ಸ್ವಾತಂತ್ರ್ಯ ದಿನದಂದೇ ಐರ್ಲೆಂಡ್​ಗೆ ತೆರಳಲಿದೆ ಟೀಮ್ ಇಂಡಿಯಾ: ಯಾರೆಲ್ಲ ಪ್ರಯಾಣಿಸಲಿದ್ದಾರೆ?

|

Updated on: Aug 12, 2023 | 9:32 AM

Team to Depart for Ireland on August 15: ವೇಗಿ ಜಸ್​ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದು ಆಗಸ್ಟ್ 18 ರಿಂದ ಆರಂಭವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಗಸ್ಟ್ 15 ರಂದು ಡಬ್ಲಿನ್​ಗೆ ತೆರಳಲಿದೆ.

ಸ್ವಾತಂತ್ರ್ಯ ದಿನದಂದೇ ಐರ್ಲೆಂಡ್​ಗೆ ತೆರಳಲಿದೆ ಟೀಮ್ ಇಂಡಿಯಾ: ಯಾರೆಲ್ಲ ಪ್ರಯಾಣಿಸಲಿದ್ದಾರೆ?
IND vs IRE T20I Series
Follow us on

ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ (India vs West Indies) ವಿರುದ್ಧ ಟಿ20 ಸರಣಿ ಆಡುತ್ತಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಿಲ್ಲ. ಐದು ಪಂದ್ಯಗಳ ಸರಣಿಯಲ್ಲಿ 1-2 ಅಂತರದ ಹಿನ್ನಡೆಯಲ್ಲಿದೆ. ಇಂದು ಮಹತ್ವದ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಈ ಸರಣಿ ಬಳಿಕ ಭಾರತ ತಂಡ ಐರ್ಲೆಂಡ್ (India vs Ireland) ವಿರುದ್ಧ ಪಂದ್ಯವನ್ನು ಆಡಲಿದೆ. ಈಗಾಗಲೇ ಈ ಸರಣಿಗೆ ಭಾರತ ತಂಡ ಕೂಡ ಪ್ರಕಟವಾಗಿದೆ. ಸದ್ಯ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಟೀಮ್ ಇಂಡಿಯಾ ಐರ್ಲೆಂಡ್​ಗೆ ತೆರಳಲಿದೆ.

ಆಗಸ್ಟ್ 15ಕ್ಕೆ ಟೀಮ್ ಇಂಡಿಯಾ ಪ್ರಯಾಣ:

ವೇಗಿ ಜಸ್​ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದು ಆಗಸ್ಟ್ 18 ರಿಂದ ಆರಂಭವಾಗಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಗಸ್ಟ್ 15 ರಂದು ಡಬ್ಲಿನ್​ಗೆ ಪ್ರಯಾಣ ಬೆಳೆಸಲಿದೆ. ಅಚ್ಚರಿ ಎಂದರೆ, ಇದು ಕೆಲವೇ ದಿನಗಳ ಪಂದ್ಯಾವಳಿ ಆಗಿರುವ ಕಾರಣ ಭಾರತದ ಹಿರಿಯ ಆಟಗಾರರ ಜೊತೆಗೆ ಕೋಚಿಂಗ್ ಸಿಬ್ಬಂದಿಗೂ ಐರ್ಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಪ್ರವಾಸಕ್ಕೆ ಭಾರತ ತಂಡದೊಂದಿಗೆ ಕೋಚಿಂಗ್ ಸಿಬ್ಬಂದಿ ಕೂಡ ತೆರಳುವುದಿಲ್ಲ. ಎಂಟು ವರ್ಷಗಳ ಬಳಿಕ ಮೊದಲ ಬಾರಿಗೆ ಟೀಮ್ ಇಂಡಿಯಾ ಕೋಚ್ ಇಲ್ಲದೆ ಸರಣಿಯೊಂದನ್ನು ಆಡಲಿದೆ.

ಇಂದು ಭಾರತ-ವೆಸ್ಟ್ ಇಂಡೀಸ್ ನಾಲ್ಕನೇ ಟಿ20: ಹಾರ್ದಿಕ್ ಪಡೆಗೆ ಗೆದ್ದರಷ್ಟೇ ಉಳಿಗಾಲ

ಇದನ್ನೂ ಓದಿ
Virat Kohli: ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್​ಗೆ ಕಿಂಗ್ ಕೊಹ್ಲಿ ಗಳಿಸುವ ಆದಾಯ ಇಷ್ಟೊಂದಾ..!
World Cup 2023: ‘ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ’; ಭಾರತ ಸರ್ಕಾರದ ಸ್ಪಷ್ಟ ಸಂದೇಶ!
ಚೇಸಿಂಗ್ ಮಾಡಿದ ತಂಡ ಗೆದ್ದಿರುವುದು ಕೇವಲ 2 ಪಂದ್ಯ: ವಿಭಿನ್ನವಾಗಿದೆ ಸೆಂಟ್ರಲ್ ಬ್ರೋವರ್ಡ್ ಪಿಚ್
IND vs IRE: ಮುಖ್ಯ ಕೋಚ್ ಇಲ್ಲದೆ ಐರ್ಲೆಂಡ್ ಪ್ರವಾಸ ಮಾಡಲಿದೆ ಟೀಂ ಇಂಡಿಯಾ..!

ಹಿರಿಯರಿಗೆ ವಿಶ್ರಾಂತಿ-ಯುವಕರಿಗೆ ಮಣೆ:

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಹೆಚ್ಚು ಯುವ ಆಟಗಾರರನ್ನೇ ಆಯ್ಕೆ ಮಾಡಿದ್ದು, ರುತುರಾಜ್ ಗಾಯಕ್ವಾಡ್​ಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ಪ್ರಸಿದ್ಧ್ ಕೃಷ್ಣ, ಶಿವಂ ದುಬೆ ತಂಡಕ್ಕೆ ಮರಳಿದರೆ ರಿಂಕು ಸಿಂಗ್, ಜಿತೇಶ್ ಶರ್ಮಾ ಅವಕಾಶ ಪಡೆದುಕೊಂಡಿದ್ದಾರೆ. ಇದು ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಈ ಸರಣಿಯಿಂದ ಕೂಡ ಹೊರಗುಳಿಸಿದ್ದಾರೆ.

ಭಾರತ-ಐರ್ಲೆಂಡ್ ಸರಣಿಯ ವೇಳಾಪಟ್ಟಿ-ನೇರಪ್ರಸಾರ:

ಐರ್ಲೆಂಡ್ ವಿರುದ್ಧ ಭಾರತ ಒಟ್ಟು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆಗಸ್ಟ್ 18 ರಂದು ಮೊದಲ ಟಿ20 ಪಂದ್ಯ, 2ನೇ ಪಂದ್ಯವು ಆಗಸ್ಟ್ 20 ರಂದು ಜರುಗಲಿದೆ. ಅಂತೆಯೆ 3ನೇ ಪಂದ್ಯ ಆಗಸ್ಟ್ 22 ರಂದು ಆಯೋಜಿಸಲಾಗಿದೆ. ಈ ಎಲ್ಲಾ ಪಂದ್ಯಗಳಿಗೆ ಡಬ್ಲಿನ್​ನ ಮಲಾಹೈಡ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತೀಯ ಕಾಲಮಾನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ನಡುವಣ ಟಿ20 ಸರಣಿ ಸಂಜೆ 7:30ಕ್ಕೆ ಶುರುವಾಗಲಿದೆ. ಇದರ ನೇರ ಪ್ರಸಾರದ ಹಕ್ಕು ವಯಾಕಾಮ್ 18 ಪಾಲಾಗಿದ್ದು ಸ್ಪೋರ್ಟ್ 18ನಲ್ಲಿ ಲೈವ್ ವೀಕ್ಷಿಸಬಹುದು. ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಇರಲಿದೆ.

ಭಾರತ ಟಿ20 ತಂಡ: ಜಸ್​ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಶಹಬಾಝ್ ಅಹ್ಮದ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

ಐರ್ಲೆಂಡ್ ಟಿ20 ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೇರ್, ಲೋರ್ಕನ್ ಟಕರ್, ಹ್ಯಾರಿ ಟ್ಯಾಕ್ಟರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್ ವೀರ್‌ಕಾಮ್, ಬೆನ್ ವೈಟ್, ಕ್ರೇಗ್ ಯುಂಗ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ