ಐವರು ಶೂನ್ಯಕ್ಕೆ ಔಟ್! ಉಳಿದ ಐವರಿಗೆ ಒಂದಂಕಿ ದಾಟಲಾಗಲಿಲ್ಲ; 31 ರನ್​ಗಳಿಗೆ ಕುಸಿದ ಡೆಲ್ಲಿ

Abu Dhabi T10: ಅಬುಧಾಬಿಯ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 18ನೇ ಟಿ10 ಪಂದ್ಯದಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡದ ಅಕೇಲ್ ಹೊಸೈನ್ ಮತ್ತು ಚಾಮಿಕಾ ಕರುಣಾರತ್ನೆ ದಾಳಿಗೆ ತತ್ತರಿಸಿದ ಡೆಲ್ಲಿ ಬುಲ್ಸ್ ತಂಡ ಸಂಪೂರ್ಣ 10 ಓವರ್​ಗಳನ್ನೂ ಆಡಲು ಸಾಧ್ಯವಾಗದೆ ಕೇವಲ 9.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 31 ರನ್‌ಗಳಿಗೆ ಆಲೌಟ್ ಆಗಿದೆ.

ಐವರು ಶೂನ್ಯಕ್ಕೆ ಔಟ್! ಉಳಿದ ಐವರಿಗೆ ಒಂದಂಕಿ ದಾಟಲಾಗಲಿಲ್ಲ; 31 ರನ್​ಗಳಿಗೆ ಕುಸಿದ ಡೆಲ್ಲಿ
ಅಬುಧಾಬಿ ಟಿ10 ಲೀಗ್
Follow us
ಪೃಥ್ವಿಶಂಕರ
|

Updated on:Dec 05, 2023 | 7:57 AM

ಅಬುಧಾಬಿಯ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 18ನೇ ಟಿ10 ಪಂದ್ಯದಲ್ಲಿ (Abu Dhabi T10) ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡದ ಅಕೇಲ್ ಹೊಸೈನ್ ಮತ್ತು ಚಾಮಿಕಾ ಕರುಣಾರತ್ನೆ ದಾಳಿಗೆ ತತ್ತರಿಸಿದ ಡೆಲ್ಲಿ ಬುಲ್ಸ್ (New York Strikers vs Delhi Bulls) ತಂಡ ಸಂಪೂರ್ಣ 10 ಓವರ್​ಗಳನ್ನೂ ಆಡಲು ಸಾಧ್ಯವಾಗದೆ ಕೇವಲ 9.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 31 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಅಬುಧಾಬಿ ಟಿ10 ಲೀಗ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಮೊದಲ ತಂಡ ಎಂಬ ಬೇಡದ ದಾಖಲೆಗೆ ಕೊರಳೊಡ್ಡಿದೆ. ಇತ್ತ ಡೆಲ್ಲಿ ಬುಲ್ಸ್ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡಿದ ನ್ಯೂಯಾರ್ಕ್ ಸ್ಟ್ರೈಕರ್ಸ್‌ 67 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ನ್ಯೂಯಾರ್ಕ್​ಗೆ ಗುರ್ಬಾಜ್ ಆಸರೆ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಯಾರ್ಕ್ ಸ್ಟ್ರೈಕರ್ಸ್‌ 10 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 98 ರನ್ ಕಲೆಹಾಕಿತು. ತಂಡದ ಪರ ರಹಮಾನುಲ್ಲಾ ಗುರ್ಬಾಜ್ ಕೇವಲ 24 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 49 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರಲ್ಲದೆ ತಂಡದ ಮತ್ತೊಬ್ಬ ಆಲ್​ರೌಂಡರ್ ಓಡಿಯನ್ ಸ್ಮಿತ್ ಅಜೇಯ 25 ರನ್‌ಗಳ ಕೊಡುಗೆ ನೀಡಿದರು. ಈ ಇಬ್ಬರ ನಡುವೆ ಐದನೇ ವಿಕೆಟ್‌ಗೆ 27 ಎಸೆತಗಳಲ್ಲಿ ಅಜೇಯ 67 ರನ್‌ಗಳ ಜೊತೆಯಾಟ ಬಂತು.

ಅಬುದಾಬಿ ಟಿ10 ಲೀಗ್​ ಗೆದ್ದ ರೈನಾ ತಂಡ; ಟಿ20 ವಿಶ್ವಕಪ್ ಫ್ಲಾಪ್ ಸ್ಟಾರ್​ಗಳೇ ಇಲ್ಲಿ ಸೂಪರ್ ಸ್ಟಾರ್ಸ್​..!

ಸ್ಟಾರ್ ಆಟಗಾರರ ನಿರಸ ಪ್ರದರ್ಶನ

ಟಿ10 ಕ್ರಿಕೆಟ್‌ನಲ್ಲಿ, ಸಾಮಾನ್ಯವಾಗಿ 98 ರನ್‌ಗಳ ಗುರಿ ತುಂಬಾ ದೊಡ್ಡದಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ತಂಡಗಳು ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟುತ್ತವೆ. ಅದರಲ್ಲೂ ಡೆಲ್ಲಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೆ ಇರುವುದರಿಂದ ಈ ಗುರಿಯನ್ನು ಡೆಲ್ಲಿ ತಂಡ ಸುಲಭವಾಗಿ ಬೆನ್ನಟ್ಟುತ್ತದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 2023 ರ ವಿಶ್ವಕಪ್​ನಲ್ಲಿ 594 ರನ್​ ಬಾರಿಸಿದ್ದ ಡಿ ಕಾಕ್ ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅವರಿಂದ ದೊಡ್ಡ ಇನ್ನಿಂಗ್ಸ್ ಕೂಡ ನಿರೀಕ್ಷಿಸಲಾಗಿತ್ತು, ಆದರೆ ದಕ್ಷಿಣ ಆಫ್ರಿಕಾದ ಈ ಬ್ಯಾಟ್ಸ್‌ಮನ್ ಕೇವಲ 5 ರನ್ ಗಳಿಸಿ ಔಟಾದರು. ಈ ವಿಕೆಟ್ ನಂತರ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಯಿತು.

ಐವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ

ಅಂತಿಮವಾಗಿ, ಇಡೀ ತಂಡವು 9.3 ಓವರ್‌ಗಳಲ್ಲಿ ಕೇವಲ 31 ರನ್‌ಗಳಿಗೆ ಆಲೌಟ್ ಆಯಿತು. ಇದು ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಈ ಹಿಂದೆ 2019 ರಲ್ಲಿ ನಾರ್ದರ್ನ್ ವಾರಿಯರ್ಸ್‌ ತಂಡ, ಖಲಂದರ್ಸ್ ತಂಡದ ಎದುರು 46 ರನ್​ಗಳಿಗೆ ಆಲೌಟ್ ಆಗಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು. ಡೆಲ್ಲಿ ಪರ ರವಿ ಬೋಪಾರ ಗರಿಷ್ಠ 16 ರನ್ ಗಳಿಸಿದರು.

ಐವರಿಗೆ ಒಂದಂಕಿ ದಾಟಲಾಗಲಿಲ್ಲ

ಆದರೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ರಿಲೆ ರೂಸೋ, ರೋವ್‌ಮನ್ ಪೊವೆಲ್, ಜೇಮ್ಸ್ ವಿನ್ಸ್, ಡ್ವೇನ್ ಬ್ರಾವೊ ಕೂಡ ದಯನೀಯವಾಗಿ ವಿಫಲರಾದರು. ಈ ತಂಡದ ಐವರು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ರವಿ ಬೋಪಾರ (16) ಹೊರತುಪಡಿಸಿ ಉಳಿದ ಯಾವ ಬ್ಯಾಟರ್‌ಗಳು ಎರಡಂಕಿ ತಲುಪಲಿಲ್ಲ. ನ್ಯೂಯಾರ್ಕ್ ಪರ ಅಕಿಲ್ ಹೊಸೈನ್ 7 ರನ್ ನೀಡಿ 3 ವಿಕೆಟ್ ಮತ್ತು ಚಮಿಕಾ ಕರುಣರತ್ನೆ 6 ರನ್ ನೀಡಿ 3 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 am, Tue, 5 December 23

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್