
ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಭಿಮಾನಿಗಳು ಕುತೂಹಲದಿಂದ ಪಂದ್ಯಾವಳಿಯ ವೇಳಾಪಟ್ಟಿಗಾಗಿ ಕಾಯುತ್ತಿದ್ದಾರೆ. ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಐಪಿಎಲ್ 2024 ಭಾರತದಲ್ಲಿ ನಡೆಯುತ್ತದೋ ಇಲ್ಲವೋ ಎಂಬ ಅನುಮಾನದ ಛಾಯೆ ಆವರಿಸಿತ್ತು. ಆದರೆ, ಟೂರ್ನಿ ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೇಳಿದ್ದಾರೆ. ಅವರು ಐಪಿಎಲ್‌ನ ತಾತ್ಕಾಲಿಕ ಆರಂಭದ ದಿನಾಂಕವನ್ನು ಸಹ ಬಹಿರಂಗಪಡಿಸಿದ್ದಾರೆ.
ಎಎನ್‌ಐ ಜೊತೆಗಿನ ಸಂವಾದದಲ್ಲಿ, ಅರುಣ್ ಧುಮಾಲ್ ಅವರು ಮಾರ್ಚ್ 22 ರಂದು ಚೆನ್ನೈನಲ್ಲಿ ಐಪಿಎಲ್ 2024 ಪಂದ್ಯಾವಳಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು. ಪಂದ್ಯಾವಳಿಯ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಆರಂಭದಲ್ಲಿ ಘೋಷಿಸಲಾಗುವುದು ಹೇಳಿದ್ದಾರೆ. ಏಕೆಂದರೆ ಇದು ಲೋಕಸಭೆ ಚುನಾವಣೆಯ ದಿನಾಂಕವನ್ನು ಅವಲಂಬಿಸಿರುತ್ತದೆ.
ಒಂದೇ ಓವರ್ನಲ್ಲಿ 27 ರನ್ ಚಚ್ಚಿದ ಪೊಲಾರ್ಡ್; ಬಾಬರ್ ತಂಡಕ್ಕೆ ಹೀನಾಯ ಸೋಲು
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಐಪಿಎಲ್ 2024 ರ ಆರಂಭಿಕ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಆಯೋಜಿಸಲಾಗಿದೆ. ಉಭಯ ತಂಡಗಳು ಐಪಿಎಲ್ 2023 ಸೀಸನ್‌ನ ಫೈನಲ್‌ನಲ್ಲಿ ಮುಖಾಮುಖಿ ಆಗಿತ್ತು. ಹೀಗಾಗಿ ಎರಡು ಬಲಿಷ್ಠ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಈ ಬಾರಿಯ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಎಲ್ಲರೂ ಐಪಿಎಲ್ ಅನ್ನು ಸ್ಥಳಾಂತರಿಸಬಹುದೆಂದು ಹೇಳಿದ್ದರಯ. ಅಲ್ಲದೆ, ದಿನಾಂಕಗಳಲ್ಲಿ ಸ್ವಲ್ಪ ಬದಲಾವಣೆಯಾಗಬಹುದು ಎನ್ನಲಾಗಿತ್ತು. ಆರಂಭದಲ್ಲಿ ಐಪಿಎಲ್ ಮೊದಲ ಹಂತದ ವೇಳಾಪಟ್ಟಿ ಬಹಿರಂಗಗೊಳ್ಳಲಿದೆ. ನಂತರ ಚುನಾವಣಾ ದಿನಾಂಕಗಳ ಪ್ರಕಾರ ಕೊನೆಯ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಆದಾಗ್ಯೂ, ಐಪಿಎಲ್ 2024 ರ ಫೈನಲ್ ಅನ್ನು ಮೇ 26 ರಂದು ನಡೆಸಲಿದ್ದಾರಂತೆ. ಇಂದು ಪ್ರಕಟವಾಗಲಿರುವ ಐಪಿಎಲ್ 2024 ವೇಳಾಪಟ್ಟಿಯಲ್ಲಿ ಲೈವ್ ಆಗಿ ಕೂಡ ವೀಕ್ಷಿಸಬಹುದು.
ಐಪಿಎಲ್ 2024 ವೇಳಾಪಟ್ಟಿಯನ್ನು ಯಾವಾಗ ಪ್ರಕಟಿಸಲಾಗುವುದು?
ಐಪಿಎಲ್ 2024 ರ ವೇಳಾಪಟ್ಟಿಯನ್ನು ಗುರುವಾರ, ಫೆಬ್ರವರಿ 22 ರಂದು ಪ್ರಕಟಿಸಲಾಗುವುದು.
ರಾಂಚಿ ಟೆಸ್ಟ್ ಪಂದ್ಯಕ್ಕೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಬೆದರಿಕೆ
ಐಪಿಎಲ್ 2024 ವೇಳಾಪಟ್ಟಿಯನ್ನು ಯಾವ ಗಂಟೆಗೆ ಪ್ರಕಟಿಸಲಾಗುವುದು?
ಐಪಿಎಲ್ 2024 ರ ವೇಳಾಪಟ್ಟಿಯನ್ನು ಸಂಜೆ 5 ಗಂಟೆಗೆ IST ಕ್ಕೆ ಪ್ರಕಟಿಸಲಾಗುವುದು.
ಐಪಿಎಲ್ 2024 ವೇಳಾಪಟ್ಟಿ ಪ್ರಕಟಣೆಯನ್ನು ಯಾವ ಟಿವಿ ಚಾನೆಲ್ ಪ್ರಸಾರ ಮಾಡುತ್ತದೆ?
ಐಪಿಎಲ್ 2024 ರ ವೇಳಾಪಟ್ಟಿ ಪ್ರಕಟಣೆಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಐಪಿಎಲ್ 2024 ವೇಳಾಪಟ್ಟಿಯ ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡಬಹುದು?
ಐಪಿಎಲ್ 2024 ರ ವೇಳಾಪಟ್ಟಿಯ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ