
2024 ರ ಐಪಿಎಲ್ (IPL 2024) ಆರಂಭಕ್ಕೂ ಮುನ್ನ ತಂಡದಲ್ಲಿ ಮಾಡಿದ ಬದಲಾವಣೆಗಳಿಂದಾಗಿ ಸಾಕಷ್ಟು ವಿವಾದಕ್ಕೊಳಗಾಗಿದ್ದ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ಇದೀಗ ಆ ಎಲ್ಲಾ ವಿವಾದಗಳಿಗೆ ಒಂದೇ ಒಂದು ವಿಡಿಯೋ ಹರಿಬಿಡುವ ಮೂಲಕ ಉತ್ತರ ನೀಡಿದೆ. ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ (Rohit Sharma) ಅವರಿಂದ ಕಸಿದುಕೊಂಡು ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನೀಡಿತ್ತು. ಫ್ರಾಂಚೈಸಿಯ ಈ ನಡೆಗೆ ರೋಹಿತ್ ಶರ್ಮಾ ಅಭಿಮಾನಿಗಳು ಸಾಕಷ್ಟು ಕೋಪಗೊಂಡಿದ್ದರು. ಇದಲ್ಲದೆ ಫ್ರಾಂಚೈಸಿ ಜೊತೆಗೆ ಜಸ್ಪ್ರೀತ್ ಬುಮ್ರಾ ಸಂಬಂಧ ಅಳಸಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ತಂಡದೊಳಗೆ ಯಾವ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಸಾಭೀತುಪಡಿಸುವಂತಹ ವಿಡಿಯೋವನ್ನು ಮುಂಬೈ ಪ್ರಾಂಚೈಸಿ ರಿಲೀಸ್ ಮಾಡಿದೆ. ಅದರಂತೆ ತಂಡದ ಚಿತ್ರೀಕರಣದ ವೀಡಿಯೊವನ್ನು ಫ್ರಾಂಚೈಸಿ ಹಂಚಿಕೊಂಡಿದ್ದು, ಇದರಲ್ಲಿ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್‌ನ ಈ ಹೊಸ ವೀಡಿಯೊದಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಶಾನ್ ಕಿಶನ್ ಟೀಂ ಇಂಡಿಯಾದಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡ ನಂತರ ರೋಹಿತ್ ಸೇರಿದಂತೆ ಆಡಳಿತ ಮಂಡಳಿ ಈ ಯುವ ವಿಕೆಟ್ಕೀಪರ್ ಬ್ಯಾಟರ್ ವಿರುದ್ಧ ಕೋಪಗೊಂಡಿದೆ ಎಂದು ವರದಿಯಾಗಿತ್ತು. ಆದರೆ ಈಗ ಈ ಹೊಸ ವಿಡಿಯೋದಲ್ಲಿ ರೋಹಿತ್ ಮತ್ತು ಇಶಾನ್ ಒಟ್ಟಿಗೆ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೆ ನಾಯಕತ್ವವನ್ನು ತನ್ನಿಂದ ಕಸಿದುಕೊಂಡ ಹಾರ್ದಿಕ್ ವಿರುದ್ಧ ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಕೋಪಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಇವರೆಲ್ಲರು ಒಟ್ಟಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
Wrapped with love, draped in 𝘉𝘭𝘶𝘦 𝘢𝘯𝘥 𝘎𝘰𝘭𝘥 💙
Cop our season jersey now 👉 https://t.co/YfTjNo3NLL 👕 #OneFamily #MumbaiIndians @skechersGOin pic.twitter.com/11JouH8VKr
— Mumbai Indians (@mipaltan) March 14, 2024
ಮುಂಬೈ ಪೋಸ್ಟ್ ಮಾಡಿರುವ ಈ ವೀಡಿಯೊವನ್ನು ವೀಕ್ಷಿಸಿದ ಬಳಿಕ ನೆಟ್ಟಿಗರು ಹರ್ಷವ್ಯಕ್ತಪಡಿಸಿದ್ದಾರೆ. ಈಗ ತಂಡದೊಳಗಿನ ಎಲ್ಲರೂ ಸಂತೋಷವಾಗಿದ್ದಾರೆಂದು ತೋರುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಆದಾಗ್ಯೂ, ಕೆಲವು ಬಳಕೆದಾರರು ರೋಹಿತ್ ಮತ್ತು ಪಾಂಡ್ಯ ಒಟ್ಟಿಗೆ ಕಾಣಿಸಿಕೊಂಡಿಲ್ಲ ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಈ ಶೂಟಿಂಗ್ ವೇಳೆ ಹಲವು ಆಟಗಾರರು ಜೊತೆಗಿರುವುದರಿಂದ ತಂಡದಲ್ಲಿನ ಬಿರುಕು ಮುಚ್ಚಿ ಹೋಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
IPL 2024: ಐಪಿಎಲ್ ನೆಚ್ಚಿಕೊಂಡಿದ್ದ ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ..!
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Thu, 14 March 24