IPL 2024: ಆರ್​ಸಿಬಿ ಸೇರ್ತಾರಾ ಜೋಫ್ರಾ ಆರ್ಚರ್? ಇನ್ಸ್​ಟಾ ಪೋಸ್ಟ್​ನ ಒಳಮರ್ಮವೇನು?

IPL 2024: ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರುತ್ತಾರೆ ಎಂಬ ಊಹಾಪೋಹಗಳು ತೀವ್ರಗೊಂಡಿವೆ. ಅದಕ್ಕೆ ಪೂರಕವಾಗಿ ಜೋಫ್ರಾ ಆರ್ಚರ್ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಈ ಊಹಾಪೋಹಗಳಿಗೆ ಮತ್ತಷ್ಟು ಬಲತಂದಿದೆ.

IPL 2024: ಆರ್​ಸಿಬಿ ಸೇರ್ತಾರಾ ಜೋಫ್ರಾ ಆರ್ಚರ್? ಇನ್ಸ್​ಟಾ ಪೋಸ್ಟ್​ನ ಒಳಮರ್ಮವೇನು?
ಜೋಫ್ರಾ ಆರ್ಚರ್

Updated on: Mar 17, 2024 | 6:33 PM

17ನೇ ಆವೃತ್ತಿಯ ಐಪಿಎಲ್ (IPL 2024 ) ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಉಳಿದಿವೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ನಡುವೆ ನಡೆಯಲಿದೆ. ಈ ನಡುವೆ ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ (Jofra Archer) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರುತ್ತಾರೆ ಎಂಬ ಊಹಾಪೋಹಗಳು ತೀವ್ರಗೊಂಡಿವೆ. ಅದಕ್ಕೆ ಪೂರಕವಾಗಿ ಜೋಫ್ರಾ ಆರ್ಚರ್ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಈ ಊಹಾಪೋಹಗಳಿಗೆ ಮತ್ತಷ್ಟು ಬಲತಂದಿದೆ. ವಾಸ್ತವವಾಗಿ ಜೋಫ್ರಾ ಆರ್ಚರ್ 2023 ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ ಜೋಫ್ರಾ ಈ ಸೀಸನ್​ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲಿಲ್ಲ. ಗಾಯದ ಕಾರಣ ಆರ್ಚರ್ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಅದರ ನಂತರ ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ಹರಾಜಿನ ಮೊದಲು ಜೋಫ್ರಾ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಆರ್​ಸಿಬಿ ಕೆಫೆ ಹಾಗೂ ಬಾರ್​ ಫೋಟೋ

ಗಾಯದ ಕಾರಣ ಜೋಫ್ರಾ ಆರ್ಚರ್ ಬಹಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಆರ್ಚರ್ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್ ಆರಂಭಕ್ಕೂ ಮುನ್ನ ತಯಾರಿ ನಡೆಸಲು ಜೋಫ್ರಾ ಆರ್ಚರ್ ಬೆಂಗಳೂರಿನಲ್ಲಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಅದರಂತೆ ಅಭ್ಯಾಸ ಮುಗಿದ ನಂತರ ಜೋಫ್ರಾ ಆರ್ಚರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಫೆಗೆ ಭೇಟಿ ನೀಡಿದ್ದು, ಅದರ ಫೋಟೋವನ್ನು ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜೋಫ್ರಾ ಆರ್ಚರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆರ್​ಸಿಬಿ ಕೆಫೆ ಹಾಗೂ ಬಾರ್​ನ ಫೋಟೋವನ್ನು ಹಂಚಿಕೊಂಡಿರುವುದನ್ನು ನೋಡಿದ ಅಭಿಮಾನಿಗಳು ಆರ್ಚರ್ ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಕೇಳಲಾರಂಭಿಸಿದ್ದಾರೆ. ಅಲ್ಲದೆ ಹರಾಜಿನಲ್ಲಿ ಖರೀದಿಯಾಗದ ಆರ್ಚರ್ ಇದೀಗ ಆರ್​ಸಿಬಿ ತಂಡವನ್ನು ಸೇರಲು ಪ್ರಯತ್ನ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಆದಾಗ್ಯೂ, ಆರ್ಚರ್ ನಿಜವಾಗಿಯೂ ಆರ್​ಸಿಬಿ ಸೇರುತ್ತಾರೆಯೇ ಎಂಬ ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

IPL 2024: ಆರ್​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಐಪಿಎಲ್​ಗಾಗಿ ಭಾರತಕ್ಕೆ ಬಂದ ಕಿಂಗ್ ಕೊಹ್ಲಿ..! ವಿಡಿಯೋ

2024 ರ ಟಿ20 ವಿಶ್ವಕಪ್ ಮೇಲೆ ಕಣ್ಣು

ಜೋಫ್ರಾ ಆರ್ಚರ್ ಈಗ ಜೂನ್​ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗಾಗಿ ಸ್ವತಃ ತಯಾರಿ ನಡೆಸುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಸುದೀರ್ಘ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದ ಆರ್ಚರ್ ಇದೀಗ ತಮ್ಮ ಮುಂದಿನ ತಯಾರಿ ಆರಂಭಿಸಿದ್ದಾರೆ. ಮೇಲೆ ಹೇಳಿದಂತೆ ಟಿ20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ಆರ್ಚರ್ ಆಡುವುದನ್ನು ಕಾಣಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ