PBKS vs RCB: ಆರ್​ಸಿಬಿಗೆ ಪಂಜಾಬ್ ಎದುರಾಳಿ; ಬದಲಾದ ಸಮಯದಲ್ಲಿ ನಡೆಯಲಿದೆ ಪಂದ್ಯ

IPL 2026, PBKS vs RCB Match 61: ಐಪಿಎಲ್ 2026 ರ 61ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮೇ 17 ರಂದು ಧರ್ಮಶಾಲಾದಲ್ಲಿ ಮುಖಾಮುಖಿಯಾಗಲಿವೆ. ಕಳೆದ ಫೈನಲ್‌ನ ಪ್ರತೀಕಾರದ ಪಂದ್ಯ ಇದಾಗಿದ್ದು, ಎರಡೂ ತಂಡಗಳಿಗೆ ಪ್ಲೇಆಫ್‌ಗೆ ಪ್ರಮುಖವಾಗಿದೆ. ಅಗ್ರಸ್ಥಾನದಲ್ಲಿರುವ RCB ಗೆಲ್ಲಲು ಯತ್ನಿಸಿದರೆ, 4ನೇ ಸ್ಥಾನದಲ್ಲಿರುವ ಪಂಜಾಬ್ ಸೇಡು ತೀರಿಸಿಕೊಂಡು ರೇಸ್‌ನಲ್ಲಿ ಉಳಿಯಲು ಹೋರಾಡಲಿದೆ. ಪಂದ್ಯ ಮಧ್ಯಾಹ್ನ 3:30 ಕ್ಕೆ ಆರಂಭ.

PBKS vs RCB: ಆರ್​ಸಿಬಿಗೆ ಪಂಜಾಬ್ ಎದುರಾಳಿ; ಬದಲಾದ ಸಮಯದಲ್ಲಿ ನಡೆಯಲಿದೆ ಪಂದ್ಯ
Pbks Vs Rcb

Updated on: May 16, 2026 | 8:11 PM

ಐಪಿಎಲ್ 2026 (IPL 2026) ರ 61 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ನಡುವೆ ನಡೆಯಲಿದೆ. ಕಳೆದ ಐಪಿಎಲ್ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ಈ ಎರಡೂ ತಂಡಗಳು ಆ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಎದುರು ಬದುರಾಗಿವೆ. ಒಂದೆಡೆ ಆರ್​ಸಿಬಿ ಫೈನಲ್​ನಲ್ಲಿ ಸೋಲಿಸಿದಂತೆ ಈ ಪಂದ್ಯದಲ್ಲೂ ಸೋಲಿಸಿ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುವ ಇರಾದೆಯಲ್ಲಿದ್ದರೆ, ಇತ್ತ ಪಂಜಾಬ್ ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಯತ್ನಿಸಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಮೇ 17 ರಂದು ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಎಷ್ಟು ಗಂಟೆಗೆ ಆರಂಭ?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61 ನೇ ಪಂದ್ಯ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ.

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್​​ಸಿಬಿ ಹಾಗೂ ಪಂಜಾಬ್ ನಡುವಿನ ಐಪಿಎಲ್ 2026 ರ 61ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.

ಪಂಜಾಬ್ ಕಿಂಗ್ಸ್ : ಶ್ರೇಯಸ್ ಲಿಯಾನ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಉಮರ್‌ಜಾಯ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಹರ್‌ಪ್ರೀತ್ ಬ್ರಾರ್, ಸೂರ್ಯಾಂಶ್ ಶೆಡ್ಜ್, ವಿಷ್ಣು ವಿನೋದ್ (ವಿಕೆಟ್ ಕೀಪರ್), ಕ್ಸೇವಿಯರ್ ಬಾರ್ಟ್ಲೆಟ್, ಯಶ್ ಠಾಕೂರ್, ಮಿಚೆಲ್ ಓವನ್, ಹರ್ನೂರ್ ಸಿಂಗ್, ಮುಶೀರ್ ಖಾನ್, ಪಾಯಲ್ ಅವಿನಾಶ್, ಮಾರ್ಕೊ ಯಾನ್ಸನ್, ಲಾಕಿ ಫರ್ಗುಸನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us