T20 World Cup 2024: ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಶುರು?

| Updated By: ಝಾಹಿರ್ ಯೂಸುಫ್

Updated on: Jan 06, 2024 | 1:08 PM

T20 World Cup 2024: ಎಷ್ಟು ಗಂಟೆಗೆ ಪಂದ್ಯ ಶುರುವಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಏಕೆಂದರೆ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ. ಅತ್ತ ಯುಎಸ್​ಎನಲ್ಲಿ ರಾತ್ರಿಯಾಗಿದ್ದರೆ, ಇತ್ತ ಭಾರತದಲ್ಲಿ ಬೆಳಿಗ್ಗೆಯಾಗಿರುತ್ತದೆ.

T20 World Cup 2024: ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಶುರು?
IND vs PAK
Follow us on

ಟಿ20 ವಿಶ್ವಕಪ್ 2024ರ (T20 World Cup 2024) ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 1 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನದ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಯುಎಸ್​ಎ ಹಾಗೂ ವೆಸ್ಟ್ ಇಂಡೀಸ್​ನಲ್ಲಿ ಜರುಗಲಿರುವ ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದ್ದರೂ ಎಲ್ಲಿಯೂ ಕೂಡ ಪಂದ್ಯಾರಂಭದ ಸಮಯವನ್ನು ಪ್ರಸ್ತಾಪಿಸಲಾಗಿಲ್ಲ.

ಅಂದರೆ ಎಷ್ಟು ಗಂಟೆಗೆ ಪಂದ್ಯ ಶುರುವಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಏಕೆಂದರೆ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ. ಅತ್ತ ಯುಎಸ್​ಎನಲ್ಲಿ ರಾತ್ರಿಯಾಗಿದ್ದರೆ, ಇತ್ತ ಭಾರತದಲ್ಲಿ ಬೆಳಿಗ್ಗೆಯಾಗಿರುತ್ತದೆ. ಹೀಗಾಗಿಯೇ ಭಾರತದ ಪಂದ್ಯಗಳು ಎಷ್ಟು ಗಂಟೆಗೆ ಶುರುವಾಗಲಿದೆ ಎಂಬುದೇ ಈಗ ಕುತೂಹಲ.

ನೇರ ಪ್ರಸಾರ ಎಷ್ಟು ಗಂಟೆಗೆ?

ಪ್ರಸ್ತುತ ಮಾಹಿತಿ ಪ್ರಕಾರ, ಭಾರತದ ಪಂದ್ಯಗಳು ರಾತ್ರಿ 8.30 ಕ್ಕೆ ಆರಂಭವಾಗಲಿದೆ. ಅಂದರೆ ಟೀಮ್ ಇಂಡಿಯಾದ ಪಂದ್ಯಗಳು ಯುಎಸ್​ಎನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಶುರುವಾಗುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ರಾತ್ರಿ 8.30 ಕ್ಕೆ ಭಾರತದಲ್ಲಿ ನೇರ ಪ್ರಸಾರವಾಗಲಿದೆ ತಿಳಿದು ಬಂದಿದೆ.

ಯುಎಸ್​ಎ-ವೆಸ್ಟ್ ಇಂಡೀಸ್ ಹಾಗೂ ಏಷ್ಯಾ ದೇಶಗಳ ನಡುವೆ ಸಮಯದ ಭಾರೀ ವ್ಯತ್ಯಾಸ ಇರುವ ಕಾರಣದಿಂದಲೇ ಐಸಿಸಿ ಇನ್ನೂ ಕೂಡ ಅಧಿಕೃತವಾಗಿ ಪಂದ್ಯದ ಸಮಯಗಳನ್ನು ನಿಗದಿ ಮಾಡಿಲ್ಲ. ಇದೇ ಕಾರಣದಿಂದಾಗಿ ಸಮಯವನ್ನು ಪ್ರಸಾಪಿಸದೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭಾರತದ T20 ವಿಶ್ವಕಪ್ ವೇಳಾಪಟ್ಟಿ:

  • ಭಾರತ vs ಐರ್ಲೆಂಡ್, ಜೂನ್ 5, ನ್ಯೂಯಾರ್ಕ್ (8:30 PM IST)
  • ಭಾರತ vs ಪಾಕಿಸ್ತಾನ್, ಜೂನ್ 9, ನ್ಯೂಯಾರ್ಕ್ (8:30 PM IST)
  • ಭಾರತ vs ಯುಎಸ್​ಎ, ಜೂನ್ 12, ನ್ಯೂಯಾರ್ಕ್ (8:30 PM IST)
  • ಭಾರತ vs ಕೆನಡಾ, ಜೂನ್ 15, ಫ್ಲೋರಿಡಾ (ರಾತ್ರಿ 8:30 IST)

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ 2024 ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಟಿ20 ವಿಶ್ವಕಪ್ ತಂಡಗಳ ಗ್ರೂಪ್:

ಗ್ರೂಪ್-A

  • ಭಾರತ
  • ಪಾಕಿಸ್ತಾನ್
  • ಐರ್ಲೆಂಡ್
  • ಕೆನಡಾ
  • ಯುಎಸ್​ಎ

ಗ್ರೂಪ್-B

  • ಇಂಗ್ಲೆಂಡ್
  • ಆಸ್ಟ್ರೇಲಿಯಾ
  • ನಮೀಬಿಯಾ
  • ಸ್ಕಾಟ್ಲೆಂಡ್
  • ಒಮಾನ್

ಗ್ರೂಪ್-C

  • ನ್ಯೂಝಿಲೆಂಡ್
  • ಅಫ್ಘಾನಿಸ್ತಾನ್
  • ವೆಸ್ಟ್ ಇಂಡೀಸ್
  • ಉಗಾಂಡ
  • ಪಪುವಾ ನ್ಯೂಗಿನಿಯಾ

ಗ್ರೂಪ್-D

  • ಸೌತ್ ಆಫ್ರಿಕಾ
  • ಬಾಂಗ್ಲಾದೇಶ್
  • ನೆದರ್​ಲೆಂಡ್ಸ್​
  • ಶ್ರೀಲಂಕಾ
  • ನೇಪಾಳ