‘ನನ್ನನ್ನು ನಂಬಲಿಲ್ಲ, ನನ್ನ ಮಾತಿಗೆ ಬೆಲೆ ಕೊಡಲಿಲ್ಲ’; ಬಾಬರ್ ಮೇಲೆ ಗಂಭೀರ ಆರೋಪ ಹೊರಿಸಿದ ಇಫ್ತಿಕರ್
Iftikhar Ahmed: ತಂಡದ ಪ್ರದರ್ಶನದ ಬಗ್ಗೆ ಹಾಗೂ ಬಾಬರ್ ನಾಯಕತ್ವದ ಬಗ್ಗೆ ಮಾತನಾಡಿರುವ ಇಫ್ತಿಕರ್, ‘ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರವೂ ಬಾಬರ್ ನನ್ನನ್ನು ನಂಬಲಿಲ್ಲ ಎಂದು ಹೇಳಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ (ODI World Cup 2023) ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಿಂದ ಹೊರಬಿದ್ದ ಬಳಿಕ ಪಾಕ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಾಬರ್ ಆಝಂ (Babar Azam) ಎಲ್ಲಾ ಮೂರು ಸ್ವರೂಪಗಳ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಯಿತು. ಹಾಗೆಯೇ ತಂಡದ ಸಹಾಯಕ ಸಿಬ್ಬಂದಿಗಳು ಬದಲಾದರೂ, ವಿಶ್ವಕಪ್ ಮಧ್ಯದಲ್ಲೇ ಇಂಜಮಾಮ್-ಉಲ್-ಹಕ್ (Inzamam-ul-Haq) ತಂಡದ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿದಿದ್ದರು. ಆ ಬಳಿಕ ಸೀಮಿತ ಮಾದರಿಯ ಕ್ರಿಕೆಟ್ಗೆ ಹಾಗೂ ಟೆಸ್ಟ್ ಕ್ರಿಕೆಟ್ಗೆ ತಂಡದಲ್ಲಿ ಬೇರೆ ಬೇರೆ ನಾಯಕರನ್ನು ಆಯ್ಕೆ ಮಾಡಲಾಯಿತು. ಒಂದು ಹಂತಕ್ಕೆ ಪಾಕ್ ತಂಡದ ಗೊಂದಲಗಳೆಲ್ಲ ನಿವಾರಣೆಯಾದವು ಅಂದುಕೊಳ್ಳುವಷ್ಟರಲ್ಲಿ ಸ್ಫೋಟಕ ಸುದ್ದಿಯೊಂದು ಮುನ್ನಲೆಗೆ ಬಂದಿದೆ. ಪಾಕಿಸ್ತಾನ ತಂಡದ ಹಿರಿಯ ಆಟಗಾರ ಇಫ್ತಿಕರ್ ಅಹ್ಮದ್ (Iftikhar Ahmed) ಕೂಡ ಇದೀಗ ಬಾಬರ್ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಾಸ್ತವವಾಗಿ ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡಕ್ಕೆ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಮೇಲಾಗಿ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಇದೀಗ ತಂಡದ ಪ್ರದರ್ಶನದ ಬಗ್ಗೆ ಹಾಗೂ ಬಾಬರ್ ನಾಯಕತ್ವದ ಬಗ್ಗೆ ಮಾತನಾಡಿರುವ ಇಫ್ತಿಕರ್, ‘ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರವೂ ಬಾಬರ್ ನನ್ನನ್ನು ನಂಬಲಿಲ್ಲ ಎಂದು ಇಫ್ತಿಕರ್ ಹೇಳಿದ್ದಾರೆ.
ಬಾಬರ್ ಜೊತೆ ಮನಸ್ತಾಪ; ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಪಾಕ್ ತಂಡದ ಸ್ಟಾರ್ ಆಲ್ರೌಂಡರ್..!
ನನ್ನ ಮೇಲೆ ನಂಬಿಕೆ ಇರಲಿಲ್ಲ
ಪಾಕ್ ಮೂಲದ ಟಿವಿ ಮಾಧ್ಯಮದೊಂದಿಗೆ ಮಾತನಾಡಿರುವ ಇಫ್ತಿಕರ್, ‘ನಾನು ಬ್ಯಾಟಿಂಗ್ ಮತ್ತು ಬೌಲಿಂಗ್‌ನಿಂದ ತಂಡಕ್ಕೆ ಕೊಡುಗೆ ನೀಡುವ ಸಾಮಥ್ಯ್ರ ಹೊಂದಿದ್ದೇನೆ. ಆದರೆ ಬಾಬರ್ ನನ್ನ ಬೌಲಿಂಗ್‌ನಲ್ಲಿ ಹೆಚ್ಚು ವಿಶ್ವಾಸ ಇಡಲಿಲ್ಲ. ನನ್ನ ಬೌಲಿಂಗ್ ಮೇಲೆ ಬಾಬರ್ ನಂಬಿಕೆ ಇಡಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ತಂಡದ ಇತರ ಬೌಲರ್ಗಳಿಗೆ ಹೊಲಿಸಿಕೊಂಡರೆ ನಾನು ಅತ್ಯಂತ ಕಡಿಮೆ ರನ್ ನೀಡಿದ್ದೆ. ಅಲ್ಲದೆ ಟೂರ್ನಿಯಲ್ಲಿ ಕೇವಲ 5.59ರ ಎಕಾನಮಿಯಲ್ಲಿ ರನ್ ನೀಡಿ 16 ವಿಕೆಟ್ ಪಡೆದಿದ್ದೆ. ಆದರೆ ಬಾಬರ್ ನನಗೆ ಹೆಚ್ಚಿನ ಬೌಲಿಂಗ್ ನೀಡಲಿಲ್ಲ. ಸಂಪೂರ್ಣ 10 ಓವರ್ ಬೌಲ್ ಮಾಡಲು ಅವಕಾಶ ನೀಡಲಿಲ್ಲ ಎಂದು ಇಫ್ತಿಕರ್ ಹೇಳಿದ್ದಾರೆ.
بابراعظم کو مجھ پر بھروسہ نہیں تھا، کرکٹر افتخار احمد کی اے آر وائی نیوز کے پروگرام باونسر میں گفتگو@Shoaib_Jatt @IftiMania #ARYNews pic.twitter.com/dQPfkiKRPX
— ARY NEWS (@ARYNEWSOFFICIAL) December 4, 2023
ಬೇರೆ ಬೌಲರ್ಗಳಿಗೆ ಹೆಚ್ಚಿನ ಆದ್ಯತೆ
ಮುಂದುವರೆದು ಮಾತನಾಡಿರುವ ಇಫ್ತಿಕರ್, ನನಗೆ ಹೆಚ್ಚು ಓವರ್ ಬೌಲಿಂಗ್ ನೀಡುವಂತೆ ನಾನು ಬಾಬರ್ ಅವರೊಂದಿಗೆ ಮಾತನಾಡಿದೆ. ಆದರೆ ಬಾಬರ್ ಅವರು ತಮ್ಮ ಸ್ಪೆಷಲಿಸ್ಟ್ ಬೌಲರ್ಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದರು. ಹೀಗಾಗಿ ನನಗೆ ಹೆಚ್ಚು ಓವರ್ ಬೌಲ್ ಮಾಡಲು ಅವಕಾಶ ನೀಡಲಿಲ್ಲ. ನಾನು ದೇಶೀಯ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದೆ. ಆದರೂ ಬಾಬರ್ ನನ್ನನ್ನು ನಂಬಲಿಲ್ಲ. ತಮ್ಮ ವಿಶೇಷ ಬೌಲರ್‌ಗಳಾದ ಶಾದಾಬ್ ಖಾನ್, ಮೊಹಮ್ಮದ್ ನವಾಜ್‌ಗೆ ಆದ್ಯತೆ ನೀಡಿದರು ಎಂದಿದ್ದಾರೆ.
ಇಫ್ತಿಕರ್ ಬೌಲಿಂಗ್ ಪ್ರದರ್ಶನ
ಇಫ್ತಿಕರ್ ಪ್ರಥಮ ದರ್ಜೆಯಲ್ಲಿ 69, ಲಿಸ್ಟ್-ಎಯಲ್ಲಿ 58 ಮತ್ತು ಟಿ20ಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಅಂದರೆ ದೇಶೀಯ ಕ್ರಿಕೆಟ್ನಲ್ಲಿ ಒಟ್ಟು 186 ವಿಕೆಟ್ ಪಡೆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 21 ವಿಕೆಟ್ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ