IPL 2023: ಮಿನಿ ಹರಾಜಿನಲ್ಲಿ ಈ ಮೂವರು ಎಡಗೈ ವೇಗಿಗಳ ಖರೀದಿಗಾಗಿ ಮುಗಿಬೀಳಲಿದೆ ಆರ್​ಸಿಬಿ..!

| Updated By: ಪೃಥ್ವಿಶಂಕರ

Updated on: Nov 13, 2022 | 2:11 PM

Royal Challengers Bangalore: ಆರ್​ಸಿಬಿ ತಂಡದಲ್ಲಿ ಎರಗೈ ವೇಗಿಯಾಗಿ ಡೇವಿಡ್ ವಿಲ್ಲಿ ಇದ್ದರೂ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಸಲುವಾಗಿ ಆರ್​ಸಿಬಿ ಈ ಮೂವರು ಎಡಗೈ ವೇಗಿಗಳ ಮೇಲೆ ಕಣ್ಣೀಟ್ಟಿದೆ

IPL 2023: ಮಿನಿ ಹರಾಜಿನಲ್ಲಿ ಈ ಮೂವರು ಎಡಗೈ ವೇಗಿಗಳ ಖರೀದಿಗಾಗಿ ಮುಗಿಬೀಳಲಿದೆ ಆರ್​ಸಿಬಿ..!
ಆರ್​ಸಿಬಿ ತಂಡ
Follow us on

16ನೇ ಆವೃತ್ತಿಯ ಐಪಿಎಲ್​ಗಾಗಿ (IPL 2023) ಈಗಾಗಲೇ ಬಿಸಿಸಿಐ (BCCI) ಸಕಲ ತಯಾರಿ ನಡೆಸುತ್ತಿದೆ ಇದರ ಅಂಗವಾಗಿ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಮ್ಮ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಅಲ್ಲದೆ ಇದೇ ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ಮಿನಿ ಹರಾಜು ಕೂಡ ನಡೆಯಲಿದೆ. ಇದಕ್ಕೂ ಮುನ್ನ ಬಿಸಿಸಿಐ ಎಲ್ಲಾ ತಂಡಗಳಿಗೆ ತಮಗೆ ಅಗತ್ಯವಿಲ್ಲದ ಆಟಗಾರರನ್ನು ಬಿಡುಗಡೆ ಮಾಡಲು ನವೆಂಬರ್ 15ರ ವರೆಗೆ ಕಾಲವಕಾಶ ನೀಡಿದೆ. ಇದೀಗ ಒಂದೊಂದೆ ಫ್ರಾಂಚೈಸಿ ಪ್ಲೇಯರ್​ಗಳನ್ನು ರಿಲೀಸ್ ಮಾಡುತ್ತಿದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ನಾಲ್ಕು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಈಗ ತೆರವಾದ 4 ಸ್ಥಾನಗಳನ್ನು ಭರ್ತಿಗೊಳಿಸಲು ಮುಂದಾಗಿರುವ ಆರ್​ಸಿಬಿ ಈ ಮಿನಿ ಹರಾಜಿನಲ್ಲಿ 3 ಎಡಗೈ ವೇಗಿಗಳನ್ನು ಖರೀದಿಸುವತ್ತಾ ಚಿಂತನೆ ನಡೆಸಿದೆ.

ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ ಟ್ರೇಡಿಂಗ್ ಮೂಲಕ ಆರ್​ಸಿಬಿ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು 75 ಲಕ್ಷದ ಮೂಲ ಬೆಲೆಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಳೆದ ಬಾರಿ ಆರ್​ಸಿಬಿ ಪರ ಐಪಿಎಲ್ ಆಡಿದ ಬೆಹ್ರೆನ್‌ಡಾರ್ಫ್ ತಂಡದ ಪರ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಹೀಗಾಗಿ ತಂಡದಿಂದ ಅವರನ್ನು ಆರ್​ಸಿಬಿ ಕೈಬಿಟ್ಟಿದೆ. ಬೆಹ್ರೆನ್‌ಡಾರ್ಫ್ ಹೊರತಾಗಿಯೂ ಆರ್​ಸಿಬಿ ತಂಡದಲ್ಲಿ ಡೇವಿಡ್ ವಿಲ್ಲಿ ಇದ್ದರೂ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಸಲುವಾಗಿ ಆರ್​ಸಿಬಿ ಈ ಮೂವರು ಎಡಗೈ ವೇಗಿಗಳ ಮೇಲೆ ಕಣ್ಣೀಟ್ಟಿದೆ.

ಇದನ್ನೂ ಓದಿ: PAK vs ENG: ಟಾಸ್ ಗೆದ್ದ ಇಂಗ್ಲೆಂಡ್; 1992ರ ವಿಶ್ವಕಪ್​ನಂತೆ ಪಾಕಿಸ್ತಾನ ಮೊದಲು ಬ್ಯಾಟಿಂಗ್; ಉಭಯ ತಂಡಗಳು ಹೀಗಿವೆ

1. ರೀಸ್ ಟೋಪ್ಲಿ: ಇಂಗ್ಲೆಂಡ್‌ ತಂಡದ ಸ್ಟಾರ್ ಎಡಗೈ ವೇಗಿ ರೀಸ್ ಟೋಪ್ಲಿ ಇಂಜುರಿಯಿಂದಾಗಿ ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಅವರು 2022 ರಲ್ಲಿ ಇಂಗ್ಲೆಂಡ್‌ ಪರ ಸ್ಟಾರ್ ವೈಟ್-ಬಾಲ್ ಪರ್ಫಾರ್ಮರ್ ಆಗಿದ್ದಾರೆ. ಅದರಲ್ಲೂ ಅವರು ಬೌನ್ಸ್ , ಲೈನ್ ಅಂಡ್ ಲೆಂಗ್ತ್ ಹಾಗೂ ಇನ್ಸ್ವಿಂಗ್ ಹಾಗೂ ಔಟ್​ಸ್ವಿಂಗ್ ಎಸೆತಗಳಲ್ಲಿ ಪರಿಣತರಾಗಿದ್ದಾರೆ. ಹೀಗಾಗಿ ಆರ್​ಸಿಬಿ ಲೈನ್-ಅಪ್‌ನಲ್ಲಿ ಈಗಾಗಲೇ ಇರುವ ಹರ್ಷಲ್ ಪಟೇಲ್ ಅವರಂತಹವರಿಗೆ ಟೋಪ್ಲಿ ಆಗಮನ ಮತ್ತಷ್ಟು ಬಲ ತುಂಬಲಿದೆ.

2. ಸ್ಯಾಮ್ ಕರನ್: ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಅದ್ಭುತ ಪ್ರದರ್ಶನ ನೀಡಿರುವ ಕರನ್ ಆರಂಭಿಕ ಓವರ್ಸ್​ ಹಾಗೂ ಡೆತ್ ಓವರ್ಸ್​ ಎರಡನ್ನೂ ಮಾಡುವಲ್ಲಿ ನಿಪುಣರಾಗಿದ್ದಾರೆ. ಅಲ್ಲದೆ ಬ್ಯಾಟಿಂಗ್​ನಲ್ಲೂ ಸಾಕಷ್ಟು ಪ್ರತಿಭೆ ಹೊಂದಿರುವ ಕರನ್ ಅವರ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ. ಈಗಾಗಲೇ ಸಿಎಸ್​ಕೆ ಪರ ಐಪಿಎಲ್ ಆಡಿದ ಅನುಭವ ಹೊಂದಿರುವ ಕರನ್ ಅವರನ್ನು ಮತ್ತೊಮ್ಮೆ ತೆಕ್ಕೆಗೆ ಹಾಕಿಕೊಳ್ಳಲು ಸಿಎಸ್​ಕೆ ಪ್ರಯತ್ನ ಮಾಡಲಿದೆ. ಆದರೆ ಕೆಳಕ್ರಮಾಂಕದಲ್ಲಿ ಬೌಲಿಂಗ್​ ಜೊತೆಗೆ ಬ್ಯಾಟಿಂಗ್ ವಿಭಾಗದಲ್ಲೂ ನೆರವಾಗುವ ಕರನ್ ಅವರನ್ನು ಖರೀದಿಸಲು ಆರ್​ಸಿಬಿ ಮುಂದಾಗುವುದಂತ್ತೂ ಖಚಿತ.

3. ಜೋಶ್ ಲಿಟಲ್: ಐರ್ಲೆಂಡ್ ಸೀಮರ್ ಜೋಶ್ ಲಿಟಲ್ ನಿಧಾನವಾಗಿ ಮತ್ತು ಕ್ರಮೇಣ ವಿಶ್ವದ ಅತ್ಯಂತ ಭರವಸೆಯ ಎಡಗೈ ವೇಗಿಗಳಲ್ಲಿ ಒಬ್ಬರಾಗಿ ಹೆಸರು ಮಾಡುತ್ತಿದ್ದಾರೆ. 23 ವರ್ಷ ವಯಸ್ಸಿನ ಲಿಟಲ್, ಕಡಿಮೆ ಸ್ವರೂಪಗಳಲ್ಲಿ ವಿಶ್ವದ ಪ್ರಮುಖ ವಿಕೆಟ್ ಟೇಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಚೆಂಡನ್ನು ಗಣನೀಯ ವೇಗದಲ್ಲಿ ಸ್ವಿಂಗ್ ಮಾಡುವ ಅವರ ಸಾಮರ್ಥ್ಯವು ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಗಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್‌ ತಂಡ ನೀಡಿದ ಅದ್ಭುತ ಪ್ರದರ್ಶನದಲ್ಲಿ ಲಿಟಲ್ ಪಾಲು ಹೆಚ್ಚಿತ್ತು. ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಇಬ್ಬರನ್ನೂ ಔಟ್ ಮಾಡುವ ಮೂಲಕ ಇಂಗ್ಲೆಂಡ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Sun, 13 November 22