ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಗುರುವಾರ (ಡಿಸೆಂಬರ್ 28) ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು (India Women vs Australia Women) ಎದುರಿಸಲಿದೆ. ಸರಣಿಯ ಆರಂಭಿಕ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಕಳೆದ ವಾರ ಇದೇ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಭಾರತವು ಕಾಂಗರೂ ಪಡೆಯನ್ನು ಎದುರಿಸಿತು ಮತ್ತು ಎಂಟು ವಿಕೆಟ್‌ಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿತು. ವುಮೆನ್ ಇನ್ ಬ್ಲೂ ಏಕದಿನದಲ್ಲಿ ಅದೇ ಪ್ರದರ್ಶನವನ್ನು ಮುಂದುವರೆಸುವ ತವಕದಲ್ಲಿದೆ.
ಆದರೆ, ಆಸ್ಟ್ರೇಲಿಯಾ ವನಿತೆಯರವ ವಿರುದ್ಧ ಭಾರತೀಯ ಮಹಿಳೆಯ ದಾಖಲೆ ಉತ್ತಮವಾಗಿಲ್ಲ. ಒಟ್ಟಾರೆ ಆಸ್ಟ್ರೇಲಿಯಾ ವಿರುದ್ಧದ 50 ಏಕದಿನ ಪಂದ್ಯಗಳಲ್ಲಿ ಭಾರತವು ಕೇವಲ 10 ಗೆಲುವುಗಳು ಮತ್ತು 40 ಸೋಲುಗಳನ್ನು ಕಂಡಿದೆ. ತವರಿನಲ್ಲಿ ಕೂಡ ಟೀಮ್ ಇಂಡಿಯಾ ದಾಖಲೆ ಕೆಟ್ಟದಾಗಿದೆ. 21 ODIಗಳಲ್ಲಿ ಕೇವಲ ನಾಲ್ಕು ಗೆಲುವುಗಳು ಮತ್ತು 17 ಸೋಲುಗಳನ್ನು ತವರಿನಲ್ಲಿ ಅನುಭವಿಸಿದೆ. ಫೆಬ್ರವರಿ 2007 ರಿಂದ ತವರಿನಲ್ಲಿ ಆಡಿದ ಕೊನೆಯ ಏಳು ಪಂದ್ಯಗಳಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಲಿಲ್ಲ.
NZ vs BAN: ನ್ಯೂಝಿಲೆಂಡ್ಗೆ ಸೋಲುಣಿಸಿ ಹೊಸ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ ಯಾವಾಗ ನಡೆಯಲಿದೆ?
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ ಪಂದ್ಯವು ಗುರುವಾರ, 28 ಡಿಸೆಂಬರ್ ರಂದು ನಡೆಯಲಿದೆ.
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ ಎಲ್ಲಿ ನಡೆಯಲಿದೆ?
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ 1:30 PM IST ಕ್ಕೆ ಆರಂಭವಾಗಲಿದೆ.
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನವನ್ನು ಯಾವ ಟಿವಿ ಚಾನೆಲ್ ಪ್ರಸಾರ ಮಾಡುತ್ತದೆ?
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನದ ಲೈವ್ ಸ್ಟ್ರೀಮ್ ವೀಕ್ಷಣೆ ಹೇಗೆ?
ಭಾರತ vs ಆಸ್ಟ್ರೇಲಿಯಾ ಮೊದಲ ಮಹಿಳಾ ಏಕದಿನ ಲೈವ್ ಸ್ಟ್ರೀಮಿಂಗ್ JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಉಭಯ ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ಹರ್ಲೀನ್ ಡಿಯೋಲ್.
ಆಸ್ಟ್ರೇಲಿಯಾ: ಡಾರ್ಸಿ ಬ್ರೌನ್, ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಅಲಿಸ್ಸಾ ಹೀಲಿ (ನಾಯಕಿ- ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಾಲಿಯಾ ಮೆಕ್‌ಗ್ರಾತ್, ಬೆತ್ ಮೂನಿ (ವಿಕೆಟ್ ಕೀಪರ್), ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಜಾರ್ಜಿಯಾ ವೇರ್‌ಹ್ಯಾಮ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ