ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಐಪಿಎಲ್ 2022 ರ 34 ನೇ ಪಂದ್ಯದ ಕೊನೆಯ ಓವರ್‌ನಲ್ಲಿ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿತ್ತು.ಕೊನೆಯ ಓವರ್‌ನ ಮೂರನೇ ಎಸೆತವನ್ನು ಅಂಪೈರ್ ನೋ ಬಾಲ್ ಎಂದು ಘೋಷಿಸದಿರುವುದಕ್ಕೆ ಡಗೌಟ್‌ನಲ್ಲಿದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಕೋಪಗೊಂಡಿದ್ದರು. ಅಲ್ಲದೆ ತಮ್ಮ ಬ್ಯಾಟ್ಸ್‌ಮನ್‌ಗಳಾದ ರೋವ್‌ಮನ್ ಪೊವೆಲ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಪಂದ್ಯ ನಿಲ್ಲಿಸಿ ಹಿಂತಿರುಗಲು ಮನವಿ ಮಾಡಿದ್ದರು. ಆದರೆ ಅತ್ತ ಕುಲ್ದೀಪ್ ಯಾದವ್ ಮಾತ್ರ ಮೈದಾನದಲ್ಲೇ ಮೈಮರೆತಿದ್ದರು.
ಹೌದು, ಅಂಪೈರ್ ನೋಬಾಲ್ ನೀಡದಿರುವುದರಿಂದ ಕುಪಿತಗೊಂಡಿದ್ದ ಕುಲ್ದೀಪ್ ಯಾದವ್ ಲೆಗ್ ಅಂಪೈರ್ ವಿರುದ್ದ ವಾದಕ್ಕಿಳಿದಿದ್ದರು. ಈ ವೇಳೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ಯುಜ್ವೇಂದ್ರ ಚಹಲ್ ಕುಲ್ದೀಪ್ರನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಕಲ್ದೀಪ್ ಮಾತು ಕೇಳದಿದ್ದಾಗ, ಚಹಲ್ ಕೂಡ ಜಗಳಕ್ಕಿಳಿದರು. ಇಬ್ಬರು ಗೆಳೆಯರಾಗಿರುವ ಕಾರಣ ಇಬ್ಬರ ನಡುವಣ ಈ ಸ್ನೇಹದ ಕಿತ್ತಾಟ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Meanwhile Chahal & Kuldeep #pant #noball #IPL20222 #chahal pic.twitter.com/W4Q7ILAeD0
— Santosh (@Santosh33237443) April 22, 2022
ಇನ್ನು ಈ ಪಂದ್ಯದ ಕೊನೆಯ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಪೊವೆಲ್ ಮೊದಲ 3 ಎಸೆತಗಳಲ್ಲಿ ಸತತ 3 ಸಿಕ್ಸರ್ ಬಾರಿಸಿ ಡೆಲ್ಲಿಯ ಭರವಸೆಯನ್ನು ಹೆಚ್ಚಿಸಿದ್ದರು. ಆದರೆ ಮೂರನೇ ಎಸೆತವನ್ನು ನೋಬಾಲ್ಗೆ ಅಪೀಲ್ ಮಾಡಲಾಯಿತು. ಚೆಂಡು ಸೊಂಟದ ಮೇಲಿದ್ದರೂ ಅಂಪೈರ್ ಅದನ್ನು ನೋ ಬಾಲ್ ನೀಡಿರಲಿಲ್ಲ. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಕ್ರೋಶಗೊಂಡಿದ್ದರು.
ಅದೇ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಕೂಡ ಮೈದಾನಕ್ಕೆ ಬಂದು ಅಂಪೈರ್‌ಗಳ ಜೊತೆ ಮಾತನಾಡಿದ್ದರು. ಮೈದಾನದಲ್ಲಿ ಕಂಡು ಬಂದ ಈ ಅಹಿತಕರ ಘಟನೆಗಾಗಿ ರಿಷಭ್ ಪಂತ್ಗೆ ಪಂದ್ಯದ ಶುಲ್ಕದ 100% ದಂಡವನ್ನು ವಿಧಿಸಲಾಗಿದೆ. ಹಾಗೆಯೇ ಆಮ್ರೆಯನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Published On - 3:56 pm, Sat, 23 April 22