AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಕಿಂಗ್ ಕೊಹ್ಲಿ ಇಲ್ಲದೆ ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ

IPL 2024: ಮಾರ್ಚ್​ 22 ರಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್​ಗೆ ಈಗಾಗಲೇ ಎಲ್ಲಾ ತಂಡಗಳು ತಮ್ಮ ಅಭ್ಯಾಸ ಶಿಬಿರವನ್ನು ಆರಂಭಿಸಿವೆ. ಎಲ್ಲಾ ತಂಡಗಳಂತೆ ಆರ್​ಸಿಬಿ ಕೂಡ ತನ್ನ ತಯಾರಿಗೆ ವೇಗ ನೀಡಿದೆ. ಈಗಾಗಲೇ ತಂಡದ ಹಲವು ಆಟಗಾರರು ಶಿಬಿರವನ್ನು ಸೇರಿಕೊಂಡಿದ್ದಾರೆ.

IPL 2024: ಕಿಂಗ್ ಕೊಹ್ಲಿ ಇಲ್ಲದೆ ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಆರ್​ಸಿಬಿ
ಪೃಥ್ವಿಶಂಕರ
|

Updated on: Mar 14, 2024 | 7:57 PM

Share

ಮಾರ್ಚ್​ 22 ರಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್​ಗೆ (IPL 2024) ಈಗಾಗಲೇ ಎಲ್ಲಾ ತಂಡಗಳು ತಮ್ಮ ಅಭ್ಯಾಸ ಶಿಬಿರವನ್ನು ಆರಂಭಿಸಿವೆ. ಎಲ್ಲಾ ತಂಡಗಳಂತೆ ಆರ್​ಸಿಬಿ (RCB) ಕೂಡ ತನ್ನ ತಯಾರಿಗೆ ವೇಗ ನೀಡಿದೆ. ಈಗಾಗಲೇ ತಂಡದ ಹಲವು ಆಟಗಾರರು ಶಿಬಿರವನ್ನು ಸೇರಿಕೊಂಡಿದ್ದಾರೆ. ಅದರಲ್ಲಿ ಭಾಗಶಃ ದೇಶಿ ಆಟಗಾರರು ತಂಡವನ್ನು ಕೂಡಿಕೊಂಡಿದ್ದರೆ, ವಿದೇಶಿ ಆಟಗಾರರು ಒಬ್ಬೋಬ್ಬರಾಗಿ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ವಿದೇಶಿ ಆಟಗಾರರಲ್ಲಿ ಪ್ರಮುಖವಾಗಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf Du Plessis) ಮತ್ತು ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ನಿನ್ನೆಯಿಂದ ನೆಟ್ಸ್​ನಲ್ಲಿ ಬೆವರು ಹರಿಸಲಾರಂಭಿಸಿದ್ದಾರೆ. ಅದರ ವಿಡಿಯೋವನ್ನು ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ವಿರಾಟ್ ಕೊಹ್ಲಿ ಎಂಟ್ರಿ ಯಾವಾಗ?

ಆದರೆ ತಂಡದಿಂದ ಹಿಡಿದು ಅಭಿಮಾನಿಗಳವರೆಗೆ ಕಾಡುತ್ತಿರುವ ಪ್ರಶ್ನೆಯೆಂದರೆ ತಂಡದ ಆಧಾರ ಸ್ತಂಭವಾದ ವಿರಾಟ್ ಕೊಹ್ಲಿ ಯಾವಾಗ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬುದು. ವಾಸ್ತವವಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾದ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿಲ್ಲ. ಇದೀಗ ಆರ್​ಸಿಬಿ ಅಭ್ಯಾಸ ಶುರು ಮಾಡಿದೆಯಾದರೂ ಸ್ಟಾರ್ ಪ್ಲೇಯರ್ ಕೊಹ್ಲಿ ಇಲ್ಲದೆ ಆತಂಕಕೊಳಗಾಗಿದೆ. ಆದರೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕೊಹ್ಲಿ ಮಾರ್ಚ್ 16ರಂದು ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದ್ದು, ಇದು ಅಭಿಮಾನಿಗಳನ್ನು ನಿರಾಳರನ್ನಾಗಿಸಿದೆ.

ಅನ್ಬಾಕ್ಸ್ ಕಾರ್ಯಕ್ರಮ

ವಾಸ್ತವವಾಗಿ, ಆರ್​ಸಿಬಿ ಫ್ರಾಂಚೈಸಿ ಮಾರ್ಚ್ 19 ರಂದು ಆರ್​ಸಿಬಿ ಅನ್ಬಾಕ್ಸ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆರ್​ಸಿಬಿ ಅಭಿಮಾನಿಗಳ ಬಹುದೊಡ್ಡ ಬೇಡಿಕೆ ಇಡೇರುವುದು ಖಚಿತವಾಗಿದೆ. ಇಷ್ಟು ದಿನ ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಎಂದಿದ್ದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಮರು ನಾಮಕರಣ ಮಾಡಲು ಫ್ರಾಂಚೈಸಿ ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಎಲ್ಲಾ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

WPL Points Table: 1 ರನ್​ನಿಂದ ಸೋತ ಆರ್​ಸಿಬಿ ಹಾದಿ ಮತ್ತಷ್ಟು ಕಠಿಣ: ಪಾಯಿಂಟ್ಸ್ ಟೇಬಲ್ ನೋಡಿ

ಇನ್ನು ಬಿಡುಗಡೆಯಾಗಿರುವ ಐಪಿಎಲ್​ನ ಮೊದಲಾರ್ಧದ ವೇಳಾಪಟ್ಟಿಯಲ್ಲಿ ಆರ್​ಸಿಬಿ ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಆರ್​ಸಿಬಿಗೆ ಎದುರಾಗಲಿದೆ. ಉಳಿದಂತೆ ಮೊದಲಾರ್ಧದ ಐಪಿಎಲ್​ನಲ್ಲಿ ಆರ್​ಸಿಬಿ ಮೂರು ಪಂದ್ಯಗಳನ್ನು ತವರಿನಲ್ಲಿ ಅಂದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.

ಆರ್​​ಸಿಬಿ ವೇಳಾಪಟ್ಟಿ

  • ಮಾರ್ಚ್ 22: ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ
  • ಮಾರ್ಚ್ 25: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಬೆಂಗಳೂರು,
  • ಮಾರ್ಚ್ 29: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್, ಬೆಂಗಳೂರು
  • ಏಪ್ರಿಲ್ 2: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಬೆಂಗಳೂರು
  • ಏಪ್ರಿಲ್ 6: ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಜೈಪುರ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ