ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯಗೊಂಡಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಎಡವಿತು. ಭಾರತದ ಯುವ ಪಡೆ ಟಿ20 ಸರಣಿ ಸೋಲಿನಿಂದ ಕೆಲ ವಿಷಯಗಳನ್ನು ಕಲಿತು ಕೆರಿಬಿಯನ್ ಪ್ರವಾಸವನ್ನು ಪೂರ್ಣಗೊಳಿಸಿದೆ. ಇದೀಗ ಮತ್ತೊಂದು ಸರಣಿಗೆ ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ. ಆಗಸ್ಟ್ 18 ರಿಂದ ಭಾರತ ಹಾಗೂ ಐರ್ಲೆಂಡ್ (India vs Ireland) ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದೀಗ ಈ ಸರಣಿಗಾಗಿ ಟೀಮ್ ಇಂಡಿಯಾ ಸ್ವಾತಂತ್ರ್ಯ ದಿನದಂದೇ ಐರ್ಲೆಂಡ್ ನಾಡಿಗೆ ತೆರಳಿದೆ.
ಜಸ್ಪ್ರಿತ್ ಬುಮ್ರಾ ನೇತೃತ್ವದ ಭಾರತ ತಂಡ ಐರಿಷ್ ನಾಡಿಗೆ ಪ್ರಯಾಣ ಬೆಳೆಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಮಾನದ ಮೂಲಕ ಭಾರತೀಯ ಆಟಗಾರರು ಪ್ರಯಾಣಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬುಮ್ರಾ, ಪ್ರಸಿದ್ಧ್ ಕೃಷ್ಣ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಕೆಲ ಆಟಗಾರರಿದ್ದಾರೆ.
Ireland 🇮🇪, here we come ✈️ #TeamIndia | #IREvIND pic.twitter.com/A4P66WZJzP
— BCCI (@BCCI) August 15, 2023
ಈಗಾಗಲೇ ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಕೂಡ ಪ್ರಕಟವಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿ ನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ಇದು ಕೆಲವೇ ದಿನಗಳ ಪಂದ್ಯಾವಳಿ ಆಗಿರುವ ಕಾರಣ ಭಾರತದ ಯುವ ಆಟಗಾರರ ಜೊತೆ ಕೋಚಿಂಗ್ ಸಿಬ್ಬಂದಿಗಳು ತೆರಳಿಲ್ಲ. ಈ ಪ್ರವಾಸದಿಂದ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಕೆಲ ಸಿಬ್ಬಂದಿಗಳಿಗೆ ವಿಶ್ರಾಂತಿ ನೀಡಲಾಗಿದೆ.
ಇಂಗ್ಲೆಂಡ್ ತಂಡಕ್ಕೆ ‘ಬೆನ್’ಬಲ: ನಿವೃತ್ತಿ ಹಿಂಪಡೆದ ಸ್ಟೋಕ್ಸ್..!
ಐರ್ಲೆಂಡ್ ವಿರುದ್ಧ ಭಾರತ ಒಟ್ಟು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದು ಆಗಸ್ಟ್ 18 ರಿಂದ ಪ್ರಾರಂಭವಾಲಿದೆ. 2ನೇ ಪಂದ್ಯವು ಆಗಸ್ಟ್ 20 ರಂದು ಜರುಗಲಿದೆ. ಅಂತೆಯೆ ಅಂತಿಮ 3ನೇ ಟಿ20 ಪಂದ್ಯ ಆಗಸ್ಟ್ 22 ರಂದು ಆಯೋಜಿಸಲಾಗಿದೆ. ಈ ಎಲ್ಲಾ ಪಂದ್ಯಗಳು ಡಬ್ಲಿನ್ನ ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ ನಡೆಯಲಿದೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಹೆಚ್ಚು ಯುವ ಆಟಗಾರರನ್ನೇ ಆಯ್ಕೆ ಮಾಡಿದ್ದು, ರುತುರಾಜ್ ಗಾಯಕ್ವಾಡ್ಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ಪ್ರಸಿದ್ಧ್ ಕೃಷ್ಣ, ಶಿವಂ ದುಬೆ, ರಿಂಕು ಸಿಂಗ್, ಜಿತೇಶ್ ಶರ್ಮಾ ತಂಡದಲ್ಲಿದ್ದಾರೆ. ಈ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಭಾರತ ಟಿ20 ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ತಿಲಕ್ ವರ್ಮಾ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ