NZ vs BAN: ನ್ಯೂಝಿಲೆಂಡ್​ಗೆ ಸೋಲುಣಿಸಿ ಹೊಸ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್

New Zealand vs Bangladesh: ಈ ಹಂತದಲ್ಲಿ ಕಣಕ್ಕಿಳಿದ ಜೇಮ್ಸ್ ನೀಶಮ್ 29 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 48 ರನ್​ ಚಚ್ಚಿದರು. ಈ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿತು.

NZ vs BAN: ನ್ಯೂಝಿಲೆಂಡ್​ಗೆ ಸೋಲುಣಿಸಿ ಹೊಸ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್
Bangladesh
Follow us
| Updated By: ಝಾಹಿರ್ ಯೂಸುಫ್

Updated on: Dec 28, 2023 | 8:10 AM

ನೇಪಿಯರ್​ನ ಮೆಕ್ಲೀನ್ ಪಾರ್ಕ್​ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ (Bangladesh) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಜ್ಮುಲ್ ಹೊಸೈನ್ ಶಾಂಟೊ ನ್ಯೂಝಿಲೆಂಡ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಕಿವೀಸ್ ಪಡೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಮೊದಲ ಓವರ್​ನ 4ನೇ ಎಸೆತದಲ್ಲಿ ಟಿಮ್ ಸೀಫರ್ಟ್​ (0) ವಿಕೆಟ್ ಪಡೆದು ಮೆಹದಿ ಹಸನ್ ಮಿರಾಝ್ ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಫಿನ್ ಅಲೆನ್ (1) ಶೊರಿಫುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಗ್ಲೆನ್ ಫಿಲಿಪ್ಸ್ (0), ಡೇರಿಲ್ ಮಿಚೆಲ್ (14) ಹಾಗೂ ಮಾರ್ಕ್​ ಚಾಪ್​ಮನ್ (19) ವಿಕೆಟ್ ಕೈಚೆಲ್ಲಿದರು. ಪರಿಣಾಮ 50 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ನ್ಯೂಝಿಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಕಣಕ್ಕಿಳಿದ ಜೇಮ್ಸ್ ನೀಶಮ್ 29 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 48 ರನ್​ ಚಚ್ಚಿದರು. ಈ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಮತ್ತೊಂದೆಡೆ ರೋನಿ ತಾಲೂಕ್​ದಾರ್ (10) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (19) ಬೇಗನೆ ಔಟಾಗಿದ್ದರು.

ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌಮ್ಯ ಸರ್ಕಾರ್ 22 ರನ್​ಗಳ ಕೊಡುಗೆ ನೀಡಿದರು. ಮತ್ತೊಂದು ತುದಿಯಲ್ಲಿ ಕ್ರೀಸ್ ಕಚ್ಚಿ ನಿಂತು 36 ಎಸೆತಗಳಲ್ಲಿ 42 ರನ್ ಬಾರಿಸಿದ ಲಿಟ್ಟನ್ ದಾಸ್ 18.4 ಓವರ್​ಗಳಲ್ಲಿ ಬಾಂಗ್ಲಾದೇಶ್ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಬಾಂಗ್ಲಾ ಪಡೆ 5 ವಿಕೆಟ್​ಗಳ ಜಯ ಸಾಧಿಸಿದೆ.

ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್:

ವಿಶೇಷ ಎಂದರೆ ಇದು ನ್ಯೂಝಿಲೆಂಡ್​ ಪಿಚ್​ನಲ್ಲಿ ಬಾಂಗ್ಲಾದೇಶ್ ತಂಡದ ಮೊದಲ ಟಿ20 ಗೆಲುವು. ಅಂದರೆ ಆತಿಥೇಯರ ವಿರುದ್ಧ ಬಾಂಗ್ಲಾದೇಶ್ ಇದುವರೆಗೆ ಚುಟುಕು ಕ್ರಿಕೆಟ್​ನಲ್ಲಿ ಗೆಲುವು ದಾಖಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ನೇಪಿಯರ್ ಮಣ್ಣಿನಲ್ಲಿ ಕಿವೀಸ್ ಪಡೆಯನ್ನು ಬಗ್ಗು ಬಡಿಯುವ ಮೂಲಕ ಬಾಂಗ್ಲಾದೇಶ್ ಹೊಸ ಇತಿಹಾಸ ನಿರ್ಮಿಸಿದೆ.

ನ್ಯೂಝಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಫಿನ್ ಅಲೆನ್ , ಡೇರಿಲ್ ಮಿಚೆಲ್ , ಗ್ಲೆನ್ ಫಿಲಿಪ್ಸ್ , ಮಾರ್ಕ್ ಚಾಪ್ಮನ್ , ಜೇಮ್ಸ್ ನೀಶಮ್ , ಮಿಚೆಲ್ ಸ್ಯಾಂಟ್ನರ್ (ನಾಯಕ) , ಆಡಮ್ ಮಿಲ್ನ್ , ಟಿಮ್ ಸೌಥಿ , ಇಶ್ ಸೋಧಿ , ಬೆನ್ ಸಿಯರ್ಸ್.

ಇದನ್ನೂ ಓದಿ: KL Rahul: ಕಿಂಗ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್: ಸೌಮ್ಯ ಸರ್ಕಾರ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ನಜ್ಮುಲ್ ಹೊಸೈನ್ ಶಾಂಟೊ (ನಾಯಕ) , ರೋನಿ ತಾಲುಕ್ದಾರ್ , ತೌಹಿದ್ ಹೃದಯೋಯ್ , ಅಫೀಫ್ ಹೊಸೈನ್ , ಮೆಹದಿ ಹಸನ್ , ತಂಝಿಮ್ ಹಸನ್ ಸಾಕಿಬ್ , ಶೋರಿಫುಲ್ ಇಸ್ಲಾಂ , ರಿಶಾದ್ ಹೊಸೇನ್ , ಮುಸ್ತಾಫಿಜುರ್ ರೆಹಮಾನ್.

ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ
ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!