ಐಪಿಎಲ್ 14ನೇ ಪಂದ್ಯದಲ್ಲಿ (IPL 2022) ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದ ಕೆಕೆಆರ್ ತಂಡವು ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ರೂವಾರಿ ಆಲ್ರೌಂಡರ್ ಆಟಗಾರ ಪ್ಯಾಟ್ ಕಮಿನ್ಸ್. ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದ ಕಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಮುಂಬೈ ಗೆಲುವವನ್ನು ಕಸಿದುಕೊಂಡಿದ್ದರು. ಅಲ್ಲದೆ 16ನೇ ಓವರ್ನಲ್ಲಿ 35 ರನ್ ಬಾರಿಸಿ ಕೇವಲ 16 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಈ ಭರ್ಜರಿ ಗೆಲುವಿನೊಂದಿಗೆ ಐಪಿಎಲ್ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆಯ ಪಟ್ಟಿಯಲ್ಲಿ ಕಮಿನ್ಸ್ ಹೆಸರು ಕೂಡ ಸೇರ್ಪಡೆಯಾಗಿತ್ತು.
ಈ ಅಮೋಘ ಗೆಲುವನ್ನು ಪಸ್ತಾಪಿಸಿ ಟ್ವೀಟ್ ಮಾಡಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, “ಬಾಯಿಗೆ ಬಂದ ನಿವಾಲಾ ಕಸಿದುಕೊಂಡರು, ಕ್ಷಮಿಸಿ ವಡಾ ಪಾವ್ ಕಸಿದು ಕೊಂಡರು ಎಂದು ಕಾಲೆಳೆದಿದ್ದರು. ಅಲ್ಲದೆ ಪ್ಯಾಟ್ ಕಮ್ಮಿನ್ಸ್, ಕ್ಲೀನ್ ಹಿಟ್ಟಿಂಗ್‌ನ ಅದ್ಭುತ ಪ್ರದರ್ಶನ ಎಂದು ಟ್ವೀಟ್ ಮಾಡಿ ಹಾಡಿಹೊಗಳಿದ್ದರು. ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನಲ್ಲೇ ಸೆಹ್ವಾಗ್ ಮಾಡಿರುವ ಈ ಟ್ವೀಟ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
Moonh se nivala cheen liya ,, sorry vada pav cheen liya.
Pat Cummins, one of the most insane display of clean hitting , 15 ball 56 …
Jeera Batti #MIvKKR pic.twitter.com/Npi2TybgP9— Virender Sehwag (@virendersehwag) April 6, 2022
ಸೆಹ್ವಾಗ್ ವಡ ಪಾವ್ ಎಂದು ಬೇಕೆಂತಲೇ ಪ್ರಸ್ತಾಪಿಸಿದ್ದಾರೆ ಎಂದು ಮುಂಬೈ ಇಂಡಿಯನ್ಸ್ನ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ರೋಹಿತ್ ಶರ್ಮಾ ಅವರನ್ನು ವಡ ಪಾವ್ ಎಂಬ ಟ್ಯಾಗ್ ಲೈನ್ ನೀಡಿ ಟ್ರೋಲ್ ಮಾಡಲಾಗುತ್ತದೆ. ಸೆಹ್ವಾಗ್ ಕೂಡ ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ ಎಂದು ಹಿಟ್ಮ್ಯಾನ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಭರ್ಜರಿ ಪ್ರದರ್ಶನವನ್ನು ಹಾಡಿಹೊಗಳುವ ಭರದಲ್ಲಿ ವೀರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಸೆಹ್ವಾಗ್ ವಿರುದ್ದ ಇದೀಗ ರೋಹಿತ್ ಶರ್ಮಾ ಅಭಿಮಾನಿಗಳು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಅದರಲ್ಲೂ ಕೆಲ ಫ್ಯಾನ್ ಪೇಜ್ಗಳು ಒಂದೇ ಒಂದು ಐಪಿಎಲ್ ಟ್ರೋಫಿ ಗೆಲ್ಲಲಾಗದ ಆಟಗಾರನೊಬ್ಬ 5 ಬಾರಿಯ ಚಾಂಪಿಯನ್ ತಂಡವನ್ನು ಹೀಯಾಳಿಸುತ್ತಿದ್ದಾರೆ ಎಂದು ಸೆಹ್ವಾಗ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?