ20I ಸರಣಿ ಮತ್ತು ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ. ಭಾರತ-ಇಂಗ್ಲೆಂಡ್ (India Women vs England Women) ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಟಿ20I ಸರಣಿ ಮತ್ತು ಏಕೈಲ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ. ಈ ಸರಣಿಯು ಡಿಸೆಂಬರ್ 6 ರಂದು ಪ್ರಾರಂಭವಾಗಿ ಡಿಸೆಂಬರ್ 17 ಕ್ಕೆ ಮುಕ್ತಾಯಗೊಳ್ಳಲಿದೆ. ಭಾರತದ ನೆಲದಲ್ಲಿ 18 ವರ್ಷಗಳ ನಂತರ ಇಂಗ್ಲೆಂಡ್ ಮತ್ತು ಭಾರತ 4 ದಿನಗಳ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮುಂಬರುವ ಸರಣಿಯ ವೇಳಾಪಟ್ಟಿ, ಸಮಯ ಮತ್ತು ತಂಡಗಳ ವಿವರಗಳು ಇಲ್ಲಿದೆ.
ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಸರಣಿಯು ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಬಿಸಿಸಿಐ ಮೂರು ಟಿ20ಐ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದ್ದು, ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕಿಯಾಗಿ ನೇಮಿಸಲಾಗಿದೆ. ತಂಡದಲ್ಲಿ ಸೈಕಾ ಇಶಾಕ್, ಟಿಟಾಸ್ ಸಾಧು, ಮತ್ತು ಶ್ರೇಯಾಂಕಾ ಪಾಟೀಲ್ ಸೇರಿದಂತೆ ಭರವಸೆಯ ಯುವ ಪ್ರತಿಭೆಗಳು ಇದ್ದಾರೆ. ಹರ್ಮನ್‌ಪ್ರೀತ್ ಕೌರ್ ಟೆಸ್ಟ್ ಪಂದ್ಯದಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ಸರಣಿ ಮುಕ್ತಾಯ: ಭಾರತದ ಮುಂದಿನ ಟಾರ್ಗೆಟ್ ದಕ್ಷಿಣ ಆಫ್ರಿಕಾ, ಪಂದ್ಯ ಯಾವಾಗ?, ಯಾವುದರಲ್ಲಿ ನೇರಪ್ರಸಾರ?
ಟಿ20 ಸರಣಿ:
ಏಕೈಕ ಟೆಸ್ಟ್:
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ಸರಣಿ 2023 ಜಿಯೋ ಸಿನಿಮಾ ಮತ್ತು ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಭಾರತದಲ್ಲಿ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತದೆ.
ಟಿ20 ಸರಣಿಗೆ ತಂಡಗಳು:
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್ , ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜಾ, ಮಿನ್ನು ಮಣಿ.
ಇಂಗ್ಲೆಂಡ್ ಮಹಿಳಾ ತಂಡ: ಲಾರೆನ್ ಬೆಲ್, ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸೆ, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಮಹಿಕಾ ಗೌರ್, ಡೇನಿಯಲ್ ಗಿಬ್ಸನ್, ಸಾರಾ ಗ್ಲೆನ್, ಬೆಸ್ ಹೀತ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಹೀದರ್ ನೈಟ್ (ನಾಯಕಿ), ನ್ಯಾಟ್ ಸೈವರ್-ಬ್ರಂಟ್, ಡೇನಿಯಲ್ ವ್ಯಾಟ್.
ಟೆಸ್ಟ್ ಪಂದ್ಯಕ್ಕೆ ತಂಡಗಳು:
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್ , ಟಿಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್.
ಇಂಗ್ಲೆಂಡ್ ಮಹಿಳಾ ತಂಡ: ಟಮ್ಮಿ ಬ್ಯೂಮಾಂಟ್, ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಕೇಟ್ ಕ್ರಾಸ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಬೆಸ್ ಹೀತ್, ಆಮಿ ಜೋನ್ಸ್, ಹೀದರ್ ನೈಟ್ (ನಾಯಕಿ), ಎಮ್ಮಾ ಲ್ಯಾಂಬ್, ನ್ಯಾಟ್ ಸ್ಕೈವರ್-ಬ್ರಂಟ್, ಡೇನಿಯಲ್ ವ್ಯಾಟ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ