Ruturaj Gaikwad: ರುತುರಾಜ್ ಗಾಯಕ್ವಾಡ್ಗೆ ಇಂದು ಬಿಗ್ ಡೇ: ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡಿರದ ದಾಖಲೆಗೆ ಸಜ್ಜು
IPL 2021 Final, CSK vs KKR: ಗಾಯಕ್ವಾಡ್ ಸದ್ಯ ಐಪಿಎಲ್ 2021 ರಲ್ಲಿ 15 ಪಂದ್ಯಗಳನ್ನು ಆಡಿದ್ದು 1 ಶತಕ, 4 ಅರ್ಧಶತಕ, 61 ಬೌಂಡರಿ, 22 ಸಿಕ್ಸರ್ನೊಂದಿಗೆ ಒಟ್ಟು ಬರೋಬ್ಬರಿ 603 ರನ್ ಕಲೆಹಾಕಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ತೊಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ರುತುರಾಜ್ ಗಾಯಕ್ವಾಡ್ (Ruturaj Gaikwad) ಈ ಬಾರಿಯ ಐಪಿಎಲ್ 2021 ರಲ್ಲಿ (IPL 2021) ನೀಡಿದ ಪ್ರದರ್ಶನ ಕ್ರಿಕೆಟ್ ಪಂಡಿತರನ್ನೇ ಬೆರಗಾಗಿಸಿದೆ. ಒಂದು ಶತಕ ನಾಲ್ಕು ಅರ್ಧಶತಕ ಸಿಡಿಸಿರುವ ಇವರು ಭರ್ಜರಿ ಫಾರ್ಮ್ನಲ್ಲಿದ್ದು, ಟೂರ್ನಿಯುದ್ದಕ್ಕೂ ಅಮೋಘ ಆಟವಾಡುತ್ತಾ ಬಂದಿದ್ದಾರೆ. ಸಿಎಸ್ಕೆ (CSK) ಗೆಲುವಿನಲ್ಲಿ ಅರ್ಧಪಾಲು ಹೊಂದಿರುವ ಇವರು ಇಂದು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR Final) ವಿರುದ್ಧದ ಫೈನಲ್ ಪಂದ್ಯದಲ್ಲಿ ಹೊಸ ದಾಖಲೆ (IPL Record) ಬರೆಯಲು ಹೊರಟಿದ್ದಾರೆ. ಅದು ಐಪಿಎಲ್ ಇತಿಹಾಸದಲ್ಲೇ (IPL History) ಯಾರೂ ಮಾಡಿರದ ವಿಶೇಷ ದಾಖಲೆ.
ಹೌದು, ಗಾಯಕ್ವಾಡ್ ಸದ್ಯ ಐಪಿಎಲ್ 2021 ರಲ್ಲಿ 15 ಪಂದ್ಯಗಳನ್ನು ಆಡಿದ್ದು 1 ಶತಕ, 4 ಅರ್ಧಶತಕ, 61 ಬೌಂಡರಿ, 22 ಸಿಕ್ಸರ್ನೊಂದಿಗೆ ಒಟ್ಟು ಬರೋಬ್ಬರಿ 603 ರನ್ ಕಲೆಹಾಕಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ತೊಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಐಪಿಎಲ್ 2021ರ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯ ಮೊದಲ ಸ್ಥಾನದಲ್ಲಿ ಕೆ. ಎಲ್ ರಾಹುಲ್ ಇದ್ದು, ಇವರು 13 ಪಂದ್ಯಗಳಿಂದ 626 ರನ್ ಬಾರಿಸಿದ್ದಾರೆ. ಈ ಮೂಲಕ ರಾಹುಲ್ರನ್ನು ಹಿಂದಿಕ್ಕಲು ಗಾಯಕ್ವಾಡ್ಗೆ ಕೇವಲ 23 ರನ್ಗಳ ಅವಶ್ಯಕತೆಯಿದೆ.
ಈ ಬಾರಿಯ ಐಪಿಎಲ್ನಲ್ಲಿ 137.35 ಸ್ಟ್ರೈಕ್ರೇಟ್, 46.38 ಸರಾಸರಿ ಹೊಂದಿರುವ ಗಾಯಕ್ವಾಡ್ 23 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿದರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಆರೆಂಜ್ ಕ್ಯಾಪ್ ತೊಟ್ಟ ಯಂಗೆಸ್ಟ್ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಆಸ್ಟ್ರೇಲಿಯಾದ ಶಾನ್ ಮಾರ್ಶ್ ಹೆಸರಲ್ಲಿದೆ. ಇವರು 2008ರ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 25 ವರ್ಷವಿರುವಾಗ 616 ರನ್ ಗಳಿಸಿದ್ದರು. 23 ವರ್ಷ ರುತುರಾಜ್ ಈ ದಾಖಲೆ ಬ್ರೇಕ್ ಮಾಡುತ್ತಾರ ಎಂಬುದು ಕಾದುನೋಡಬೇಕಿದೆ.
ಇನ್ನು ಪರ್ಪಲ್ ಕ್ಯಾಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ಗೆ ಖಚಿತವಾಗಿದೆ. ಇವರು 15 ಪಂದ್ಯಗಳಿಂದ ಬರೋಬ್ಬರಿ 32 ವಿಕೆಟ್ ಕಿತ್ತು ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆವೇಶ್ ಖಾನ್ ಇದ್ದು ಇವರು 16 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಕೀರ್ತಿ ಕೆ. ಎಲ್ ರಾಹುಲ್ಗೆ ಇದೆ. ಇವರು 30 ಸಿಕ್ಸರ್ ಸಿಡಿಸಿದ್ದಾರೆ. 6 ಹಾಫ್ ಸೆಂಚುರಿಯೊಂದಿಗೆ ಅತಿ ಹೆಚ್ಚು ಅರ್ಧಶತಕದ ಸಾಧನೆ ಕೂಡ ಇವರ ಹೆಸರಲ್ಲಿದೆ. ಅತಿ ಹೆಚ್ಚು ಬೌಂಡರಿ ಬಾರಿಸಿ ಶಿಖರ್ ಧವನ್ (63 ಬೌಂಡರಿ) ಮೊದಲ ಸ್ಥಾನದಲ್ಲಿದ್ದಾರೆ.
CSK vs KKR, IPL 2021 Final: ಫೈನಲ್ ಕದನಕ್ಕೂ ಮುನ್ನ ಧೋನಿಗೆ ಶುರುವಾಗಿದೆ ತಲೆನೋವು: ಯಾವ ಕಾರಣಕ್ಕಾಗಿ?
(Ruturaj Gaikwad is on a cusp of a very special record on Today IPL 2021 Final CSK vs KKR Match)