
ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದಲ್ಲಿ ನಡೆಸಿದ ದಾಳಿಯ ಕಹಿ ನೆನಪು ಹಸಿಯಾಗಿದೆ. ಈ ಕೆಟ್ಟ ನೆನಪು ಅಷ್ಟು ಬೇಗ ಮಾಸುವಂಥದ್ದಲ್ಲ. ಹೀಗಿರುವಾಗಲೇ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ (Team India) ಕ್ರಿಕೆಟ್ ಆಡುವ ಪರಿಸ್ಥಿತಿ ಬಂದೊದಗಿತ್ತು. ಈ ಪಂದ್ಯವನ್ನು ಕೈ ಬಿಡಬೇಕು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ನಾವು ಆಟ ಆಡೇ ಆಡುತ್ತೇವೆ ಎಂದು ಟೀಂ ಇಂಡಿಯಾ ದೃಢ ನಿರ್ಧಾರ ಮಾಡಿತ್ತು. ಆಟದ ವೇಳೆ ಟೀಂ ಇಂಡಿಯಾ ತೋರಿದ ಖದರ್ ಸೂಪರ್ ಆಗಿತ್ತು. ಇದನ್ನು ಅನೇಕರು ಕೊಂಡಾಡಿದ್ದಾರೆ.
ಇಂಡಿಯಾ ಹಾಗೂ ಪಾಕಿಸ್ತಾನದ ಮ್ಯಾಚ್ ಟಾಸ್ ವೇಳೆ ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕ ಸಲ್ಮಾನ್ ಜೊತೆ ಹ್ಯಾಂಡ್ ಶೇಕ್ ಮಾಡಲೇ ಇಲ್ಲ. ಟಾಸ್ ಮುಗಿಸಿ, ನೇರವಾಗಿ ಮರಳಿ ಬಂದರು. ಆಗಲೇ ಟೀಂ ಇಂಡಿಯಾ ತನ್ನ ನಿಲುವನ್ನು ಸ್ಪಷ್ಟವಾಗಿ ತೋರಿಸಿಯಾಗಿತ್ತು. ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಇದನ್ನೂ ಓದಿ: ಪಾಕ್ ನಾಯಕನ ಜೊತೆ ಕೈಕುಲುಕದ ಸೂರ್ಯ, ಮುಖ ಕೂಡ ನೋಡಲಿಲ್ಲ; ವಿಡಿಯೋ
ಮೊದಲು ಬ್ಯಾಟಿಂಗ್ ಇಳಿದ ಪಾಕ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ತಲುಪಿತು. ಅಂತಿಮವಾಗಿ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ಯವಾಯಿತು. ಇದು ಟೀಂ ಇಂಡಿಯಾ ಪಾಲಿಗೆ ಸಾಧಾರಣ ಮೊತ್ತ ಆಗಿತ್ತು. ಇದನ್ನು ಟೀಂ ಇಂಡಿಯಾ ಬೆನ್ನು ಹತ್ತಿತು. ಇಂಡಿಯಾ ಪರ ಅಭಿಷೇಕ್ ಶರ್ಮ 31 ರನ್ (13 ಬಾಲ್), ಸೂರ್ಯಕುಮಾರ್ ಯಾದವ್ 47 (37) ರನ್ ಕಲೆ ಹಾಕಿ ಆಸರೆ ಆದರು. ಅಂತಿಮವಾಗಿ 15.5 ಓವರ್ನಲ್ಲಿ ಇಂಡಿಯಾ ಗೆಲುವಿನ ನಗೆ ಬೀರಿತು.
❌🤝#TeamIndia #SuryakumarYadav #INDvsPAK #India pic.twitter.com/8ngNselQoE
— CRICKETNMORE (@cricketnmore) September 14, 2025
ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದ ಜೊ ಕೈ ಕುಲುಕಿ ಹೋಗೋದು ಸಂಪ್ರದಾಯ. ಆದರೆ, ಆ ಸಂಪ್ರದಯಾಕ್ಕೆ ಸೂರ್ಯಕುಮಾರ್ ಯಾದವ್ ಬ್ರೇಕ್ ಹಾಕಿದರು. ಪಂದ್ಯ ಮುಗಿಯುತ್ತಿದ್ದಂತೆ ನೇರವಾಗಿ ಡ್ರೆಸ್ಸಿಂಗ್ ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟರು. ಈ ಮೂಲಕ ಪಾಕ್ ಜೊತೆ ಹ್ಯಾಂಡ್ ಶೇಕ್ ಬೇಡ ಎಂಬ ಗಟ್ಟಿ ನಿರ್ಧಾರ ಮಾಡಿ ಬಿಟ್ಟರು. ಈ ವಿಡಿಯೋ ವೈರಲ್ ಆಗಿದ್ದು, ‘ಪಾಕಿಸ್ತಾನಕ್ಕೆ ಇದಕ್ಕಿಂತ ದೊಡ್ಡ ಅವಮಾನ ಬೇಕೇ?’ ಎಂದು ಎಲ್ಲರೂ ಕೇಳುತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.