
ಏ.17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ (Royal Challengers Bangalore vs Chennai Super Kings) ವಿರುದ್ಧ 8 ರನ್‌ಗಳಿಂದ ಸೋತಿದ್ದು ಈಗ ಹಳೆಯ ವಿಚಾರ. ಉಭಯ ತಂಡಗಳು ಮೈದಾನದಲ್ಲಿ ರನ್ ಮಳೆ ಹರಿಸಿ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿದ್ದವು. ಅದರಲ್ಲೂ ಕೊನೆಯ ಐಪಿಎಲ್ ಆಡುತ್ತಿರುವ ಧೋನಿಯನ್ನು ನೋಡುವ ಸಲುವಾಗಿಯೇ ಇಡೀ ಕ್ರೀಡಾಂಗಣ ಭರ್ತಿಯಾಗಿತ್ತು. ಇದರ ನಡುವೆ ಪುಟ್ಟ ಅಭಿಮಾನಿಯೊಬ್ಬ ಸ್ಟ್ಯಾಂಡ್‌ನಲ್ಲಿ ಪೋಸ್ಟರ್ ಹಿಡಿದು ಕುಳಿತಿರುವ ಫೋಟೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರವಾಗಿ ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.
ವಾಸ್ತವವಾಗಿ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಈ ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ ಪ್ಲಕಾರ್ಡ್ ಹಿಡಿದು ನಿಂತಿದ್ದ. ಆ ಪ್ಲಕಾರ್ಡ್ನಲ್ಲಿ ‘ವಿರಾಟ್ ಅಂಕಲ್, ನಾನು ವಾಮಿಕಾ ಅವರನ್ನು ಡೇಟ್‌ಗೆ ಕರೆದುಕೊಂಡು ಹೋಗಬಹುದೇ?’ ಎಂದು ಬರೆಯಲಾಗಿತ್ತು. ಇದೀಗ ಈ ಪುಟ್ಟ ಬಾಲಕ ಇಂತಹ ಬೇಡಿಕೆಯನ್ನಿಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದಾಗ್ಯೂ, ಈ ಪುಟ್ಟ ಅಭಿಮಾನಿಯ ಈ ರೀತಿಯ ಕೊರಿಕೆಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆಗಳು ಮತ್ತು ಕಾಮೆಂಟ್‌ಗಳು ಕಂಡುಬರುತ್ತಿವೆ.
IPL 2023: ಲಕ್ಷ ಮೌಲ್ಯದ 16 ಬ್ಯಾಟ್, ಶೂ, ಗ್ಲೌಸ್ ಕಳ್ಳತನ! ಡೆಲ್ಲಿ ತಂಡದ ನಿದ್ದೆಗೆಡಿಸಿದ ಕಳ್ಳರು
“ಒಂದು ವೇಳೆ ನಾನು ವಾಮಿಕಾ ಪೋಷಕರಾಗಿದ್ದರೆ, ಇದನ್ನು ಓದಲು ನನಗೆ ತುಂಬಾ ಕೋಪ ಬರುತ್ತಿತ್ತು! ಈ ಸೋಶಿಯಲ್ ಮೀಡಿಯಾ ವ್ಯಾಮೋಹವನ್ನು ಪೋಷಕರೂ ನಿಲ್ಲಿಸಬೇಕು! ಇದು ನಿಮ್ಮ ತಪ್ಪು, ನಿಮ್ಮ ಮಗನದ್ದಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.’ದಯವಿಟ್ಟು ವಾಮಿಕಾಳನ್ನು ಬಿಟ್ಟುಬಿಡಿ. ಆ (ಚಿಕ್ಕ) ಮಗುವಿಗೂ ಈ ಬೋರ್ಡಿನ ಮೇಲೆ ಬರೆದಿರುವುದು ಅರ್ಥವಾಗುವುದಿಲ್ಲ. ಫೇಮಸ್ ಆಗಲು ಜನರು ಏನು ಬೇಕಾದರೂ ಮಾಡಬಹುದು’ ಎಂದು ನೆಟ್ಟಿಗರು ಆ ಪುಟ್ಟ ಬಾಲಕನ ಪೋಷಕರನ್ನು ಟೀಕಿಸಿದ್ದಾರೆ.
Here is something wrong with parenting, idk why people are finding it cute pic.twitter.com/xj5DqZHRmx
— Dr Nimo Yadav (@niiravmodi) April 17, 2023
No you cannot, not till you understand the meaning of the words that are written there !
Also, not till your parents understand that this isn’t cool/funny ??
Also, not till vamika wants to go out with you !#CricketTwitter https://t.co/nTq67Itvyk
— ????? ????? (@nihardesai7) April 18, 2023
I would be very very angry if I was Vamika’s parents!
Also parents stop with this social media obsession! Not the child but you are creepy pic.twitter.com/grOthsNK1q
— Dr Pooja Tripathi (@Pooja_Tripathii) April 18, 2023
ಮುಖ್ಯವಾಗಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ವಿಚಾರದಲ್ಲಿ ತುಂಬಾ ಸಂವೇದನಾಶೀಲರಾಗಿದ್ದಾರೆ. ಮಗಳು ಜನಿಸಿ ವರ್ಷಗಳೇ ಕಳೆದಿದ್ದರೂ ಇದುವರೆಗು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳ ಫೋಟೋವನ್ನಾಗಲಿ ಅಥವಾ ಮುಖವನ್ನಾಗಲಿ ಎಂದಿಗೂ ತೋರಿಸುವುದಿಲ್ಲ. ಇಷ್ಟು ಮಾತ್ರವಲ್ಲದೆ, ವಿಮಾನ ನಿಲ್ದಾಣದಲ್ಲಿಯೂ ಸಹ, ಮಗಳ ಫೋಟೋಗಳನ್ನು ತೆಗೆಯದಂತೆ ಕೊಹ್ಲಿ ಕ್ಯಾಮೆರಾಪರ್‌ಸನ್‌ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.
ಏತನ್ಮಧ್ಯೆ, ಐಪಿಎಲ್ 2023 ರಲ್ಲಿ, ಬೆಂಗಳೂರು ತಂಡ ಇದುವರೆಗೆ ಐದು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ. ತಂಡವು ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಏಪ್ರಿಲ್ 20 ರಂದು ಮೊಹಾಲಿಯಲ್ಲಿ ಆಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Wed, 19 April 23