IPL 2024: ಐಪಿಎಲ್ ನೆಚ್ಚಿಕೊಂಡಿದ್ದ ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ..!
T20 World Cup 2024: ಮುಂಬರುವ ಐಪಿಎಲ್‌ನಲ್ಲಿ ಅಬ್ಬರಿಸಿ ಜೂನ್ ತಿಂಗಳಿನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿದ್ದ ಟೀಂ ಇಂಡಿಯಾದ ಹಲವು ಕ್ರಿಕೆಟಿಗರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ.

ಮುಂಬರುವ ಐಪಿಎಲ್‌ನಲ್ಲಿ (IPL 2024) ಅಬ್ಬರಿಸಿ ಜೂನ್ ತಿಂಗಳಿನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ (T20 World Cup 2024) ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿದ್ದ ಟೀಂ ಇಂಡಿಯಾದ (Team India) ಹಲವು ಕ್ರಿಕೆಟಿಗರಿಗೆ ಬಿಸಿಸಿಐ (BCCI) ಬಿಗ್ ಶಾಕ್ ನೀಡಿದೆ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, 2024 ರ ಟಿ20 ವಿಶ್ವಕಪ್‌ನಲ್ಲಿ ಆಟಗಾರರ ಆಯ್ಕೆಗೆ ಐಪಿಎಲ್‌ನಲ್ಲಿ ನೀಡುವ ಪ್ರದರ್ಶನ ಮುಖ್ಯ ಆಧಾರವಾಗಿರುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ ಎಂದು ವರದಿಯಾಗಿದೆ. ಇದು ಭಾರತದ ಹಲವು ಯುವ ಆಟಗಾರರಿಗೆ ಹಾಗೂ ಅನುಭವಿ ಆಟಗಾರರಿಗೆ ಆತಂಕವನ್ನುಂಟು ಮಾಡಿದೆ.
ವಾಸ್ತವವಾಗಿ ಐಪಿಎಲ್ ಮುಗಿದ ಕೂಡಲೇ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 2024 ರ ಟಿ20 ವಿಶ್ವಕಪ್ ಆರಂಭವಾಗಲಿದೆ. ಐಪಿಎಲ್ ಮುಗಿದ ಕೂಡಲೇ ಈ ಟೂರ್ನಿ ಆರಂಭವಾಗುವುದರಿಂದ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಿರುವ ಆಯ್ಕೆ ಮಂಡಳಿ, ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ಪ್ರಮುಖವಾಗಿ ಪರಿಗಣಿಸುತ್ತದೆ ಎಂಬುದು ಹಲವು ಕ್ರಿಕೆಟಿಗರ ಅಭಿಪ್ರಾಯವಾಗಿತ್ತು. ಇದರಿಂದ ಟೀಂ ಇಂಡಿಯಾದಲ್ಲಿ ಆಡದೆ ಹಾಗೆಯೇ ದೇಶಿ ಟೂರ್ನಿಯಿಂದಲೂ ದೂರ ಉಳಿದಿದ್ದ ಹಲವು ಆಟಗಾರರು ಐಪಿಎಲ್‌ನಲ್ಲಿ ಮಿಂಚಿ ಭಾರತ ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದರು. ಆದರೀಗ ಬಿಸಿಸಿಐ ತೀರ್ಮಾನ ಅಂತಹ ಆಟಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Rahul Dravid: ಕೇಂದ್ರ ಒಪ್ಪಂದದಿಂದ ಶ್ರೇಯಸ್- ಕಿಶನ್ ಔಟ್; ಮೊದಲ ಬಾರಿಗೆ ಮೌನ ಮುರಿದ ದ್ರಾವಿಡ್
ಐಪಿಎಲ್ ಮಾನದಂಡವಲ್ಲ..!
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಮಾನದಂಡಗಳ ಕುರಿತು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅದರಂತೆ, ‘ಐಪಿಎಲ್ ಬಹಳ ಮುಖ್ಯವಾದರೂ, ಅದರ ಆಧಾರದ ಮೇಲೆ ಟಿ20 ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲಾಗದು. ಹೀಗಾಗಿ ಯಾವ ಆಟಗಾರರು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುವ ಮೂಲಕ ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ಆಡುಬಹುದು ಎಂದು ಯೋಚಿಸುತ್ತಿದ್ದರೆ ಅದು ತಪ್ಪು. ಅಂತರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಟಿ20 ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆಯೇ ಹೊರತು ಐಪಿಎಲ್‌ನಲ್ಲಿ ಅಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟವಾಗಿ ಹೇಳಿವೆ. ಇದು ಹತ್ತಾರು ಆಟಗಾರರಿಗೆ ದೊಡ್ಡ ಹೊಡೆತ ನೀಡಿದೆ. ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅನೇಕ ಭಾರತೀಯ ಆಟಗಾರರಿಗೆ ಇದು ಮತ್ತೊಂದು ಶಾಕಿಂಗ್ ಸುದ್ದಿಯಾಗಿದೆ.
ಇಶಾನ್ ಕಿಶನ್ಗೆ ಮತ್ತೊಂದು ಹೊಡೆತ
ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದರೆ ಟೀಂ ಇಂಡಿಯಾಗೆ ಎಂಟ್ರಿ ಸಿಗುವುದಲ್ಲದೆ, ಐಪಿಎಲ್‌ನಲ್ಲಿ ಮೌಲ್ಯ ಹೆಚ್ಚುತ್ತದೆ ಎಂದು ಆಟಗಾರರು ಭಾವಿಸಿದ್ದಾರೆ. ಈ ಕಾರಣಕ್ಕಾಗಿ, ಆಟಗಾರರು ಯಾವುದೋ ನೆಪದಲ್ಲಿ ದೇಶೀಯ ಕ್ರಿಕೆಟ್ ಆಡಲು ನಿರಾಕರಿಸುತ್ತಾರೆ ಮತ್ತು ಐಪಿಎಲ್ ತಯಾರಿಯಲ್ಲಿ ತೊಡಗುತ್ತಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಇಶಾನ್ ಕಿಶನ್ ಕೆಲ ದಿನಗಳಿಂದ ಸುದ್ದಿಯಲ್ಲಿದ್ದರು. ಐಪಿಎಲ್ ಆಡುವ ಸಲುವಾಗಿ ಕಿಶನ್ ದೇಶೀಯ ಕ್ರಿಕೆಟ್ ಆಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕಾಗಿ ಬಿಸಿಸಿಐ ಅವರ ಕೇಂದ್ರ ಒಪ್ಪಂದವನ್ನೂ ರದ್ದುಗೊಳಿಸಿದೆ ಎಂದು ಹೇಳಲಾಗುತ್ತಿದೆ. ಈಗ ಬಿಸಿಸಿಐ ಮೂಲಗಳು ಐಪಿಎಲ್ ಟಿ20 ವಿಶ್ವಕಪ್‌ಗೆ ಆಯ್ಕೆಯ ಮುಖ್ಯ ಆಧಾರವಾಗಿರುವುದಿಲ್ಲ ಎಂದು ಹೇಳಿರುವುದು ಹಲವು ಆಟಗಾರರಿಗೆ ಭಾರೀ ಆಘಾತ ನೀಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
