IPL 2026: ಐಪಿಎಲ್ ವೇಳಾಪಟ್ಟಿ ಪ್ರಕಟ, ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ

IPL 2026 Schedule: ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಕ್ರಿಕೆಟ್ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಸೀಸನ್-19ರ ವೇಳಾಪಟ್ಟಿ ಪ್ರಕಟವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಸೆಣಸಾಡಲಿವೆ. ಇನ್ನು ಐಪಿಎಲ್-2026 ಮೊದಲ ಹಂತದ ವೇಳಾಪಟ್ಟಿ ಕೆಳಗಿನಂತಿದೆ ನೋಡಿ.

IPL 2026: ಐಪಿಎಲ್ ವೇಳಾಪಟ್ಟಿ ಪ್ರಕಟ, ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ
Ipl 2026

Updated on: Mar 11, 2026 | 9:06 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ.  ಐಪಿಎಲ್ ಟೂರ್ನಿಯ 20 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದ್ದು,  ಇದೇ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಇನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಮೊದಲ 20 ದಿನಗಳ ವೇಳಾಪಟ್ಟಿ ಮಾತ್ರ ಬಿಡುಗಡೆ

ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ: IPL 2026: ಇಲ್ಲಿದೆ ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ, ಸೇವ್ ಮಾಡಿಟ್ಟುಕೊಳ್ಳಿ

ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ

ಕಳೆದ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಮಣಿಸಿ ಚಾಂಪಿಯನ್ ಆಗಿತ್ತು. ಆದರೆ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳು ಮೃತಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಐಪಿಎಲ್ ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಆರ್​ಸಿಬಿ ಕೂಡ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಿತ್ತು. ಆದರೆ ಕೆಎಸ್​ಸಿಎ ಹೊಸ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ತಂಡ ಕರ್ನಾಟಕ ಸರ್ಕಾರ ಹಾಗೂ ಆರ್​ಸಿಬಿ ಮ್ಯಾನೇಜ್​ಮೆಂಟ್ ಒಪ್ಪಿಸುವಲ್ಲಿ ಸಫಲವಾಗಿದ್ದು, ಐಪಿಎಲ್​ ಮೂಲಕವೇ ರದ್ದಾಗಿದ್ದ ಕ್ರಿಕೆಟ್​ ಇದೀಗ ಐಪಿಎಲ್ ಮೂಲಕವೇ ಚಿನ್ನಸ್ವಾಮಿಗೆ ಮರಳುತ್ತಿವೆ. ಮಾರ್ಚ್ 28ರಂದು ರಾತ್ರಿ 7.30ಕ್ಕೆ ಉದ್ಘಾಟನಾ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಮೊದಲ ಹಂತದ ವೇಳಾಪಟ್ಟಿ ಇಂತಿದೆ

  • ಮಾರ್ಚ್ 28ಕ್ಕೆ ಬೆಂಗಳೂರಲ್ಲಿ RCB Vs SRH
  • ಮಾರ್ಚ್ 29ಕ್ಕೆ ಮುಂಬೈನಲ್ಲಿ MI Vs KKR
  • ಮಾರ್ಚ್ 30ಕ್ಕೆ ಗುವಾಹಟಿಯಲ್ಲಿ RR vs CSK
  • ಮಾರ್ಚ್ 31ಕ್ಕೆ ಪಂಜಾಬ್​ನಲ್ಲಿ PBKS vs GT
  • ಏಪ್ರಿಲ್ 1ಕ್ಕೆ ಲಖನೌನಲ್ಲಿ LSG vs DC
  • ಏಪ್ರಿಲ್ 2ಕ್ಕೆ ಕೋಲ್ಕತ್ತಾದಲ್ಲಿ KKR vs SRH
  • ಏಪ್ರಿಲ್ 3ಕ್ಕೆ ಚೆನ್ನೈನಲ್ಲಿ CSK vs PBKS
  • ಏಪ್ರಿಲ್ 4ರ ಮಧ್ಯಾಹ್ನ ದೆಹಲಿಯಲ್ಲಿ DC vs MI
  • ಏಪ್ರಿಲ್ 4ರ ಸಂಜೆ ಅಹಮದಾಬಾದ್​ನಲ್ಲಿ GT vs RR
  • ಏಪ್ರಿಲ್ 5ರಂದು ಹೈದರಾಬಾದ್​ನಲ್ಲಿ SRH vs LSG
  • ಏಪ್ರಿಲ್ 5ರಂದು ಬೆಂಗಳೂರಲ್ಲಿ RCB vs CSK
  • ಏಪ್ರಿಲ್ 6ರಂದು ಕೋಲ್ಕತ್ತಾದಲ್ಲಿ KKR vs PBKS
  • ಏಪ್ರಿಲ್ 7 ರಂದು ಗುವಾಹಟಿಯಲ್ಲಿ RR vs MI
  • ಏಪ್ರಿಲ್ 8 ರಂದು ದೆಹಲಿಯಲ್ಲಿ DC vs GT
  • ಏಪ್ರಿಲ್ 9 ರಂದು ಕೊಲ್ಕತ್ತಾದಲ್ಲಿ KKR vs LSG
  • ಏಪ್ರಿಲ್ 10 ರಂದು ಗುವಾಹಟಿಯಲ್ಲಿ RR vs RCB
  • ಏಪ್ರಿಲ್ 11 ರಂದು ಮಧ್ಯಾಹ್ನ ಪಂಜಾಬ್​ನಲ್ಲಿ PBKS vs SRH
  • ಏಪ್ರಿಲ್ 11 ರ ಸಂಜೆ ಚೆನ್ನೈನಲ್ಲಿ CSK vs DC
  • ಏಪ್ರಿಲ್ 12 ರ ಮಧ್ಯಾಹ್ನ ಲಖನೌನಲ್ಲಿ LSG vs GT
  • ಏಪ್ರಿಲ್ 12 ರ ಸಂಜೆ ಮುಂಬೈನಲ್ಲಿ MI vs RCB

Published On - 7:42 pm, Wed, 11 March 26

Follow Us