IPL 2024 RR vs RCB Live Streaming: ರಾಜಸ್ಥಾನಕ್ಕೆ ಆರ್​ಸಿಬಿ ರಾಯಲ್ ಚಾಲೆಂಜ್; ಪಂದ್ಯ ಎಲ್ಲಿ ಗೊತ್ತಾ?

|

Updated on: Apr 05, 2024 | 4:48 PM

IPL 2024 RR vs RCB Live Streaming: ಐಪಿಎಲ್ 17ನೇ ಸೀಸನ್​ನ 19ನೇ ಪಂದ್ಯದಲ್ಲಿ ಅಜೇಯ ರಾಜಸ್ಥಾನ ರಾಯಲ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

IPL 2024 RR vs RCB Live Streaming: ರಾಜಸ್ಥಾನಕ್ಕೆ ಆರ್​ಸಿಬಿ ರಾಯಲ್ ಚಾಲೆಂಜ್; ಪಂದ್ಯ ಎಲ್ಲಿ ಗೊತ್ತಾ?
ರಾಜಸ್ಥಾನ- ಆರ್​ಸಿಬಿ
Follow us on

ಐಪಿಎಲ್ 17ನೇ ಸೀಸನ್​ನ (IPL 2024) 19ನೇ ಪಂದ್ಯದಲ್ಲಿ ಅಜೇಯ ರಾಜಸ್ಥಾನ ರಾಯಲ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡವನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಇದುವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, 4 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 1 ಪಂದ್ಯವನ್ನು ಗೆದ್ದಿದ್ದು 3 ಪಂದ್ಯಗಳಲ್ಲಿ ಸೋತಿದೆ. ಪ್ಲೇ ಆಫ್ ಹಂತಕ್ಕೇರಲು ಮುಂಬರುವ ಪಂದ್ಯಗಳಲ್ಲಿ ಆರ್​ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ರಾಜಸ್ಥಾನವನ್ನು ಮಣಿಸುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿ ಆರ್​ಸಿಬಿ ಇದೆ. ಇತ್ತ ತನ್ನ ಗೆಲುವಿನ ಲಯ ಮುಂದುವರೆಸುವ ಗುರಿ ಇಟ್ಟುಕೊಂಡಿರುವ ರಾಜಸ್ಥಾನ, ಆರ್​ಸಿಬಿಯನ್ನು ಮಣಿಸಿದರೆ, ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಉಳಿದಂತೆ ಪಂದ್ಯದ ಬಗ್ಗೆ ಹೆಚ್ಚಿನ ವಿವರಗಳು ಹೀಗಿವೆ

ರಾಜಸ್ಥಾನ ಹಾಗೂ ಬೆಂಗಳೂರು ನಡುವಿನ ಐಪಿಎಲ್ ಪಂದ್ಯ ಯಾವಾಗ ನಡೆಯಲ್ಲಿದೆ?

ಏಪ್ರಿಲ್ 6 ರ ಶನಿವಾರದಂದು ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಪಂದ್ಯ ನಡೆಯಲಿದೆ.

ರಾಜಸ್ಥಾನ ಹಾಗೂ ಬೆಂಗಳೂರು ನಡುವಿನ ಐಪಿಎಲ್ ಪಂದ್ಯ ಎಲ್ಲಿದೆ?

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಪಂದ್ಯ ನಡೆಯಲ್ಲಿದೆ.

ರಾಜಸ್ಥಾನ ಹಾಗೂ ಬೆಂಗಳೂರು ನಡುವಿನ ಐಪಿಎಲ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದೆ. ಹಾಗಾಗಿ ಟಾಸ್ 7 ಗಂಟೆಗೆ ನಡೆಯಲಿದೆ.

ಟಿವಿಯಲ್ಲಿ ರಾಜಸ್ಥಾನ ಹಾಗೂ ಬೆಂಗಳೂರು ನಡುವಿನ ಐಪಿಡಲ್ ಪಂದ್ಯವನ್ನು ಎಲ್ಲಿ ನೋಡಬೇಕು?

ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ರಾಜಸ್ಥಾನ ಹಾಗೂ ಬೆಂಗಳೂರು ನಡುವಿನ ಐಪಿಡಲ್ ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ನೋಡಬೇಕು?

Jio ಸಿನಿಮಾ ಆಪ್‌ನಲ್ಲಿ ರಾಜಸ್ಥಾನ vs ಬೆಂಗಳೂರು ಪಂದ್ಯವನ್ನು ಮೊಬೈಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಉಭಯ ತಂಡಗಳು

ರಾಜಸ್ಥಾನ್ ತಂಡ: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಶುಭಂ ದುಬೆ, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಟಾಮ್ ಕೊಹ್ಲರ್-ಕಾಡ್ಮೋರ್, ರಿಯಾನ್ ಪರಾಗ್, ರೋವ್ಮನ್ ಪೊವೆಲ್, ಕುನಾಲ್ ಸಿಂಗ್ ರಾಥೋರ್, ಆರ್ ಅಶ್ವಿನ್, ಡೊನೊವನ್ ಫೆರೀರಾ, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ಸಂದೀಪ್ ಶರ್ಮಾ, ಕುಲದೀಪ್ ಸೇನ್, ಅಬಿದ್ ಮುಷ್ತಾಕ್ ಮತ್ತು ತನುಷ್ ಕೋಟ್ಯಾನ್.

ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಯಶ್ ದಯಾಳ್, ವಿಜಯ್‌ಕುಮಾರ್ ವೈಶಾಕ್, ರೀಸ್ ಟೋಪ್ಲೆ, ಸ್ವಪ್ನೀಲ್ ಸಿಂಗ್, ಕರ್ಣ್ ಶರ್ಮಾ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಸುಯ್ಯಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮರ್, ವಿಲ್ ಜಾಕ್ವೆಸ್, ಕ್ಯಾಮೆರಾನ್ ಗ್ರೀನ್, ಟಾಮ್ ಕರನ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಸೌರವ್ ಚೌಹಾಣ್ ಮತ್ತು ಅನುಜ್ ರಾವತ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Fri, 5 April 24