IPL 2022: ಸೋಲಿನ ಬೆನ್ನಲ್ಲೇ CSK ಗೆ ಡಬಲ್ ಶಾಕ್..!

| Updated By: ಝಾಹಿರ್ ಯೂಸುಫ್

Updated on: Apr 18, 2022 | 5:00 PM

IPL 2022: ಚೆನ್ನೈ ಸೂಪರ್ ಕಿಂಗ್ಸ್ (CSK): ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

IPL 2022: ಸೋಲಿನ ಬೆನ್ನಲ್ಲೇ CSK ಗೆ ಡಬಲ್ ಶಾಕ್..!
CSK
Follow us on

IPL 2022: ಸೋಲು, ಸೋಲು, ಸೋಲು, ಸೋಲು, ಸೋಲು, ಗೆಲುವು, ಸೋಲು…ಇದು ಈ ಬಾರಿ ಸಿಎಸ್​ಕೆ (CSK) ತಂಡದ ಪ್ರದರ್ಶನ. ಆಡಿರುವ 6 ಪಂದ್ಯಗಳಲ್ಲಿ 5 ಮ್ಯಾಚ್​ನಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಇದೀಗ ಆಘಾತ ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸಿಎಸ್​ಕೆ ತಂಡದ ಪ್ರಮುಖ ವೇಗಿ ದೀಪಕ್ ಚಹರ್ ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಗಾಯದ ಕಾರಣ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ದೀಪಕ್ ಚಹರ್ ಆ ಬಳಿಕ ಬೆನ್ನು ನೋವಿನ ಕಾರಣ ಇಡೀ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ ಸಿಎಸ್​ಕೆ ತಂಡದ ಮತ್ತೋರ್ವ ವೇಗದ ಬೌಲರ್ ಕೂಡ ಐಪಿಎಲ್​ನಿಂದ ಹಿಂದೆ ಸರಿಯುವುದು ಬಹುತೇಕ ಖಚಿತವಾಗಿದೆ.

ಹೌದು, ಸಿಎಸ್​ಕೆ ತಂಡದ ಪ್ರಮುಖ ಬೌಲರ್ ಆ್ಯಡಂ ಮಿಲ್ನ್ ಕೂಡ ಐಪಿಎಲ್​ನಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಕೆಕೆಆರ್​ ವಿರುದ್ದದ ಪಂದ್ಯದ ವೇಳೆ ಗಾಯಗೊಂಡಿದ್ದ ಮಿಲ್ನ್ ಆ ಬಳಿಕ ಯಾವುದೇ ಪಂದ್ಯ ಆಡಿರಲಿಲ್ಲ. ಇದೀಗ ಸಿಎಸ್​ಕೆ ತಂಡದಲ್ಲಿದ್ದರೂ ನ್ಯೂಜಿಲೆಂಡ್ ವೇಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ಸಿಎಸ್​ಕೆ ತಂಡಕ್ಕೆ ಉಳಿದಿರುವುದು ಕೇವಲ 8 ಪಂದ್ಯಗಳು ಮಾತ್ರ.

ಒಂದು ವೇಳೆ ಆ್ಯಡಂ ಮಿಲ್ನ್ ಗಾಯದಿಂದ ಚೇತರಿಸಿಕೊಂಡರೂ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ ಎಂಬುದು ಖಚಿತವಾಗಿಲ್ಲ. ಇದಕ್ಕೆ ಒಂದೆರೆಡು ವಾರಗಳನ್ನು ತೆಗೆದುಕೊಳ್ಳಬಹುದು. ಅಷ್ಟರಲ್ಲಾಗಲೇ ಸಿಎಸ್​ಕೆ ತಂಡವು ತನ್ನ ಬಹುತೇಕ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಆ್ಯಡಂ ಮಿಲ್ನ್ ಕೂಡ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಸಿಎಸ್​ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ಪ್ರಮುಖ ಬೌಲರ್​ಗಳ ಕೊರತೆಯಿಂದಾಗಿ ಸಿಎಸ್​ಕೆ ತಂಡದ ಬೌಲಿಂಗ್ ಲೈನಪ್ ಹಳಿ ತಪ್ಪಿದೆ. ಅದರಲ್ಲೂ ವಿದೇಶಿ ವೇಗಿಯಾಗಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಕ್ರಿಸ್ ಜೋರ್ಡನ್ 3.5 ಓವರ್​ಗಳಲ್ಲಿ ನೀಡಿದ್ದು ಬರೋಬ್ಬರಿ 58 ರನ್​ಗಳು. ಒಂದಾರ್ಥದಲ್ಲಿ ಜೋರ್ಡನ್ ಅವರ ಕಳಪೆ ಬೌಲಿಂಗ್​ನಿಂದಾಗಿ ಗುಜರಾತ್ ಟೈಟನ್ಸ್ ವಿರುದ್ದ ಸಿಎಸ್​ಕೆ ಸೋಲುವಂತಾಯಿತು ಎಂದರೂ ತಪ್ಪಾಗಲಾರದು.

ಹಾಗೆಯೇ ಸಿಎಸ್​ಕೆ ತಂಡದಲ್ಲಿರುವ ಮತ್ತೋರ್ವ ವೇಗಿ ಸೌತ್ ಆಫ್ರಿಕಾದ ಡ್ವೈನ್ ಪ್ರಿಟೋರಿಯಸ್ 2 ಪಂದ್ಯಗಳಲ್ಲಿ 61 ರನ್ ನೀಡಿದ್ದರು. ಹೀಗಾಗಿ ಕ್ರಿಸ್ ಜೋರ್ಡನ್​ಗೆ ಅವಕಾಶ ನೀಡಲಾಗಿತ್ತು. ಇದೀಗ ಜೋರ್ಡನ್ ಕೂಡ ದುಬಾರಿಯಾಗಿದ್ದಾರೆ. ಮತ್ತೊಂದೆಡೆ ಉತ್ತಮ ಫಾರ್ಮ್​ನಲ್ಲಿದ್ದ ಆ್ಯಡಂ ಮಿಲ್ನ್ ಗಾಯಗೊಂಡು ಆಡುವ ಪರಿಸ್ಥಿತಿಯಲ್ಲಿಲ್ಲ. ಒಟ್ಟಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್​ಕೆಗೆ ಇದೀಗ ಆಟಗಾರರ ಗಾಯದ ಸಮಸ್ಯೆಯೇ ದೊಡ್ಡ ಚಿಂತೆಯನ್ನುಂಟು ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK):
ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನ್, ಮಿಚೆಲ್ ಸ್ಯಾಂಟ್ನರ್.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ