ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬ್ಯಾಡ್ ನ್ಯೂಸ್; ಸೋಲು ಖಚಿತ ಎಂದ ಫ್ಯಾನ್ಸ್..!
SA vs IND: ವಾಸ್ತವವಾಗಿ ಟೀಂ ಇಂಡಿಯಾ ಟೆಸ್ಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಅವರ ನೆಲದಲ್ಲಿ ಮಣಿಸಿಲ್ಲ. ಹೀಗಾಗಿ ಈ ಬಾರಿಯಾದರೂ ಆ ಸೋಲಿನ ಹಣೆಪಟ್ಟಿಯನ್ನು ಅಳಿಸಿ ಹಾಕುವ ಇರಾದೆಯೊಂದಿಗೆ ರೋಹಿತ್ ಪಡೆ ಕಣಕ್ಕಿಳಿಯುತ್ತಿದೆ. ಆದರೆ ಈ ಎರಡೂ ಪಂದ್ಯಗಳಿಗೆ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡುತ್ತಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ (India vs South Africa) ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಭಾರತ ತಂಡ 3 ಟಿ20, 3 ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ (BCCI) ಈಗಾಗಲೇ ಎಲ್ಲಾ ಮೂರು ಫಾರ್ಮ್ಯಾಟ್‌ಗಳಿಗೆ ಟೀಂ ಇಂಡಿಯಾವನ್ನು (Team India) ಸಹ ಪ್ರಕಟಿಸಿದೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಮೂರು ಮಾದರಿಯ ಸರಣಿಗೆ ತನ್ನ ತಂಡವನ್ನು ಡಿಸೆಂಬರ್ 4 ರಂದು ಪ್ರಕಟಿಸಿದೆ. ಡಿಸೆಂಬರ್ 10 ರಿಂದ ಆರಂಭವಾಗಲಿರುವ ಟಿ20 ಸರಣಿಯಿಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ನಂತರ ಏಕದಿನ ಸರಣಿ ನಡೆಯಲ್ಲಿದೆ. ಅಂತಿಮವಾಗಿ ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.
ಅಂಪೈರ್‌ಗಳ ಪಟ್ಟಿ ಬಿಡುಗಡೆ
ಈ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಇಂದು ಐಸಿಸಿ ಅಂಪೈರ್‌ಗಳ ಹೆಸರನ್ನು ಸಹ ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಪೌಲ್ ರೀಫೆಲ್ ಮತ್ತು ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಲಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ-ಎಹ್ಸಾನ್ ರಾಜಾ ಅಂಪೈರಿಂಗ್ ಮಾಡಲಿದ್ದಾರೆ. ಈ ಅಂಪೈರ್‌ಗಳ ಪಟ್ಟಿ ಬಿಡುಗಡೆಯಾದ ಬಳಿಕ ಟೀಂ ಇಂಡಿಯಾ ಅಭಿಮಾನಿಳಲ್ಲಿ ಆತಂಕ ಹೆಚ್ಚಾಗಿದೆ. ಇದಕ್ಕೆ ಕಾರಣವೂ ಇದೇ. ಆ ಕಾರಣವೇ ಅಂಪೈರ್ ರಿಚರ್ಡ್ ಕೆಟಲ್‌ಬರೋ.
Umpires for India vs South Africa Test series. [TOI]
1st Test – Paul Reiffel and Richard Kettleborough
2nd Test – Richard Kettleborough and Ahsan Raza pic.twitter.com/QNBF6oxZ6R
— Johns. (@CricCrazyJohns) December 4, 2023
ಒಂದೂ ಟೆಸ್ಟ್ ಸರಣಿ ಗೆದ್ದಿಲ್ಲ
ವಾಸ್ತವವಾಗಿ ಟೀಂ ಇಂಡಿಯಾ ಟೆಸ್ಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಅವರ ನೆಲದಲ್ಲಿ ಮಣಿಸಿಲ್ಲ. ಅಂದರೆ ದಕ್ಷಿಣ ಅಫ್ರಿಕಾದಲ್ಲಿ ಭಾರತ ಇದುವರೆಗೂ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿಯಾದರೂ ಆ ಸೋಲಿನ ಹಣೆಪಟ್ಟಿಯನ್ನು ಅಳಿಸಿ ಹಾಕುವ ಇರಾದೆಯೊಂದಿಗೆ ರೋಹಿತ್ ಪಡೆ ಕಣಕ್ಕಿಳಿಯುತ್ತಿದೆ. ಆದರೆ ಈ ಎರಡೂ ಪಂದ್ಯಗಳಿಗೆ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡುತ್ತಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಫೈನಲ್ ಪಂದ್ಯಕ್ಕೆ ರಿಚರ್ಡ್ ಕೆಟಲ್‌ಬರೋ ಅಂಪೈರ್! ಭಾರತಕ್ಕೆ ಸೋಲು ಖಚಿತ ಎಂದ ಫ್ಯಾನ್ಸ್..!
ರಿಚರ್ಡ್ ಕೆಟಲ್‌ಬರೋ vs ಟೀಂ ಇಂಡಿಯಾ
ನಿಜ ಹೇಳಬೇಕೆಂದರೆ ಕಾಕತಾಳೀಯವಾಗಿ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಿದ ದೊಡ್ಡ ಟೂರ್ನಿಗಳಲ್ಲಿ ಟೀಂ ಇಂಡಿಯಾ ಸೋತಿದೆ. 2014 ರಿಂದಲೂ ಈ ಸೋಲಿನ ಸರಣಿ ಆರಂಭವಾಗಿದೆ. 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲನುಭವಿಸುವ ಮುನ್ನ, 2014ರ ವಿಶ್ವಕಪ್ ಫೈನಲ್, 2015ರ ವಿಶ್ವಕಪ್ ಸೆಮಿಫೈನಲ್, 2016ರ ವಿಶ್ವಕಪ್ ಸೆಮಿಫೈನಲ್, 2017ರ ವಿಶ್ವಕಪ್ ಫೈನಲ್ ಮತ್ತು 2017ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲಿನಲ್ಲೂ ಕೆಟಲ್‌ಬರೋ ಅಂಪೈರ್ ಆಗಿದ್ದರು. ರಿಚರ್ಡ್ ಅವರು ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾದ ಪಂದ್ಯಗಳಲ್ಲಿ ಅಂಪೈರ್ ಆಗಿದ್ದರು.
ಅಭಿಮಾನಿಗಳಿಗೆ ಆತಂಕ
2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸೋಲನ್ನು ಮರೆಯಲು ಯತ್ನಿಸುತ್ತಿರುವ ಅಭಿಮಾನಿಗಳಿಗೆ ರಿಚರ್ಡ್ ಮತ್ತೊಮ್ಮೆ ಅಂಪೈರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಆತಂಕವನ್ನುಂಟು ಮಾಡಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ರಿಚರ್ಡ್ ಅಂಪೈರಿಂಗ್ ಬಗ್ಗೆ ಸಾಕಷ್ಟು ಮೀಮ್ಸ್ಗಳ ಸುರಿಮಳೆಯಾಗುತ್ತಿದೆ.
Yeh Richard Kettleborough kab retire hone wala hai? Any idea? 🤯🤦 pic.twitter.com/AD2xhpMMDP
— CricWiz (@CricWizTalks) December 4, 2023
Indians To Richard Kettleborough pic.twitter.com/ATogaglMdw
— Aufridi Chumtya (@ShuhidAufridi) December 4, 2023
Seeing richard kettleborough again pic.twitter.com/cY93gji4qk
— Secular Chad (@SachabhartiyaRW) December 4, 2023
Indians to Richard Kettleborough pic.twitter.com/mTJc8qbusv
— Akshay Rana 🇮🇳🚩🚩 ( सनातनी ) (@RanaAp10) December 4, 2023
ಅಷ್ಟಕ್ಕೂ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡುತ್ತಿರುವುದರಿಂದ ಭಾರತ ಪಂದ್ಯಗಳನ್ನು ಸೋಲುತ್ತಿದೆ ಎಂದು ಹೇಳುವುದು ತಪ್ಪು. ಏಕೆಂದರೆ ಪಂದ್ಯದ ಸೋಲು ಗೆಲುವು ತಂಡದ ಪ್ರದರ್ಶನದ ಮೇಲೆ ನಿಂತಿರುತ್ತದೆಯೇ ಹೊರತು ಯಾರು ಅಂಪೈರ್ ಮಾಡುತ್ತಿದ್ದಾರೆ ಎಂಬುದರ ಮೇಲಲ್ಲ.
ಸರಣಿ ವೇಳಾಪಟ್ಟಿ ಇಲ್ಲಿದೆ
ಟೆಸ್ಟ್ ಸರಣಿಗೂ ಮುನ್ನ ಉಭಯ ತಂಡಗಳ ನಡುವೆ ಏಕದಿನ ಹಾಗೂ ಟಿ20 ಸರಣಿಗಳು ನಡೆಯಲಿವೆ. ಡಿಸೆಂಬರ್ 10ರಿಂದ 21ರವರೆಗೆ ಏಕದಿನ ಹಾಗೂ ಟಿ20 ಸರಣಿ ನಡೆಯಲಿದೆ. ಇದಾದ ನಂತರ ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ಡಿಸೆಂಬರ್ 26 ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾಗಲಿದೆ. ಇದರ ನಂತರ ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 am, Tue, 5 December 23