ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ . ರಾಜಸ್ಥಾನ್ ರಾಯಲ್ಸ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಲಯವನ್ನು ಮುಂದುವರೆಸುವ ಇರಾದೆಯಲ್ಲಿದೆ. ಹಾಗಾಗಿ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ…
– ರಾಜಸ್ಥಾನ್ ರಾಯಲ್ಸ್ ಪರ 2500 ಐಪಿಎಲ್ ರನ್‌ಗಳನ್ನು ತಲುಪಲು ಸಂಜು ಸ್ಯಾಮ್ಸನ್ ಇನ್ನೂ 24 ರನ್ ಗಳಿಸಬೇಕಾಗಿದೆ. ಈ ಮೂಲಕ ಅಜಿಂಕ್ಯ ರಹಾನೆ ನಂತರ ಆರ್ಆರ್ ಪರ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
– ಎಂಎಸ್ ಧೋನಿ ನಂತರ ಐಪಿಎಲ್‌ನಲ್ಲಿ 150 ವಿಕೆಟ್ ಕೀಪಿಂಗ್ ಡಿಸ್ಮಿಸೆಲ್ ಮಾಡಿದ ಎರಡನೇ ವಿಕೆಟ್‌ಕೀಪರ್ ಎನಿಸಿಕೊಳ್ಳಲು ದಿನೇಶ್ ಕಾರ್ತಿಕ್‌ಗೆ ಇನ್ನೂ ಎರಡು ಔಟ್ಗಳ ಅಗತ್ಯವಿದೆ.
– T20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ತಲುಪಲು ದಿನೇಶ್ ಕಾರ್ತಿಕ್‌ಗೆ ಇನ್ನೂ ಮೂರು ಸಿಕ್ಸರ್‌ಗಳ ಅಗತ್ಯವಿದೆ.
– ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು ಜೋಸ್ ಬಟ್ಲರ್‌ಗೆ ಇನ್ನೂ ಎರಡು ಸಿಕ್ಸರ್‌ಗಳ ಅಗತ್ಯವಿದೆ.
– ಹರ್ಷಲ್ ಪಟೇಲ್ ವಿನಯ್ ಕುಮಾರ್ ಅವರನ್ನು ಹಿಂದಿಕ್ಕಲು ಮತ್ತು RCB ಯ ಅತ್ಯಂತ ಯಶಸ್ವಿ ವೇಗಿಯಾಗಲು ಇನ್ನೂ ನಾಲ್ಕು ವಿಕೆಟ್‌ಗಳ ಅಗತ್ಯವಿದೆ.
– ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ ಐದನೇ ಆಟಗಾರನಾಗಲು ಆರ್ ಅಶ್ವಿನ್‌ಗೆ ಇನ್ನೂ ನಾಲ್ಕು ವಿಕೆಟ್‌ಗಳ ಅಗತ್ಯವಿದೆ.
– ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ತಲುಪಲು ಸಿದ್ದಾರ್ಥ್ ಕೌಲ್‌ಗೆ ಇನ್ನೂ ಮೂರು ವಿಕೆಟ್‌ಗಳ ಅಗತ್ಯವಿದೆ.
– ದೇವದತ್ ಪಡಿಕ್ಕಲ್ (932) ಐಪಿಎಲ್‌ನಲ್ಲಿ 1000 ರನ್ ಪೂರೈಸಲು 68 ರನ್‌ಗಳ ಅಗತ್ಯವಿದೆ.
– ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ (549) 550 ಬೌಂಡರಿಗಳನ್ನು ಗಳಿಸಲು ಒಂದು ಬೌಂಡರಿ ಅಗತ್ಯವಿದೆ.
– ಸಂಜು ಸ್ಯಾಮ್ಸನ್ (240) ಐಪಿಎಲ್‌ನಲ್ಲಿ 250 ಬೌಂಡರಿಗಳನ್ನು ಗಳಿಸಲು ಹತ್ತು ಬೌಂಡರಿಗಳ ಅಗತ್ಯವಿದೆ.
– ಸಂಜು ಸ್ಯಾಮ್ಸನ್ (4919) T20 ಪಂದ್ಯಗಳಲ್ಲಿ 5000 ರನ್‌ಗಳನ್ನು ಪೂರೈಸಲು 81 ರನ್‌ಗಳ ದೂರದಲ್ಲಿದ್ದಾರೆ.
– ಜೋಸ್ ಬಟ್ಲರ್ (7470) T20 ಪಂದ್ಯಗಳಲ್ಲಿ 7500 ರನ್ ಪೂರ್ಣಗೊಳಿಸಲು 30 ರನ್ ಅಗತ್ಯವಿದೆ.
– ಪಡಿಕ್ಕಲ್ (197) T20 ಕ್ರಿಕೆಟ್‌ನಲ್ಲಿ 200 ಬೌಂಡರಿಗಳನ್ನು ತಲುಪಲು ಮೂರು ಬೌಂಡರಿಗಳ ಅಗತ್ಯವಿದೆ.
ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್
Published On - 5:47 pm, Tue, 5 April 22