IPL ನಲ್ಲಿ ಸಹೋದರರು ಆಡುತ್ತಿರುವುದು ನೀವು ನೋಡಿರುತ್ತೀರಿ. ಈ ಹಿಂದೆ ಪಠಾಣ್ ಬ್ರದರ್ಸ್, ಮಾರ್ಷ್ ಬ್ರದರ್ಸ್, ಈಗ ಪಾಂಡ್ಯ ಬ್ರದರ್ಸ್..ಹೀಗೆ ಐಪಿಎಲ್ನಲ್ಲಿ ಸಹೋದರರ ಸವಾಲ್ ಮುಂದುವರೆಯುತ್ತಿದೆ. ಆದರೆ ಅಪ್ಪ-ಮಗ ಇದುವರೆಗೆ ಕಾಣಿಸಿಕೊಂಡಿಲ್ಲ. ಒಂದಾರ್ಥದಲ್ಲಿ ಅಪ್ಪ-ಮಗ ಒಂದೇ ಸಮಯದಲ್ಲಿ ಆಡುವುದು ಕೂಡ ಕಷ್ಟ ಎಂದೇ ಹೇಳಬಹುದು. ಇದಾಗ್ಯೂ ಅಭ್ಯಾಸದ ವೇಳೆ ಅಪ್ಪ-ಮಗ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ತಂದೆಯ ಕೈಯಲ್ಲಿ ಚೆಂಡು ಇತ್ತು ಮತ್ತು ಮಗನ ಬಳಿ ಬ್ಯಾಟ್ ಇತ್ತು. ಮಗ ತನ್ನ ತಂದೆಯ ಪ್ರತಿಯೊಂದು ಚೆಂಡನ್ನು ಬಾರಿಸುವ ಮೂಲಕ ಗಮನ ಸೆಳೆದನು. ತಂದೆಯೂ ಮಗನ ಬ್ಯಾಟಿಂಗ್ನಿಂದ ತುಂಬಾ ಸಂತೋಷಪಟ್ಟರು. ಅಪ್ಪ-ಮಗನ ಈ ಕ್ರಿಕೆಟ್ ಪಂದ್ಯ ಮುಗಿದಾಗ ಇಬ್ಬರೂ ಒಬ್ಬರಿಗೊಬ್ಬರು ಹೈ-ಫೈ ಕೂಡ ಕೊಟ್ಟರು. ಇಂತಹ ಕಾಂಬೊ ಕಂಡು ಬಂದಿದ್ದು ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ನಲ್ಲಿ. ಅದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಹಾಗೂ ಮಗ ಫ್ಲೆಚರ್.
ಡೆಲ್ಲಿ ಕ್ಯಾಪಿಟಲ್ಸ್ನ ಅಭ್ಯಾಸದ ವೇಳೆ ಪಾಂಟಿಂಗ್ ಮತ್ತು ಫ್ಲೆಚರ್ ಕೂಡ ಕ್ರಿಕೆಟ್ ಆಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗಿನ ಪಂದ್ಯದ ಮೊದಲು ಅಭ್ಯಾಸ ನಡೆಸುತ್ತಿದ್ದಾಗ ಪಾಂಟಿಂಗ್ ಮತ್ತು ಪುಟ್ಟ ಫ್ಲೆಚರ್ ಕೂಡ ಮುಖಾಮುಖಿಯಾದರು. ತಂದೆ ಪುಟ್ಟ ಮಗನಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟರು. ಈ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಫ್ಲೆಚರ್ ತನ್ನ ತಂದೆಯ ಚೆಂಡುಗಳನ್ನು ಮ್ಯಾಶ್ ಮಾಡುತ್ತಿರುವುದನ್ನು ನೀವು ನೋಡಬಹುದು.
Could this father-son duo BE any cuter? ?❤️
P.S. We all know where little Fletcher gets that pull shot from ?#YehHaiNayiDilli | #IPL2022 | #DCAllAccess#TATAIPL | #IPL | #DelhiCapitals | #OctaRoarsForDC | @RickyPonting pic.twitter.com/2zxGUC3qtd
— Delhi Capitals (@DelhiCapitals) April 9, 2022
ಡೆಲ್ಲಿ ಕ್ಯಾಪಿಟಲ್ಸ್ಗೆ ಸತತ ಸೋಲು:
ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರದರ್ಶನವು ಇಲ್ಲಿಯವರೆಗೆ ಉತ್ತಮವಾಗಿಲ್ಲ. ಡೆಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ 2 ರಲ್ಲಿ ಸೋತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿತು. ಆದರೆ ಆ ಬಳಿಕ ಎರಡು ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿದ್ದಾರೆ.
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ