IPL 2021 Final: CSK vs KKR: ಐಪಿಎಲ್​ನಲ್ಲಿಂದು ಫೈನಲ್ ಫೈಟ್: ಪ್ರಶಸ್ತಿಗಾಗಿ ಚೆನ್ನೈ-ಕೋಲ್ಕತ್ತಾ ನಡುವೆ ಹೈವೋಲ್ಟೇಜ್ ಪಂದ್ಯ

Chennai vs Kolkata Final: ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 17 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021 Final: CSK vs KKR: ಐಪಿಎಲ್​ನಲ್ಲಿಂದು ಫೈನಲ್ ಫೈಟ್: ಪ್ರಶಸ್ತಿಗಾಗಿ ಚೆನ್ನೈ-ಕೋಲ್ಕತ್ತಾ ನಡುವೆ ಹೈವೋಲ್ಟೇಜ್ ಪಂದ್ಯ
IPL 2021 Final CSK vs KKR
Follow us
TV9 Web
| Updated By: Vinay Bhat

Updated on: Oct 15, 2021 | 7:18 AM

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2021) ಅಂತಿಮ ಹಂತಕ್ಕೆ ಬಂದುನಿಂತಿದೆ. ಇಂದು ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR, IPL 2021 Final) ತಂಡ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಲೀಗ್​ನಿಂದ ಹೊರಬಿದ್ದ ಧೋನಿ (MS Dhoni) ಪಡೆ ಈ ಬಾರಿ ಮೊದಲ ತಂಡವಾಗಿ ಫೈನಲ್​ಗೆ ತಲುಪಿ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದೆ. ಇತ್ತ ಕೆಕೆಆರ್ ಯುಎಇ ಲೀಗ್​ನಲ್ಲಿ ಅಚ್ಚರಿ ಎಂಬಂತೆ ಜಯ ಸಾಧಿಸಿ ಇಂದು ಫೈನಲ್​ಗೆ ಬಂದುನಿಂತಿದೆ. ಒಪನರ್​ಗಳ ಬಲ ಮತ್ತು ಸ್ಪಿನ್ನರ್​ಗಳ ಕೈಚಳಕವೇ ಕೋಲ್ಕತ್ತಾ (KKR) ತಂಡದ ಆಸ್ತಿ. ಇತ್ತ ಚೆನ್ನೈ ಕೂಡ ಆರಂಭಿಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.

ಒಂಬತ್ತನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸುತ್ತಾ ಎಂಬುದೇ ಕುತೂಹಲ. ಇತ್ತ ಮೂರನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್ ತಲುಪಿರುವ ಕೆಕೆಆರ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಈಗಾಗಲೇ ಹೇಳಿರುವಂತೆ ಸಿಎಸ್​ಕೆ ತಂಡದ ಪ್ರಮುಖ ಆಸ್ತಿ ಓಪನರ್​ಗಳು ಮತ್ತು ಆಲ್ರೌಂಡರ್. ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡುಪ್ಲೆಸಿಸ್ ಹೇಗೆ ಇನ್ನಿಂಗ್ಸ್ ಶುರು ಮಾಡುತ್ತಾರೆ ಎಂಬುದರ ಮೇಲೆ ಬಹುತೇಕ ಚೆನ್ನೈ ಭವಿಷ್ಯ ನಿಂತಿದೆ. ರಾಬಿನ್ ಉತ್ತಪ್ಪ ಕಳೆದ ಪಂದ್ಯದಲ್ಲಿ ಉತ್ತಮ ಆಟವಾಡಿದ್ದರು. ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲ. ಅಂಬಟಿ ರಾಯುಡು ತಂಡಕ್ಕೆ ನೆರವಾಗುತ್ತಿದ್ದಾರೆ.

ನಾಯಕ ಎಂ ಎಸ್ ಧೋನಿ ಲಯಕಂಡುಕೊಂಡಿದ್ದು ತಂಡದ ಪ್ಲಸ್ ಪಾಯಿಂಟ್. ಇನ್ನು ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಬ್ಯಾಟಿಂಗ್-ಬೌಲಿಂಗ್​ನಲ್ಲಿ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಜೋಶ್ ಹ್ಯಾಜ್ಲೆವುಡ್​ಗೆ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಸಾತ್ ನೀಡಬೇಕಿದೆ.

ಇತ್ತ ಕೆಕೆಆರ್ ಕೂಡ ಓಪನರ್​ಗಳನ್ನು ಮತ್ತು ಸ್ಪಿನ್ನರ್​ಗಳನ್ನು ಹೆಚ್ಚು ನೆಚ್ಚಿಕೊಂಡಿದೆ. ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಆರಂಭಿಕರಿಬ್ಬರು ನಿರ್ಗಮಿಸಿದ ನಂತರ ಕೆಕೆಆರ್ ಯಾವರೀತಿ ಕುಸಿತ ಕಂಡಿತು ಎಂಬುದನ್ನು ಕಳೆದ ಡೆಲ್ಲಿ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಕಂಡಿದ್ದೇವೆ. ಬ್ಯಾಟಿಂಗ್​ನಲ್ಲಿ ಕೆಕೆಆರ್​ಗೆ ನಾಯಕ ಇಯಾನ್ ಮಾರ್ಗನ್ ಮತ್ತು ದಿನೇಶ್ ಕಾರ್ತಿಕ್ ಕೊಡುಗೆ ತೀರಾ ಕಡಿಮೆ ಇದೆ.

ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಸ್ಪಿನ್ ಜಾದು ಮಾತ್ರ ಚೆನ್ನಾಗಿ ವರ್ಕೌಟ್ ಆಗುತ್ತಿದೆ. ಶಕಿಬ್ ಅಲ್ ಹಸನ್ ಜಾಗದಲ್ಲಿ ಫೈನಲ್ ಕಾದಾಟಕ್ಕೆ ಆಂಡ್ರೆ ರಸೆಲ್ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ಲೂಕಿ ಫರ್ಗುಸನ್ ಮತ್ತು ಶಿವಂ ಮಾವಿ ಪ್ರಮುಖ ಪಂದ್ಯವಾದ್ದರಿಂದ ಇನ್ನಷದಟು ಪ್ರಯತ್ನ ಹಾಕಬೇಕಿದೆ.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 17 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಯುಎಇ ಪಿಚ್​ನಲ್ಲಿ ಇವರು ಮೂರು ಪಂದ್ಯಗಳಲ್ಲಿ ಎದುರಾಗಿದ್ದಾರೆ. ಇದರಲ್ಲಿ ಸಿಎಸ್​ಕೆ 2 ಮತ್ತು ಕೆಕೆಆರ್ ಒಂದರಲ್ಲಿ ಜಯ ಸಾಧಿಸಿದೆ.

IPL 2022: ಐಪಿಎಲ್​ 2022ರ ಬಿಗ್ ಅಪ್ಡೇಡ್​: ಹೊಸ ತಂಡಗಳಿಗೆ ವಿಶೇಷ ಆಯ್ಕೆ

1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

(The stage is set for the FINAL battle of IPL 2021 on Chennai Super Kings vs Kolkata Knight Riders)

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?