
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಸಿದ್ಧತೆಗಳು ಶುರುವಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಷನ್ ಹಾಗೂ ರಿಲೀಸ್ ಪಟ್ಟಿಯನ್ನು ಪ್ರಕಟಿಸಿವೆ. ಎಲ್ಲಾ ತಂಡಗಳು ರಿಟೈನ್ ಹಾಗೂ ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಇಂದು (ನವೆಂಬರ್ 17) ಕೊನೆ ದಿನವಾಗಿದ್ದು, ಹೀಗಾಗಿ 10 ಫ್ರಾಂಚೈಸಿಗಳು, ತಮಗೆ ಬೇಕಾದ ಪ್ಲೇಯರ್ಸ್ಗಳನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಕೆಲವು ಆಟಗಾರರನ್ನು ಟೀಂನಿಂದ ಬಿಡುಗಡೆ ಮಾಡಿವೆ. ಅದರಲ್ಲೂ ಮುಖ್ಯವಾಗಿ ಆರ್‌ಸಿಬಿ ಆಲ್‌ರೌಂಡರ್ ಜೇಕಬ್ ಬೆಥೆಲ್, ಮಂಗೇಶ್ ಸೇರಿದಂತೆ ಐವರನ್ನು ರಿಲೀಸ್ ಮಾಡಿದೆ. ಇನ್ನು ಮುಂಬೈ ಘಟಾನುಘಟಿ ಆಟಗಾರರನ್ನು ಬಿಡುಗಡೆ ಮಾಡಿದೆ. ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ಹಾರ್ದಿಕ್ ಪಾಂಡ್ಯ (ಟ್ರೇಡ್) ಸೇರಿದಂತೆ ಹಲವರನ್ನ ಕೈಬಿಟ್ಟಿದೆ.
ಈ ಹಿಂದೆ ನವೆಂಬರ್ 15ರಂದು ಆಟಗಾರರ ರಿಟೆನ್ಷನ್ ಪಟ್ಟಿ ಪ್ರಕಟಿಸಲು ಕೊನೆ ದಿನವಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹೆಚ್ಚುವರಿಯಾಗಿ 48 ಗಂಟೆಗಳ ಕಾಲಾವಕಾಶ ನೀಡಿತ್ತು. ಪ್ರತಿ ತಂಡ 25 ಆಟಗಾರರ ಗರಿಷ್ಠ ಮಿತಿಯೊಳಗೆ ಎಷ್ಟು ಆಟಗಾರರನ್ನು ಬೇಕಾದರೂ ಉಳಿಸಿಕೊಳ್ಳಬಹುದು.
ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ತಂಡಕ್ಕೂ 157 ಕೋಟಿ ರೂ.ಗಳ ವೇತನ ಮಿತಿ ನಿಗದಿಪಡಿಸಲಾಗಿದೆ. ಮುಂಬರುವ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಉದ್ದೇಶದಿಂದ ಎಲ್ಲಾ 10 ಫ್ರಾಂಚೈಸಿಗಳು, ಹಲವು ಪ್ಲೇಯರ್ ಗಳನ್ನು ತಂಡದಿಂದ ಬಿಡುಗಡೆಗೊಳಿಸಿವೆ. ಇದರೊಂದಿಗೆ ಫ್ರಾಂಚೈಸಿಗಳು ಮುಂಬರುವ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿವೆ.
ಐಪಿಎಲ್ 2027ರ ಋತುವಿಗಾಗಿ ಪ್ರತಿ ಫ್ರಾಂಚೈಸಿಗೆ ಒಟ್ಟು 157 ಕೋಟಿ ರೂ.ಗಳ ವೇತನ ಮಿತಿ ನಿಗದಿಪಡಿಸಲಾಗಿದೆ. ಉಳಿಸಿಕೊಳ್ಳಲಾದ ಆಟಗಾರರು ಮತ್ತು ಈಗಾಗಲೇ ಪೂರ್ಣಗೊಂಡಿರುವ ಟ್ರೇಡ್‌ಗಳಿಗಾಗಿ ಖರ್ಚಾದ ಮೊತ್ತವನ್ನು ಈ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಉಳಿದ ಹಣವನ್ನು ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಬಳಸಬಹುದು. ಹೆಚ್ಚು ಹಣ ಉಳಿಸಿಕೊಂಡಿರುವ ತಂಡಗಳು ತಮ್ಮ ತಂಡದ ಅಗತ್ಯಗಳಿಗೆ ಅನುಗುಣವಾಗಿ ಪ್ರಮುಖ ಆಟಗಾರರನ್ನು ಖರೀದಿಸಲು ಹೆಚ್ಚಿನ ಅವಕಾಶ ಹೊಂದಿರುತ್ತವೆ. ಇನ್ನು ತಂಡದ ಹಳೆಯ ಆಟಗಾರರನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸ ಆಟಗಾರರನ್ನು ಖರೀದಿಸಲು ಸಾಕಷ್ಟು ಹಣ ಉಳಿಸಿಕೊಳ್ಳುವ ನಡುವೆಯೂ ಫ್ರಾಂಚೈಸಿಗಳು ಸಮತೋಲನ ಕಾಯ್ದುಕೊಳ್ಳಬೇಕಿದೆ.
ರಿಟೆನ್ಷನ್ ಪ್ರಕ್ರಿಯೆಗೂ ಮುನ್ನವೇ ಆಟಗಾರರ ಟ್ರೇಡ್ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಪಂಜಾಬ್ ಕಿಂಗ್ಸ್ ತಂಡ, ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಅರ್ಷದೀಪ್ ಸಿಂಗ್ ಅವರನ್ನು ಬಿಟ್ಟುಕೊಟ್ಟಿದೆ. ಇನ್ನು ದೆಹಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವೆ ಕೂಡ ಆಟಗಾರರ ವಿನಿಮಯ ನಡೆದಿದೆ. ರಿಷಭ್ ಪಂತ್ ತಮ್ಮ ಹಿಂದಿನ ತಂಡಕ್ಕೆ ಮರಳಿದ್ದು, ಕುಲ್ದೀಪ್ ಯಾದವ್ ಮತ್ತೊಂದು ತಂಡದತ್ತ ತೆರಳಿದ್ದಾರೆ.
ರಿಟೈನ್ ಬಳಿಕ ತಂಡ: ಕೆ.ಎಲ್. ರಾಹುಲ್, ಪೃಥ್ವಿ ಶಾ, ರಿಷಭ್ ಪಂತ್ (ಟ್ರೇಡ್), ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ,ಆಕಿಬ್ ನಬಿ, ಅಕ್ಷರ್ ಪಟೇಲ್,ಡೇವಿಡ್ ಮಿಲ್ಲರ್, ಕೈಲ್ ಜೇಮಿಸನ್, ಲುಂಗಿ ಎನ್‌ಗಿಡಿ, ಮಾಧವ್ ತಿವಾರಿ, ಮುಖೇಶ್ ಕುಮಾರ್, ಸಮೀರ್ ರಿಜ್ವಿ, ತ್ರಿಪುರಾಣ ವಿಜಯ್, ವಿಪ್ರಜ್ ನಿಗಮ್, ಜೀಶನ್ ಅನ್ಸಾರಿ.
ರಿಲೀಸ್ ಬಳಿಕ ಕೆಕೆಆರ್ ತಂಡ: ಮನೀಶ್ ಪಾಂಡೆ, ಕ್ಯಾಮರೂನ್ ಗ್ರೀನ್,ರಿಂಕು ಸಿಂಗ್, ಫಿನ್ ಅಲೆನ್, ಹರ್ಷಿತ್ ರಾಣಾ, ಕಾರ್ತಿಕ್ ತ್ಯಾಗಿ,ಅಂಗ್‌ಕ್ರಿಶ್ ರಘುವಂಶಿ, ಅನುಕೂಲ್ ರಾಯ್,ಪ್ರಶಾಂತ್ ಸೋಲಂಕಿ,ರಮಣದೀಪ್ ಸಿಂಗ್,ರೋವ್ಮನ್ ಪೊವೆಲ್, ಸಾರ್ಥಕ್ ರಂಜನ್, ಸೌರಭ್ ದುಬೆ,ಸುನಿಲ್ ನರೈನ್, ಟಿಮ್ ಸೀಫರ್ಟ್,ವೈಭವ್ ಅರೋರಾ,ವರುಣ್ ಚಕ್ರವರ್ತಿ.
ರಿಟೈನ್ ಬಳಿಕ ಮುಂಬೈ ಟೀಂ: ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್, ಸೂರ್ಯಕುಮಾರ್ ಯಾದವ್,ತಿಲಕ್ ವರ್ಮಾ,ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್,ನಮನ್ ಧೀರ್,ಕ್ವಿಂಟನ್ ಡಿ ಕಾಕ್,ರಘು ಶರ್ಮಾ,ಅರ್ಶ್‌ದೀಪ್ ಸಿಂಗ್ (ಟ್ರೇಡ್ ಇನ್), ಅಶ್ವನಿ ಕುಮಾರ್,ಕಾರ್ಬಿನ್ ಬಾಷ್,ಜಸ್ಪ್ರೀತ್ ಬುಮ್ರಾ, ರಾಜ್ ಅಂಗದ್ ಬಾವಾ,ಶಾರ್ದೂಲ್ ಠಾಕೂರ್,ಶೆರ್ಫೇನ್ ರುದರ್‌ಫೋರ್ಡ್,
ಪ್ಲೇಯರ್ಸ್ ರಿಲೀಸ್ ಬಳಿಕ ಸಿಎಸ್ಕೆ ತಂಡ: ರುತುರಾಜ್ ಗಾಯಕ್ವಾಡ್,ಸಂಜು ಸ್ಯಾಮ್ಸನ್,ಸರ್ಫರಾಜ್ ಖಾನ್, ಶಿವಂ ದುಬೆ ,ಶ್ರೇಯಸ್ ಗೋಪಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಅಕೀಲ್ ಹೊಸೈನ್, ಅನ್ಶುಲ್ ಕಾಂಬೋಜ್, ಆಯುಷ್ ಮ್ಹಾತ್ರೆ,ಡೆವಾಲ್ಡ್ ಬ್ರೆವಿಸ್, ಗುರ್ಜಪ್ನೀತ್ ಸಿಂಗ್,ಜ್ಯಾಕ್ ಎಡ್ವರ್ಡ್ಸ್ ,ಜೇಮಿ ಓವರ್ಟನ್,ಕಾರ್ತಿಕ್ ಶರ್ಮಾ,ಮುಖೇಶ್ ಚೌಧರಿ,ನೂರ್ ಅಹ್ಮದ್,ರಾಹುಲ್ ಚಹಾರ್ ,ರಾಮಕೃಷ್ಣ ಘೋಷ್,ಉರ್ವಿಲ್ ಪಟೇಲ್.
Published On - 9:39 pm, Tue, 17 November 26