Independence Day 2023: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಟೀಮ್ ಇಂಡಿಯಾ ಆಟಗಾರರು
ಕಳೆದ 75 ವರ್ಷಗಳಲ್ಲಿ ಭಾರತವು ಕ್ರೀಡೆಯಲ್ಲಿ ಸಾಧಿಸಿದ ಪ್ರಗತಿ ಒಂದು ತೂಕವಾದರೆ, ಕ್ರಿಕೆಟ್ನಲ್ಲಿ ಮೆರೆದ ಪಾರುಪತ್ಯ ಮತ್ತೊಂದು ತೂಕ ಎಂದೇ ಹೇಳಬಹುದು. 1983 ರಲ್ಲಿ ಕಪಿಲ್-ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿತು. ನಂತರ ಲಕ್ಷಾಂತರ ಜನರು ಈ ಆಟವನ್ನು ಅನುಸರಿಸಲು ಪ್ರಾರಂಭಿಸಿದ್ದು, ಭಾರತೀಯ ಕ್ರಿಕೆಟ್‌ನ ಹಾದಿಯನ್ನು ಶಾಶ್ವತವಾಗಿ ಬದಲಾಯಿಸಿತು.
ಇಂದು ಭಾರತಕ್ಕೆ ಸ್ವಾತಂತ್ರ್ಯ (Independence Day 2023) ಬಂದು 77 ವರ್ಷಗಳು ಪೂರ್ಣಗೊಂಡಿವೆ. ಇಡೀ ದೇಶವೇ ಈ ಸಂಭ್ರಮದಲ್ಲಿ ಮುಳುಗಿದೆ. ಭಾರತೀಯ ಆಟಗಾರರು ಕೂಡ ಈ ದಿನವನ್ನು ತಮ್ಮದೇ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. ವಿರಾಟ್ ಕೊಹ್ಲಿಯಿಂದ ಹಿಡಿದು ಜೆಮಿಮಾ ರೋಡಗ್ರಿಗಸ್ವರೆಗೆ ಭಾರತದ ಕ್ರೀಡಾಳುಗಳು ಆಗಸ್ಟ್ 15 ರ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದ್ದಾರೆ. ಅನೇಕ ಭಾರತೀಯ ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್ ಫೋಟೋಗಳನ್ನು ಬದಲಾಯಿಸುವ ಮೂಲಕ 77 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಕಪಿಲ್ ದೇವ್, ಇರ್ಫಾನ್ ಪಠಾಣ್ ಮತ್ತು ಹಲವಾರು ಪ್ರಮುಖ ಕ್ರಿಕೆಟಿಗರು ಎಕ್ಸ್ (ಟ್ವಿಟ್ಟರ್) ನಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಿಸಿ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದಾರೆ. ರವೀಂದ್ರ ಜಡೇಜಾ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಚೇತೇಶ್ವರ್ ಪೂಜಾರ ಕೂಡ ಶುಭಕೋರಿದ್ದಾರೆ.
ಭಾರತದ ಪ್ರಮುಖ ಆಟಗಾರರು ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದ್ದು ಹೀಗೆ:
Happy Independence Day to all. Jai Hind. 🇮🇳
— Virat Kohli (@imVkohli) August 15, 2023
View this post on Instagram
Happy Independence Day 🇮🇳 pic.twitter.com/QHb2h7DYaH
— Robin Aiyuda Uthappa (@robbieuthappa) August 15, 2023
Wishing you all a very Happy Independence Day! 🇮🇳
— Anil Kumble (@anilkumble1074) August 15, 2023
Wishing my fellow Indians a joyous #IndependenceDay! Let’s honor the sacrifices of our freedom fighters and cherish the spirit of unity in diversity. May the tricolor always fly high, symbolizing unity in diversity. #JaiHind! 🇮🇳 pic.twitter.com/rN5jT5JksK
— Suresh Raina🇮🇳 (@ImRaina) August 15, 2023
Grateful to be playing for this country. Happy Independence Day! 🇮🇳 pic.twitter.com/OTVMaAhDh0
— Jemimah Rodrigues (@JemiRodrigues) August 15, 2023
ಕಳೆದ 75 ವರ್ಷಗಳಲ್ಲಿ ಭಾರತವು ಕ್ರೀಡೆಯಲ್ಲಿ ಸಾಧಿಸಿದ ಪ್ರಗತಿ ಒಂದು ತೂಕವಾದರೆ, ಕ್ರಿಕೆಟ್ನಲ್ಲಿ ಮೆರೆದ ಪಾರುಪತ್ಯ ಮತ್ತೊಂದು ತೂಕ ಎಂದೇ ಹೇಳಬಹುದು. 1983 ರಲ್ಲಿ ಕಪಿಲ್-ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿತು. ನಂತರ ಲಕ್ಷಾಂತರ ಜನರು ಈ ಆಟವನ್ನು ಅನುಸರಿಸಲು ಪ್ರಾರಂಭಿಸಿದ್ದು, ಭಾರತೀಯ ಕ್ರಿಕೆಟ್‌ನ ಹಾದಿಯನ್ನು ಶಾಶ್ವತವಾಗಿ ಬದಲಾಯಿಸಿತು.
Independence Day 2023: 77ನೇ ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಕೆಂಪುಕೋಟೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ
1989 ರಲ್ಲಿ, ದುಂಡುಮುಖದ 16 ವರ್ಷದ ಹದಿಹರೆಯದ ಸಚಿನ್ ರಮೇಶ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದರು. ಇಂದು ಇವರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. 2007 ರಲ್ಲಿ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ಭಾರತವು ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲೇ ಗೆದ್ದಿತು, ಇದು 2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟಿಗೆ ಕೂಡ ಕಾರಣವಾಯಿತು.
28 ವರ್ಷಗಳ ನಂತರ, 2011 ರಲ್ಲಿ, ಎಂಎಸ್ ಧೋನಿ ನೇತೃತ್ವದ ಭಾರತವು ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದರು. ಭಾರತವು ಎರಡನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿತು. ಈ ಬಾರಿ 2023 ರಲ್ಲಿ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ನಡೆಯಲಿದ್ದು, ಇದು ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿಯಿದೆ. 2013 ರಿಂದ ಯಾವುದೇ ಪ್ರಮುಖ ಟ್ರೋಫಿಗಳನ್ನು ಗೆಲ್ಲದ ಭಾರತ ಈ ಬಾರಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ಗೆಲ್ಲುತ್ತಾ ಎಂಬುದು ನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ