CSK vs KKR, IPL 2021 Final: ಫೈನಲ್ ಕದನಕ್ಕೂ ಮುನ್ನ ಧೋನಿಗೆ ಶುರುವಾಗಿದೆ ತಲೆನೋವು: ಯಾವ ಕಾರಣಕ್ಕಾಗಿ?

| Updated By: Vinay Bhat

Updated on: Oct 15, 2021 | 8:19 AM

IPL 2021 Final: ಧೋನಿ vs ಮಾರ್ಗನ್ ಕಾದಾಟ ಈ ಪಂದ್ಯದ ಮತ್ತೊಂದು ಹೈಲೇಟ್ಸ್. ಇಬ್ಬರೂ ವಿಶ್ವಕಪ್ ವಿಜೇತ ತಂಡದ ನಾಯಕರು. ಗೇಮ್ ಪ್ಲಾನ್ ಬಗ್ಗೆ ಇಬ್ಬರಿಗೂ ಚೆನ್ನಾಗಿ ಅರಿವಿದೆ.

CSK vs KKR, IPL 2021 Final: ಫೈನಲ್ ಕದನಕ್ಕೂ ಮುನ್ನ ಧೋನಿಗೆ ಶುರುವಾಗಿದೆ ತಲೆನೋವು: ಯಾವ ಕಾರಣಕ್ಕಾಗಿ?
IPL 2021 Final CSK vs KKR
Follow us on

ಐಪಿಎಲ್ 14ನೇ ಆವೃತ್ತಿಯ ಫೈನಲ್ (IPL 2021 Final) ಪಂದ್ಯ ಇಂದು ನಡೆಯಲಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (CSK vs KKR) ಈ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣೆಸಾಟವನ್ನು ನಡೆಸಲಿದೆ. ಎಂಎಸ್ ಧೋನಿ (MS Dhoni) ನೇತೃತ್ವದ ಸಿಎಸ್‌ಕೆ ತಂಡ ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳಲು ಸಜ್ಜಾಗಿದ್ದರೆ ಮತ್ತೊಂದೆಡೆ ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೆಕೆಆರ್ ಮೂರನೇ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. ಇದಲ್ಲದೆ ವಿಶ್ವಕಪ್ ವಿಜೇತ ನಾಯಕರ ಕಾದಾಟಕ್ಕೆ ಕ್ರಿಕೆಟ್ ಪ್ರಿಯರು ಕಾದುಕುಳಿತಿದ್ದಾರೆ. ಆದರೆ, ಸಿಎಸ್​ಕೆ ನಾಯಕ ಎಂ ಎಸ್ ಧೋನಿಗೆ ಈ ಪಂದ್ಯ ಗೆಲ್ಲುವುದು ಅಷ್ಟೊಂದು ಸುಲಭವಾಗಿಲ್ಲ. ಮಾರ್ಗನ್ ಮತ್ತು ಕೆಕೆಆರ್ ತಂಡದ ಕೆಲವು ಕಾರಣಗಳು ಧೋನಿಗೆ ತಲೆನೋವಾಗಿಸಿದೆ.

ಹೌದು, ಕೋಲ್ಕತ್ತಾ ಚೊಚ್ಚಲ ಪ್ರಶಸ್ತಿ ಗೆದ್ದಿದ್ದೇ ಚೆನ್ನೈ ಮೇಲೆ. 2014ರ ಐಪಿಎಲ್ ಫೈನಲ್​ನಲ್ಲಿ ಸಿಎಸ್​ಕೆ ಮತ್ತು ಕೆಕೆಆರ್ ಮುಖಾಮುಖಿ ಆಗಿತ್ತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್​ಗಳಲ್ಲಿ 190 ರನ್​ಗಳ ಕಠಿಣ ಟಾರ್ಗೆಟ್ ನೀಡಿತ್ತು. ಆದರೆ, ಕೆಕೆಆರ್ ಈ ಮೊತ್ತವನ್ನು ಚೇಸ್ ಮಾಡಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು.

ಚೆನ್ನೈ ತಂಡದಲ್ಲಿ ಅಂದಿದ್ದ ಆಟಗಾರರೇ ಈಗಲೂ ಇದ್ದಾರೆ. ಧೋನಿ, ಸುರೇಶ್ ರೈನಾ, ಡ್ವೇನ್ ಬ್ರಾವೋ, ಜಡೇಜಾ ಕೆಕೆಆರ್ ವಿರುದ್ಧದ ಫೈನಲ್​ನಲ್ಲೂ ಆಡಿದ್ದರು. ಇತ್ತ ಕೆಕೆಆರ್ ಪರ ಸುನಿಲ್ ನರೈನ್, ಶಕಿಬ್ ಅಲ್ ಹಸನ್ ಇದ್ದಾರೆ. ಇದರ ಜೊತೆಗೆ ಸದ್ಯ ವೆಂಕಟೇಶ್ ಅಯ್ಯರ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ ಸೇರಿ ಕೋಲ್ಕತ್ತಾ ಬಲಿಷ್ಠವಾದಂತೆ ಗೋಚರಿಸುತ್ತದೆ.

ಈ ಪಂದ್ಯದ ಪ್ರಮುಖ ಕೀ ಪ್ಲೇಯರ್​ಗಳೆಂದರೆ ಚೆನ್ನೈ ಪರ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್​ನಲ್ಲಾದರೆ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್​ನಲ್ಲಿ ಮಾರಕವಾಗಿದ್ದಾರೆ. ಇತ್ತ ಕೋಲ್ಕತ್ತಾ ಪರ ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಬ್ಯಾಟಿಂಗ್​ನಲ್ಲಾದರೆ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಬೌಲಿಂಗ್​ನಲ್ಲಾಗಿದ್ದಾರೆ.

ಧೋನಿ vs ಮಾರ್ಗನ್ ಕಾದಾಟ ಈ ಪಂದ್ಯದ ಮತ್ತೊಂದು ಹೈಲೇಟ್ಸ್. ಇಬ್ಬರೂ ವಿಶ್ವಕಪ್ ವಿಜೇತ ತಂಡದ ನಾಯಕರು. ಗೇಮ್ ಪ್ಲಾನ್ ಬಗ್ಗೆ ಇಬ್ಬರಿಗೂ ಚೆನ್ನಾಗಿ ಅರಿವಿದೆ. ಮಾರ್ಗನ್ ಮತ್ತು ಧೋನಿ ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟಿಂಗ್​ನಿಂದ ತಂಡಕ್ಕೆ ಅಷ್ಟೊಂದು ನೆರವಾಗಲಿಲ್ಲ. ಆದರೆ, ಕ್ಯಾಪ್ಟನ್ಸಿಯಲ್ಲಿ ಇವರಿಬ್ಬರನ್ನು ಯಾರಿಂದಲೂ ಮೀರಿಸಲು ಸಾಧ್ಯವಿಲ್ಲ.

ಒಟ್ಟಾರೆ ಫೈನಲ್ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದ್ದು 9ನೇ ಬಾರಿ ಫೈನಲ್‌ಗೇರಿರುವ ಸಿಎಸ್‌ಕೆ 4ನೇ ಹಾಗೂ 2018ರ ಬಳಿಕ ಮೊದಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕೆಕೆಆರ್ ತಂಡ 3ನೇ ಹಾಗೂ 2014ರ ಬಳಿಕ ಮೊದಲ ಟ್ರೋಫಿ ಜಯಿಸುವ ಹಂಬಲದಲ್ಲಿದೆ.

IPL 2021 Final: CSK vs KKR: ಐಪಿಎಲ್​ನಲ್ಲಿಂದು ಫೈನಲ್ ಫೈಟ್: ಪ್ರಶಸ್ತಿಗಾಗಿ ಚೆನ್ನೈ-ಕೋಲ್ಕತ್ತಾ ನಡುವೆ ಹೈವೋಲ್ಟೇಜ್ ಪಂದ್ಯ

IPL 2022: ಐಪಿಎಲ್​ 2022ರ ಬಿಗ್ ಅಪ್ಡೇಡ್​: ಹೊಸ ತಂಡಗಳಿಗೆ ವಿಶೇಷ ಆಯ್ಕೆ

(IPL 2021 final between Chennai Super Kings and Kolkata Knight Riders Here is the some interesting fact)