Ranji Trophy 2024: 42ನೇ ಬಾರಿ ರಣಜಿ ಕಿರೀಟ ಮುಡಿಗೇರಿಸಿಕೊಂಡ ಮುಂಬೈ
Ranji Trophy 2024: 1934-35 ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಮುಂಬೈ ತಂಡವು ಕೊನೆಯ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು 2015-16 ರಲ್ಲಿ. ಇದೀಗ ಏಳು ವರ್ಷಗಳ ಬಳಿಕ ಮತ್ತೊಮ್ಮೆ ಗತವೈಭದ ರಣಜಿ ಟ್ರೋಫಿಯನ್ನು ಗೆಲ್ಲುವಲ್ಲಿ ಮುಂಬೈ ತಂಡ ಯಶಸ್ವಿಯಾಗಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ (Ranji Trophy 2024) ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಮುಂಬೈ 169 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಮುಂಬೈ ತಂಡವು 42ನೇ ಬಾರಿ ರಣಜಿ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 224 ರನ್ಗಳಿಸಿ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡವು ಕೇವಲ 105 ರನ್ಗಳಿಗೆ ಸರ್ವಪತನ ಕಂಡಿತು. ಮುಂಬೈ ಪರ ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ಮತ್ತು ಧವಳ್ ಕುಲ್ಕರ್ಣಿ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಮುಂಬೈ ಪರ ಯುವ ದಾಂಡಿಗ ಮುಶೀರ್ ಖಾನ್ (136) ಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 95 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಶಮ್ಸ್ ಮುಲಾನಿ 50 ರನ್ ಬಾರಿಸಿ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 418 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 538 ರನ್ಗಳ ಗುರಿ ಪಡೆದಿರುವ ವಿದರ್ಭ ತಂಡಕ್ಕೆ ಈ ಬಾರಿ ಕರುಣ್ ನಾಯರ್ ಆಸರೆಯಾದರು. 74 ರನ್ಗಳನ್ನು ಬಾರಿಸುವ ಮೂಲಕ ಕರುಣ್ ನಾಲ್ಕನೇ ದಿನದಾಟದ ವೇಳೆ ವಿದರ್ಭ ತಂಡದ ಸ್ಕೋರ್ ಅನ್ನು 200 ರ ಗಡಿದಾಟಿಸಿ ವಿಕೆಟ್ ಒಪ್ಪಿಸಿದರು.
ಅದರಂತೆ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ವಿದರ್ಭ ತಂಡವು 5 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿದ್ದ ವಿದರ್ಭ ಪರ ಐದನೇ ದಿದನಾಟದಲ್ಲಿ ಅಕ್ಷಯ್ ವಾಡ್ಕರ್ (102) ಹಾಗೂ ಹರ್ಷ್ ದುಬೆ (65) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಇವರಿಬ್ಬರ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮುಂಬೈ ಬೌಲರ್ಗಳು ವಿದರ್ಭ ತಂಡವನ್ನು 368 ರನ್ಗಳಿಗೆ ಆಲೌಟ್ ಮಾಡಿದರು.
ಈ ಮೂಲಕ ಮುಂಬೈ ತಂಡವು 169 ರನ್ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಲ್ಲದೆ ದೇಶೀಯ ಅಂಗಳದಲ್ಲಿ 42ನೇ ಬಾರಿ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ವಿಶೇಷ ಸಾಧನೆ ಮಾಡಿದೆ.
𝐕𝐢𝐜𝐭𝐨𝐫𝐲 𝐟𝐨𝐫 𝐌𝐮𝐦𝐛𝐚𝐢!
Dhawal Kulkarni takes the final wicket as they beat Vidarbha by 169 runs in the @IDFCFIRSTBank #RanjiTrophy #Final in Mumbai
Brilliant performance from the Ajinkya Rahane-led side 👌
Scorecard ▶️ https://t.co/k7JhkLhgT5 pic.twitter.com/Iu458SZF2F
— BCCI Domestic (@BCCIdomestic) March 14, 2024
ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಭೂಪೇನ್ ಲಾಲ್ವಾನಿ , ಮುಶೀರ್ ಖಾನ್ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ (ವಿಕೆಟ್ ಕೀಪರ್) , ಶಮ್ಸ್ ಮುಲಾನಿ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ತುಷಾರ್ ದೇಶಪಾಂಡೆ , ಧವಲ್ ಕುಲಕರ್ಣಿ.
ಇದನ್ನೂ ಓದಿ: Musheer Khan: ಭರ್ಜರಿ ಶತಕದೊಂದಿಗೆ ಸಚಿನ್ ದಾಖಲೆ ಮುರಿದ ಮುಶೀರ್ ಖಾನ್
ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಧ್ರುವ ಶೋರೆ , ಅಮನ್ ಮೊಖಡೆ , ಕರುಣ್ ನಾಯರ್ , ಯಶ್ ರಾಥೋಡ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಉಮೇಶ್ ಯಾದವ್ , ಹರ್ಷ ದುಬೆ , ಯಶ್ ಠಾಕೂರ್ , ಆದಿತ್ಯ ಠಾಕ್ರೆ.
Published On - 1:54 pm, Thu, 14 March 24
