ಐಪಿಎಲ್ನಲ್ಲಿ (IPL) ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಫ್ರಾಂಚೈಸಿಯೂ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೂ ಮುನ್ನ ತನ್ನ ತಂಡಕ್ಕೆ ನೂತನ ನಾಯಕನನ್ನಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಐಡೆನ್ ಮಾರ್ಕ್ರಾಮ್ (Aiden Markaram) ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಎಸ್ಆರ್ಹೆಚ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಫ್ರಾಂಚೈಸಿಯೂ ಮಿನಿ ಹರಾಜಿಗೂ ಮುನ್ನವೇ ತಂಡದಿಂದ ಬಿಡುಗಡೆ ಮಾಡಿತ್ತು. ಹೀಗಾಗಿ ಸನ್‌ರೈಸರ್ಸ್ ತಂಡ ನೂತನ ನಾಯಕನ ಹುಡುಕಾಟದಲ್ಲಿತ್ತು. ಮಿನಿ ಹರಾಜು ಮುಗಿದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ನಾಯಕತ್ವದ ರೇಸ್‌ನಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಐಡನ್ ಮಾರ್ಕ್ರಾಮ್ ಹೆಸರಿತ್ತು. ಅಲ್ಲದೆ ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನ ಮೊದಲ ಸೀಸನ್ನಲ್ಲಿಯೇ ಸನ್‌ರೈಸರ್ಸ್ ಈಸ್ಟರ್ನ್ ತಂಡವನ್ನು ಮಾರ್ಕ್ರಾಮ್ ಚಾಂಪಿಯನ್ ಮಾಡಿದ್ದರು.
ಇದಲ್ಲದೆ ಮಾರ್ಕ್ರಾಮ್ ನಾಯಕತ್ವದಲ್ಲಿ 2014ರಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡ ವಿಶ್ವಕಪ್ ಗೆದ್ದಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೂ ಮಾರ್ಕ್ರಾಮ್ ಪಾತ್ರರಾಗಿದ್ದಾರೆ. ಹೀಗಾಗಿ ಸನ್‌ರೈಸರ್ಸ್ ಫ್ರಾಂಚೈಸ್ ಅವರನ್ನು ತನ್ನ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಹಾಗೆಯೇ ಸನ್‌ರೈಸರ್ಸ್ ತಂಡದ ನಾಯಕತ್ವವಹಿಸಿಕೊಳ್ಳುವುದರೊಂದಿಗೆ ಐಪಿಎಲ್ ತಂಡವನ್ನು ಮುನ್ನಡೆಸುವ ಐದನೇ ದಕ್ಷಿಣ ಆಫ್ರಿಕಾದ ಆಟಗಾರ ಎಂಬ ಹೆಗ್ಗಳಿಕೆಗೂ ಮಾರ್ಕ್ರಾಮ್ ಪಾತ್ರರಾಗಿದ್ದಾರೆ.
IPL 2023: ಸಿಎಸ್ಕೆಗೆ ಆನೆ ಬಲ; ಐಪಿಎಲ್ ಅಖಾಡಕ್ಕೆ ಎಂಟ್ರಿಕೊಟ್ಟ 14 ಕೋಟಿ ಬೆಲೆಯ ಆಲ್‌ರೌಂಡರ್!
THE. WAIT. IS. OVER. ⏳#OrangeArmy, say hello to our new captain Aiden Markram ?#AidenMarkram #SRHCaptain #IPL2023 | @AidzMarkram pic.twitter.com/3kQelkd8CP
— SunRisers Hyderabad (@SunRisers) February 23, 2023
ವಾಸ್ತವವಾಗಿ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವಕ್ಕಾಗಿ ಮಾರ್ಕ್ರಾಮ್ ಸೇರಿದಂತೆ ಮೂವರು ಆಟಗಾರರ ನಡುವೆ ಫೈಪೋಟಿ ಏರ್ಪಟ್ಟಿತ್ತು. ಅವರಲ್ಲಿ ಒಬ್ಬರು ವೇಗಿ ಭುವನೇಶ್ವರ್ ಕುಮಾರ್ ಆಗಿದ್ದರೆ, ಇನ್ನೊಬ್ಬರು ಕನ್ನಡಿಗ ಮಯಾಂಕ್ ಅಗರ್ವಾಲ್. ಮಿನಿ ಹರಾಜಿಗೂ ಮುನ್ನ ಪಂಜಾಬ್ ತಂಡ ಮಯಾಂಕ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದಲ್ಲದೆ, ತಂಡದಿಂದಲೇ ಹೊರ ಹಾಕಿತ್ತು. ಹೀಗಾಗಿ ಮಿನಿ ಹರಾಜಿನಲ್ಲಿ ಮಯಾಂಕ್ ಅವರನ್ನು ರೂ.8.25 ಕೋಟಿಗೆ ಸನ್‌ರೈಸರ್ಸ್ ಫ್ರಾಂಚೈಸಿ ಖರೀದಿಸಿತ್ತು. ಆಗಿನಿಂದ ಈ ತಂಡಕ್ಕೆ ಮಯಾಂಕ್ ಅವರೇ ನಾಯಕ ಎಂದು ಹೇಳಲಾಗುತ್ತಿತ್ತು. ಆದರೆ ಇದೆಲ್ಲ ಊಹಾಪೋಹಗಳಿಗೆ ಫುಲ್ಸ್ಟಾಪ್ ಇಟ್ಟಿರುವ ಫ್ರಾಂಚೈಸಿ, ಚಾಂಪಿಯನ್ ನಾಯಕನಿಗೆ ತಂಡದ ನಾಯಕತ್ವ ನೀಡಿದೆ.
ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್ (ನಾಯಕ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ನಿತೀಶ್ ಕುಮಾರ್ ರೆಡ್ಡಿ, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್‌ಹಕ್ ಫಾರೂಕಿ, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್, ಉಪೇಂದ್ರ ಯಾದವ್, ಮಯಾಂಕ್ ದಾಗರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Thu, 23 February 23