ಚೆನ್ನೈನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ತಂಡದ ಇಬ್ಬರು ಸ್ಟಾರ್ ಓಪನರ್ಗಳಾದ ಸ್ಮೃತಿ ಮಂಧಾನ ಅವರ ಶತಕ ಹಾಗೂ ಶಫಾಲಿ ವರ್ಮಾ ಅವರ ದ್ವಿಶತಕದ ಆಧಾರದ ಮೇಲೆ ಟೀಂ ಇಂಡಿಯಾ 400 ರನ್‌ಗಳ ಗಡಿ ದಾಟಿದೆ. ಈ ವೇಳೆ ಸ್ಮೃತಿ ಜೊತೆಗೆ ಮೊದಲ ವಿಕೆಟ್‌ಗೆ ದಾಖಲೆಯ ದ್ವಿಶತಕದ ಜೊತೆಯಾಟವನ್ನಾಡಿದ್ದ ಶಫಾಲಿ ವರ್ಮಾ ಇದೀಗ ಸ್ಫೋಟಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 196 ಎಸೆತಗಳಲ್ಲಿ ದ್ವಿಶತಕ ಸಿಡಿಸಿರುವ ಶಫಾಲಿ, ಮಹಿಳಾ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಹೆಸರಿನಲ್ಲಿತ್ತು. 2024 ರಲ್ಲಿ, ಅವರು ದಕ್ಷಿಣ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು. ಅದಕ್ಕೂ ಮುನ್ನ 2001ರಲ್ಲಿ ಇಂಗ್ಲೆಂಡ್ ವಿರುದ್ಧ 306 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಕರೆನ್ ರೋಲ್ಟನ್ ಹೆಸರಿನಲ್ಲಿ ಈ ದಾಖಲೆ ಇತ್ತು.
ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಕೇವಲ 113 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು. ಇತ್ತ ಮತ್ತೋಬ್ಬ ಓಪನರ್ ಸ್ಮೃತಿ ಮಂಧಾನ ಕೂಡ ಶತಕ ಸಿಡಿಸಿ ಮಿಂಚಿದರು. ಆ ಬಳಿಕ ವೈಯಕ್ತಿಕ 149 ರನ್ ಕಲೆಹಾಕಿ ಸ್ಮೃತಿ ತಮ್ಮ ಇನ್ನಿಂಗ್ಸ್ ಅಂತ್ಯ ಹಾಡಿದರು. ನಂತರ ಬಂದ ಸತೀಶ್ ಶುಭಾ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅದಾಗ್ಯೂ ತನ್ನ ಆಟ ಮುಂದುವರೆಸಿದ ಶಫಾಲಿ, ಕೇವಲ 196 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು. ಇದರೊಂದಿಗೆ ಅವರು ಈ ಸಾಧನೆ ಮಾಡಿದ ವಿಶ್ವದ 10 ನೇ ಮಹಿಳಾ ಕ್ರಿಕೆಟಿಗರು ಮತ್ತು ಭಾರತದ ಎರಡನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು. ಅಂತಿಮವಾಗಿ ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳ ಸಹಿತ 205 ರನ್ ಕಲೆಹಾಕಿ ರನೌಟ್ಗೆ ಬಲಿಯಾದರು.
💯💯
Describe that double ton with an emoji 🔽
Follow the match ▶️ https://t.co/4EU1Kp6YTG#TeamIndia | #INDvSA | @IDFCFIRSTBank pic.twitter.com/WJuiEJRqr8
— BCCI Women (@BCCIWomen) June 28, 2024
ಇದಕ್ಕೂ ಮುನ್ನ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ ಜೊತೆಗೂಡಿ 292 ರನ್‌ಗಳ ದಾಖಲೆಯ ಆರಂಭಿಕ ಜೊತೆಯಾಟ ಮಾಡಿದ್ದರು. ಇದರೊಂದಿಗೆ ಇಬ್ಬರೂ ಪಾಕಿಸ್ತಾನದ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಸಾಜಿದಾ ಶಾ ಮತ್ತು ಕಿರಣ್ ಬಲೂಚ್ ಹೆಸರಿನಲ್ಲಿತ್ತು. 2004ರಲ್ಲಿ ಈ ಇಬ್ಬರೂ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ವಿಕೆಟ್‌ಗೆ 241 ರನ್‌ಗಳ ಜೊತೆಯಾಟ ಆಡಿದ್ದರು. ಅಷ್ಟೇ ಅಲ್ಲ, ಶೆಫಾಲಿ ಮತ್ತು ಮಂಧಾನ ಯಾವುದೇ ವಿಕೆಟ್‌ಗೆ ಅತ್ಯಧಿಕ ರನ್‌ಗಳ ಜೊತೆಯಾಟ ನೀಡಿದ ವಿಶ್ವದ ಎರಡನೇ ಜೋಡಿ ಎನಿಸಿಕೊಂಡಿದ್ದಾರೆ.
🚨 Milestone Alert 🚨
2⃣9⃣2⃣
This is now the highest opening partnership ever in women’s Tests 🙌
Smriti Mandhana & Shafali Verma 🫡🫡
Follow the match ▶️ https://t.co/4EU1Kp7wJe#TeamIndia | #INDvSA | @IDFCFIRSTBank | @mandhana_smriti | @TheShafaliVerma pic.twitter.com/XmXbU9V3M6
— BCCI Women (@BCCIWomen) June 28, 2024
ಈ ಸುದ್ದಿ ಬರೆಯುವ ಹೊತ್ತಿಗೆ ಭಾರತ ವನಿತಾ ಪಡೆ ಮೊದಲ ದಿನದಾಟದ ಮೂರನೇ ಸೆಷನ್ನಲ್ಲಿ 3 ವಿಕೆಟ್ ಕಳೆದುಕೊಂಡು 444 ರನ್ ಗಳಿಸಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ ಜೊತೆಗೆ ಅರ್ಧಶತಕ ಬಾರಿಸಿರುವ ಜೆಮಿಮಾ ರೋಡ್ರಿಗಸ್ ಕ್ರೀಸ್‌ನಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Fri, 28 June 24