MI vs GT Head To Head: ಬಲಿಷ್ಠರ ನಡುವೆ ಕಾಳಗ; ಮುಖಾಮುಖಿಯಲ್ಲಿ ಯಾರು ಬೆಸ್ಟ್?

|

Updated on: May 11, 2023 | 6:30 PM

MI vs GT Head To Head: ಐಪಿಎಲ್​ನಲ್ಲಿ ಮುಂಬೈ ಮತ್ತು ಗುಜರಾತ್ ಇದುವರೆಗೆ ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಮತ್ತು ಗುಜರಾತ್ ತಲಾ 1 ಪಂದ್ಯ ಗೆದ್ದಿವೆ.

MI vs GT Head To Head: ಬಲಿಷ್ಠರ ನಡುವೆ ಕಾಳಗ; ಮುಖಾಮುಖಿಯಲ್ಲಿ ಯಾರು ಬೆಸ್ಟ್?
ಮುಂಬೈ- ಗುಜರಾತ್ ಮುಖಾಮುಖಿ
Follow us on

ಐಪಿಎಲ್ 16ನೇ (IPL 2023) ಸೀಸನ್​ನ 57ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ (Mumbai Indians vs Gujarat Titans) ತಂಡವನ್ನು ಎದುರಿಸಲಿದೆ. ಶುಕ್ರವಾರ, ಮೇ 12 ರಂದು ಈ ಎರಡು ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಮುಖಾಮುಖಿಯಾಗಲಿವೆ. ಈ ಆವೃತ್ತಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿಗೆ. ಇದಕ್ಕೂ ಮುನ್ನ ಏಪ್ರಿಲ್ 25 ರಂದು ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಗುಜರಾತ್ ಚೊಚ್ಚಲ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಮುಂಬೈ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯೊಂದಿಗೆ ಅಖಾಡಕ್ಕಿಳಿಯಲಿದೆ.

ಹೆಡ್ ಟು ಹೆಡ್ ರೆಕಾರ್ಡ್

ಐಪಿಎಲ್​ನಲ್ಲಿ ಮುಂಬೈ ಮತ್ತು ಗುಜರಾತ್ ಇದುವರೆಗೆ ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಮತ್ತು ಗುಜರಾತ್ ತಲಾ 1 ಪಂದ್ಯ ಗೆದ್ದಿವೆ. ಇನ್ನು ಈ ಎರಡೂ ತಂಡಗಳ ಬಲಾಬಲ ನೋಡುವುದಾದರೆ ಮುಂಬೈನ ಬೌಲಿಂಗ್ ವಿಭಾಗ ದುರ್ಬಲ ಭಾಗವಾಗಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗುಜರಾತ್ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಪೇಪರ್​ನಲ್ಲಿ ಸಮಾನವಾಗಿರುವ ಉಭಯ ತಂಡಗಳ ನಡುವೆ ಶುಕ್ರವಾರ ಜಿದ್ದಾಜಿದ್ದಿನ ಹೋರಾಟ ಕಾಣಬಹುದಾಗಿದೆ.

IPL 2023: ಐಪಿಎಲ್ ನಡುವೆ ಸಿಹಿ ಸುದ್ದಿ ನೀಡಿದ ಗ್ಲೆನ್ ಮ್ಯಾಕ್ಸ್​ವೆಲ್ ದಂಪತಿಗಳು

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಕ್ಯಾಮರೂನ್ ಗ್ರೀನ್, ಜೇ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ಡ್ವೇನ್ ಯಾನ್ಸನ್, ಶಾಮ್ಸ್ ಮುಲಾನಿ, ರಾಘವ್ ಗೋಯಲ್, ವಿಷ್ಣು ವಿನೋದ್, ನೆಹಾಲ್ ವಧೇರಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕಿನ್ , ಬೆಹ್ರೆನ್‌ಡಾರ್ಫ್, ಅರ್ಜುನ್ ತೆಂಡೂಲ್ಕರ್, ಆಕಾಶ್ ಮಧ್ವಲ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೇವಾಲ್ಡ್ ಬ್ರೂಯಿಸ್, ಕ್ರಿಸ್ ಜೋರ್ಡಾನ್ ಮತ್ತು ಸಂದೀಪ್ ವಾರಿಯರ್.

ಗುಜರಾತ್ ಟೈಟಾನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜಯಂತ್ ಯಾದವ್, ಜೋಶ್ ಲಿಟಲ್, ಶಿವಂ ಮಾವಿ, ಸಾಯಿ ಕಿಶೋರ್, ಶ್ರೀಕರ್ ಭರತ್, ಸಾಯಿ ಸುದರ್ಶನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶನಕ, ಓಡಿಯನ್ ಸ್ಮಿತ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್ ಮತ್ತು ಯಶ್ ದಯಾಳ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ